»   » ಮುಂದಿನ ಚಿತ್ರದಲ್ಲಿ ಯಶ್ ಜೊತೆ ರಚಿತಾ ರಾಮ್ ಡ್ಯುಯೆಟ್?

ಮುಂದಿನ ಚಿತ್ರದಲ್ಲಿ ಯಶ್ ಜೊತೆ ರಚಿತಾ ರಾಮ್ ಡ್ಯುಯೆಟ್?

Posted By:
Subscribe to Filmibeat Kannada

ಸದ್ಯಕ್ಕೆ ಚಂದನವನದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

'ಮಾಸ್ಟರ್ ಪೀಸ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ಮಾಪಕ ಕೆ.ಮಂಜು ಅವರ ನಿರ್ಮಾಣದಲ್ಲಿ, ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಮಾಂಜಾ'(ಇನ್ನೂ ಟೈಟಲ್ ಪಕ್ಕಾ ಆಗಿಲ್ಲ) ಚಿತ್ರದ ಶೂಟಿಂಗ್ ನಲ್ಲಿ ಯಶ್ ಅವರು ಬ್ಯುಸಿಯಾಗಿದ್ದಾರೆ.['ಅವರು' ನನ್ನ ತಾಯಿಯ ಇನ್ನೊಬ್ಬ ಮಗನಿದ್ದಂತೆ: ಯಶ್ ಯಾರಿಗ್ಹೇಳಿದ್ದು]


Kannada Actress Rachita Ram in Yash's next 'KGF'

ಇದರ ಜೊತೆ-ಜೊತೆಗೆ ರಾಕಿಂಗ್ ರಾಮಾಚಾರಿ ಯಶ್ ಅವರು ಬಿಗ್ ಬಜೆಟ್ ಇರುವ 'ಕೆ.ಜಿ.ಎಫ್' ಎಂಬ ಇನ್ನೊಂದು ಹೊಸ ಪ್ರಾಜೆಕ್ಟ್ ನಲ್ಲೂ ಬ್ಯುಸಿಯಾಗಿದ್ದು, ಆ ಚಿತ್ರದ ಬಗ್ಗೆಯೂ ಅಭಿಮಾನಿಗಳಲ್ಲಿ ಸ್ವಲ್ಪ ನಿರೀಕ್ಷೆ ಹೆಚ್ಚಾಗೇ ಇದೆ.


Kannada Actress Rachita Ram in Yash's next 'KGF'

ಈಗಾಗಲೇ 'ಕೆ.ಜಿ.ಎಫ್' ಚಿತ್ರದ ಪೂರ್ವ ತಯಾರಿಗಳು ನಡೆಯುತ್ತಿದ್ದು, ಚಿತ್ರಕ್ಕೆ ನಾಯಕಿ ಯಾರಾಗಿರಬಹುದು ಎಂಬುದು ಸದ್ಯಕ್ಕೆ ಎಲ್ಲರಲ್ಲಿ ಇರುವ ಕುತೂಹಲ.


Kannada Actress Rachita Ram in Yash's next 'KGF'

ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ 'ಕೆ.ಜಿ.ಎಫ್' ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 'ಬುಲ್ ಬುಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ರಚಿತಾ ರಾಮ್ ಅವರು ಇದೀಗ ಬಹು ಬೇಡಿಕೆಯುಳ್ಳ ನಟಿ.[ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ]


Kannada Actress Rachita Ram in Yash's next 'KGF'

ಚಿತ್ರರಂಗಕ್ಕೆ ಕಾಲಿಟ್ಟ ಸ್ವಲ್ಪ ಸಮಯದಲ್ಲೇ ಸ್ಟಾರ್ ನಟರಾದ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶ್ರೀಮುರಳಿ, ದರ್ಶನ್ ಮುಂತಾದವರ ಜೊತೆ ನಟಿಸಿರುವ ರಚಿತಾ ರಾಮ್ ಇದೀಗ ಯಶ್ ಜೊತೆ ಮಿಂಚಲು ತಯಾರಿ ನಡೆಸಿದರೂ ಅಚ್ಚರಿ ಇಲ್ಲ.

English summary
Kannada Actress Rachita Ram lead role in Kannada Actor Yash's upcoming film 'KGF'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada