For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?

  By ಸೋನು ಗೌಡ
  |

  ಕನ್ನಡ ಚಿತ್ರರಂಗದಲ್ಲಿ 'ರಂಗಿತರಂಗ' ಅನ್ನೋ ಸಿನಿಮಾವೊಂದು, ಕೋಲ್ಮಿಂಚು ಸುಳಿದಂತೆ ಫಳಕ್ಕನೆ ಸುಳಿದು ಹೋದ ನಂತರ ಚಂದನವನ ಸ್ವಲ್ಪಮಟ್ಟಿಗೆ ಎಲ್ಲೆಡೆ ಗುರುತಿಸುವಂತಹ ಸ್ಥಾನದಲ್ಲಿ ನಿಂತಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

  ಅಂದಹಾಗೆ ನಾವು ಇಷ್ಟೊಂದು ಪೀಠಿಕೆ ಹಾಕಲು ಮುಖ್ಯ ಕಾರಣವೇನಪ್ಪಾ ಅಂದ್ರೆ ಭಂಡಾರಿ ಸಹೋದರರ 'ರಂಗಿತರಂಗ' ಚಿತ್ರದಲ್ಲಿ ಇಬ್ಬರು ಮುದ್ದಾದ ಗ್ಲಾಮರ್ ಬೆಡಗಿಯರನ್ನು ನೀವು ಕಂಡಿರಬೇಕಲ್ಲ. ಆ ಬೆಡಗಿಯರಲ್ಲಿ ಒಬ್ಬರಾದ ಅವಂತಿಕಾ ಶೆಟ್ಟಿ ಅವರು ಇದೀಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಮುಂದಿನ ಚಿತ್ರದಲ್ಲಿ ಡ್ಯುಯೆಟ್ ಹಾಡಲಿದ್ದಾರಂತೆ.[ಉಪೇಂದ್ರ ಜೊತೆ ರಾಧಿಕಾನಾ ಇಲ್ಲ ಪ್ರಿಯಾಮಣಿನಾ?]

  ಹೌದು ನಟಿ ಅವಂತಿಕಾ ಶೆಟ್ಟಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ 'ಕಲ್ಪನಾ 2' ಚಿತ್ರದಲ್ಲಿ ಉಪ್ಪಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ 'ಕಾಂಚನಾ 2' ಚಿತ್ರದ ರಿಮೇಕ್ ಚಿತ್ರವಾದ 'ಕಲ್ಪನಾ 2' ಚಿತ್ರದಲ್ಲಿ ಪ್ರಿಯಾಮಣಿ ಹಾಗೂ ಅವಂತಿಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

  ತಮಿಳಿನ 'ಕಾಂಚನಾ' ಭಾಗ ಒಂದು ಹಾಗೂ ಭಾಗ ಎರಡು ಸಿನಿಮಾವನ್ನು ತಮಿಳು ನಟ-ನಿರ್ದೇಶಕ ರಾಘವ ಲಾರೆನ್ಸ್ ಅವರು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನಿರ್ದೇಶಿಸಿ ನಟಿಸಿದ್ದರು. ಇದೀಗ ಕನ್ನಡಕ್ಕೆ ರಿಮೇಕ್ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಆರ್ ಅನಂತ್ ರಾಜು ಅವರ ಪ್ರಕಾರ ತಮಿಳಿನಲ್ಲಿ ನಟಿ ನಿತ್ಯಾ ಮೆನನ್ ಮಾಡಿದ್ದ ಪಾತ್ರವನ್ನು ಪ್ರಿಯಾಮಣಿ ಮಾಡಿದರೆ, ನಟಿ ತಾಪ್ಸಿ ಪನ್ನು ಮಾಡಿದ ಪಾತ್ರಕ್ಕೆ ನಮ್ಮ ರಂಗಿಯ ಬೆಡಗಿ ಅವಂತಿಕಾ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

  ನವೆಂಬರ್ 18 ರಂದು ಚಿತ್ರದ ಮೂಹೂರ್ತ ಸಮಾರಂಭ ನಿಗದಿಗೊಂಡಿದ್ದು, ಅಂದೇ ಚಿತ್ರದ ಶೂಟಿಂಗ್ ಕೂಡ ಆರಂಭಿಸಲು ಚಿತ್ರತಂಡ ನಿರ್ದರಿಸಿದೆ.

  ಈಗಾಗಲೇ ಹಲವಾರು ಜಾಹೀರಾತು ಹಾಗೂ ಶಾರ್ಟ್ ಫಿಲ್ಮ್ ಗಳಲ್ಲಿ ನಟಿಸುತ್ತಿರುವ ನಟಿ ಅವಂತಿಕಾ ಅವರು ಸದ್ಯಕ್ಕೆ ಒಂದು ಇರಾನಿಯನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.[ಉಪ್ಪಿ ಬೇಕಾ, ಯಶ್ ಸಾಕಾ.? ರಾಧಿಕಾ ಪಂಡಿತ್ ತಲೆಯಲ್ಲಿ ಹುಳ]

  ಒಟ್ನಲ್ಲಿ ಸಿಲ್ವರ್ ಸ್ಕ್ರೀನ್ ಗೆ ಕಾಲಿಟ್ಟಾಗಿನಿಂದ ಅವಂತಿಕಾ ಅವರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದು, ಇದೀಗ ಸ್ಯಾಂಡಲ್ ವುಡ್ ದೊಡ್ಡ ಸ್ಟಾರ್ ನಟರೊಂದಿಗೆ ಅಭಿನಯಿಸುವ ಅವಕಾಶ ಕೂಡ ದೊರೆತಿರುವುದರಿಂದ ಈ ನಟಿ ಫುಲ್ ಖುಷ್ ಆಗಿದ್ದಾರೆ .

  English summary
  Kannada Actress Avantika Shetty, after the stupendous success of 'Rangitaranga', will soon act with Upendra in Kalpana 2, A remake of a Tamil hit movie 'Kanchana 2'. The movie is directed by R Ananth Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X