»   » ಸುದೀಪ್ ಮತ್ತು ಮಮ್ಮುಟ್ಟಿ ಭೇಟಿಯಾಗಿದ್ದರ ಗುಟ್ಟು ರಟ್ಟು.!

ಸುದೀಪ್ ಮತ್ತು ಮಮ್ಮುಟ್ಟಿ ಭೇಟಿಯಾಗಿದ್ದರ ಗುಟ್ಟು ರಟ್ಟು.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಷ್ಟೇ 'ದಿ ವಿಲನ್' ಶೂಟಿಂಗ್ ಮುಗಿಸಿರುವ ಸುದೀಪ್ 'ಪೈಲ್ವಾನ್' ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ. ಅದರ ಜೊತೆಯಲ್ಲಿ ಹಾಲಿವುಡ್ ಸಿನಿಮಾ 'ರೈಸನ್' ಕೂಡ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಈ ನಡುವೆ ತಮಿಳು ನಟ ಧನುಷ್ ನಿರ್ದೇಶನ ಮಾಡಲಿರುವ ತಮಿಳು ಚಿತ್ರದಲ್ಲಿ ಸುದೀಪ್ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗೆ ಇಷ್ಟೆಲ್ಲಾ ಬ್ಯುಸಿಯಿರುವ ಕಿಚ್ಚ ಮಲಯಾಳಂ ಚಿತ್ರದಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಅದರ ಬಗ್ಗೆ ಯಾವುದೇ ಪುರಾವೆ ಇರಲಿಲ್ಲ.

ಇದೀಗ, ಮಲಯಾಳಂ ಸೂಪರ್ ಸ್ಟಾರ್ ನಟ ಮಮ್ಮುಟಿ ಕನ್ನಡದ ಸೂಪರ್ ಸ್ಟಾರ್ ಸುದೀಪ್ ಅವರನ್ನ ಭೇಟಿ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಭೇಟಿಯ ಉದ್ದೇಶವೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಮಮ್ಮುಟಿ ಚಿತ್ರದಲ್ಲಿ ಕಿಚ್ಚ.?

ಮೂಲಗಳ ಪ್ರಕಾರ ಮಲಯಾಳಂ ನಟ ಮಮ್ಮುಟಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್ ಕೂಡ ಅಭಿನಯಿಸಲಿದ್ದಾರಂತೆ. ಈ ಹಿನ್ನೆಲೆಯಲ್ಲಿ ಮಮ್ಮುಟಿ, ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಫೋಟೋಗಳನ್ನ ಸ್ವತಃ ಸುದೀಪ್ ಪತ್ನಿ ಪ್ರಿಯಾ ಅವರೇ ಪೋಸ್ಟ್ ಮಾಡಿದ್ದಾರೆ.

ಥೈಲ್ಯಾಂಡ್ ನಲ್ಲಿ ಪೈಲ್ವಾನ್ ಆಗಲಿದ್ದಾರೆ ಕಿಚ್ಚ

ದೊಡ್ಡ ಬಜೆಟ್ ಸಿನಿಮಾದಲ್ಲಿ ಕಿಚ್ಚನ ಪಾತ್ರವೇನು?

ಬಿಗ್‌ ಬಜೆಟ್ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದ್ರೆ, ಭಾರತದ ಹಲವು ಭಾಷೆಗಳಿಗೆ ಡಬ್ಬಿಂಗ್ ಆಗಲಿದೆ. ಹಾಗಾಗಿ ಬೇರೆ ಭಾಷೆಗಳ ಸ್ಟಾರ್ ನಟರನ್ನ ಚಿತ್ರದಲ್ಲಿ ನಟಿಸಲು ಕರೆತರಲಾಗುತ್ತಿದೆ. ಸುದೀಪ್‌ ಮಮ್ಮುಟ್ಟಿಯವರನ್ನು ಭೇಟಿಯಾಗಿರುವುದನ್ನ ಗಮನಿಸಿದ್ರೆ ಈ ಚಿತ್ರದಲ್ಲಿ ಕಿಚ್ಚ ನಟಿಸುವುದು ಬಹುತೇಕ ಖಚಿತವೆನ್ನಲಾಗಿದೆ.

ಯೋಧನ ಪಾತ್ರದಲ್ಲಿ ಮಮ್ಮುಟಿ

ಅಂದ್ಹಾಗೆ, 'ಮಮಂಗಮ್' ಚಿತ್ರದಲ್ಲಿ ಮಮ್ಮುಟ್ಟಿ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಸಂಜೀವ್ ಪಿಳ್ಳೈ ಚೊಚ್ಚಲ ಭಾರಿಗೆ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಿಚ್ಚ ಪೈಲ್ವಾನ್ ಆಗಲು ಇವರೇ ಕಾರಣ

ಮಂಗಳೂರಿನಲ್ಲಿ ಚಿತ್ರೀಕರಣ

ಈ ಬಗ್ಗೆ ಸುದೀಪ್ ಯಾವುದೇ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ. ಆದ್ರೆ, ಕೇರಳದ ಪತ್ರಿಕೆಗಳಲ್ಲಿ ಸುದೀಪ್ ಅಭಿನಯಿಸುವುದರ ಬಗ್ಗೆ ಸುದ್ದಿಗಳು ವರದಿಯಾಗಿವೆ. ಅದೇನೆ ಇರಲಿ, ಕಿಚ್ಚ ಸುದೀಪ್ ದಕ್ಷಿಣ ಭಾರತದ ಬಹುಭಾಷಾ ಚಿತ್ರಗಳಲ್ಲಿ ಬೇಡಿಕೆಯ ನಟನಾಗಿರುವುದು ಖುಷಿಯ ವಿಚಾರವೇ.

English summary
Last day, a photo of Mammootty with Kannada superstar Sudeep surfaced online which soon triggered talks about the two acting together in Mamankam. The possibility is certainly high as Sudeep is a well known actor in the South.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada