»   » ಕನ್ನಡದ ಕೋಟ್ಯಾಧಿಪತಿ ನಿರೂಪಣೆಗೆ ಇವರು ಬರ್ತಾರಂತೆ, ಹೌದಾ?

ಕನ್ನಡದ ಕೋಟ್ಯಾಧಿಪತಿ ನಿರೂಪಣೆಗೆ ಇವರು ಬರ್ತಾರಂತೆ, ಹೌದಾ?

By: ಸೋನು ಗೌಡ
Subscribe to Filmibeat Kannada

ಕನ್ನಡದ ಕೋಟ್ಯಾಧಿಪತಿ ಹೊಸ ಸೀಸನ್ ಇನ್ನೇನೂ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಅಂದಹಾಗೆ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ನಿರೂಪಕರ ಹುಡುಕಾಟದಲ್ಲಿ ಸುವರ್ಣ ಚಾನಲ್ ಬ್ಯುಸಿಯಾಗಿದೆ ಅಂತ ನಾವು ಈ ಮೊದಲೇ ನಿಮಗೆ ಇದೇ ಫಿಲ್ಮಿ ಬೀಟಲ್ಲಿ ಹೇಳಿದ್ವಿ ತಾನೆ.

ಈ ಮೊದಲು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಕನ್ನಡದ ಕೋಟ್ಯಾಧಿಪತಿಯಲ್ಲಿ ತಳಕು ಹಾಕಿಕೊಂಡಿತ್ತು. ಚಾನಲ್ ಕೂಡ ಅದೇ ಲೆಕ್ಕಾಚಾರ ಮಾಡಿತ್ತು.['ಕನ್ನಡದ ಕೋಟ್ಯಾಧಿಪತಿ'ಗೆ ಇವರೆಲ್ಲಾ ಎಷ್ಟು ಸಂಭಾವನೆ ಕೇಳಿದ್ರು ಗೊತ್ತಾ?]

ಆದರೆ ಅವರುಗಳು ಅತೀ ಹೆಚ್ಚು ಸಂಭಾವನೆ ಕೇಳಿದ ಕಾರಣ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದೀಗ ಇವರಿಬ್ಬರ ಸಾಲಿನಲ್ಲಿ ಮೂರನೇ ಹೆಸರು ಕೇಳಿ ಬರುತ್ತಿದೆ ಅದು ಯಾರೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ರಿಯಲ್ ಸ್ಟಾರ್ ಉಪೇಂದ್ರ

ಹೌದು ಕನ್ನಡದ ಕೋಟ್ಯಾಧಿಪತಿಯ ಸಾರಥ್ಯ ವಹಿಸಲು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕರೆ ಹೋಗಿದೆ. ಉಪ್ಪಿ ಅವರ ಮಾತಿನ ವೈಖರಿ, ಮ್ಯಾನರಿಸಂ ಇವೆಲ್ಲಾ ಕೋಟ್ಯಾಧಿಪತಿಗೆ ಹೊಸ ಫ್ರೆಶ್ ಫೀಲಿಂಗ್ ಕೊಡಬಲ್ಲದು ಅನ್ನೋದು ಚಾನಲ್ ಅವರ ಲೆಕ್ಕಾಚಾರ. ಆದರೆ ತಮ್ಮ 'ಕಲ್ಪನಾ 2' ಸಿನಿಮಾದಲ್ಲಿ ಬ್ಯುಸಿಯಾಗಿರುವ ಉಪ್ಪಿ ಇದಕ್ಕೆ ಎಸ್ ಅಂತಾರಾ?, ಒಂದು ವೇಳೆ ಎಸ್ ಅಂದ್ರೂ ಕೂಡ ಎಷ್ಟು ಸಂಭಾವನೆ ಡಿಮ್ಯಾಂಡ್ ಮಾಡಬಹುದು, ಅವರ ಬೇಡಿಕೆಗೆ ಚಾನಲ್ ಒಪ್ಪಿಗೆ ಸೂಚಿಸುತ್ತಾ?, ಇವೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಪುನೀತ್ ಯಾಕೆ ಬೇಡ

ಈ ಮೊದಲು ಎಲ್ಲಾ ಸೀಸನ್ ಗಳನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಪುನೀತ್ ಅವರನ್ನು ಚಾನಲ್ ಬೇಡ ಎನ್ನುತ್ತಿದೆ. ಕಾರಣ ಏನಪ್ಪಾ ಅಂದರೆ ಪುನೀತ್ ಅವರು 5 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದರಂತೆ. ಇದನ್ನು ಸುವರ್ಣ ಚಾನಲ್ ನವರಿಗೆ ಪೂರೈಸಲು ಸಾಧ್ಯವಾಗಿಲ್ಲ. ಅಲ್ಲದೇ ಸದ್ಯಕ್ಕೆ ಪುನೀತ್ ಅವರು ಈಗಾಗಲೇ ಎರಡು ಅತ್ಯಂತ ದೊಡ್ಡ ಬಜೆಟ್ ನ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ ಪುನೀತ್ ಈ ಬಾರಿ ಕಾರ್ಯಕ್ರಮ ಮುನ್ನಡೆಸಿಕೊಂಡು ಹೋಗುವುದು ಡೌಟ್.

ರಮ್ಯಾ ಅವರಿಗೆ ಕರೆ ಹೋಗಿತ್ತು

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಈ ಮೊದಲು ಚಾನಲ್ ನವರು ಕಾರ್ಯಕ್ರಮ ನಡೆಸಿಕೊಡುವಂತೆ ದುಂಬಾಲು ಬಿದ್ದಿದ್ದರು. ಆದರೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಲಕ್ಕಿ ಸ್ಟಾರ್ ರಮ್ಯಾ ಕಡೆಯಿಂದ ಬಂದಿಲ್ಲ. ಇನ್ನು ಕೂಡ ಚಾನಲ್ ನವರನ್ನು ರಮ್ಯಾ ಅವರು ವೈಟಿಂಗ್ ಲಿಸ್ಟ್ ನಲ್ಲಿ ಇರಿಸಿದ್ದಾರೆ. ಮುಂದೇನಾಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ.['ಕನ್ನಡದ ಕೋಟ್ಯಾಧಿಪತಿ', ಬೆನ್ನು ಹತ್ತಲಿದ್ದಾರ, ಲಕ್ಕಿ ಸ್ಟಾರ್ ರಮ್ಯಾ?]

ರಾಕಿಂಗ್ ಸ್ಟಾರ್ ಎಷ್ಟು ಡಿಮ್ಯಾಂಡ್ ಮಾಡಿದ್ರು

ಕೋಟ್ಯಾಧಿಪತಿಯ ಹೊಸ ಸೀಸನ್ ಕಾರ್ಯಕ್ರಮವನ್ನು ನಿರೂಪಿಸಲು ರಾಕಿಂಗ್ ಸ್ಟಾರ್ ಯಶ್ ಅವರಲ್ಲಿ ಚಾನಲ್ ನವರು ಕೇಳಿಕೊಂಡು, ಅವರ ಮನೆ ಬಾಗಿಲನ್ನು ತಟ್ಟಿದ್ದರು. ಆದರೆ ಯಶ್ ಅವರು ಬರೋಬ್ಬರಿ 10 ಕೋಟಿ ಸಂಭಾವನೆ ಕೇಳಿದ ಕಾರಣ ಸದ್ಯಕ್ಕೆ ಏನು? ಎತ್ತ ಅಂತ ಇನ್ನು ಖಚಿತಗೊಂಡಿಲ್ಲ.

ಯಾರು ಸಾರಥ್ಯ ವಹಿಸಿಕೊಳ್ಳುತ್ತಾರೆ?

ಒಟ್ನಲ್ಲಿ ಉಪ್ಪಿ, ಯಶ್, ರಮ್ಯಾ ಅಂತ ಈ ಮೂವರು ಸ್ಯಾಂಡಲ್ ವುಡ್ ಸ್ಟಾರ್ ಗಳ ಹೆಸರು ಕೇಳಿ ಬರುತ್ತಿದ್ದು, ಯಾರು ಸಾರಥ್ಯ ವಹಿಸಿಕೊಳ್ತಾರೆ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇಲ್ಲವಾದಲ್ಲಿ ಮತ್ತೆ ಪುನೀತ್ ಅವರೇ ಬರಬಹುದೇ? ಏನೋ ಗೊತ್ತಿಲ್ಲ ನೋಡೋಣ.

English summary
Kannada Actor Upendra will participate in 'Kannada Kotyadipathi'. 'Kannadada Kotyadipathi' reality show which will be telecasted on Suvarna Kannada Channel soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada