»   » ಶಿವಣ್ಣನ ಜೊತೆ ಗುಳಿಕೆನ್ನೆ ಬೆಡಗಿ ತೋರಿಸ್ತಾರಾ 'ಖದರ್'.?

ಶಿವಣ್ಣನ ಜೊತೆ ಗುಳಿಕೆನ್ನೆ ಬೆಡಗಿ ತೋರಿಸ್ತಾರಾ 'ಖದರ್'.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲಕ್ಕಿ ಗರ್ಲ್ ರಚಿತಾ ರಾಮ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಡಿಂಪಲ್ ಕ್ವೀನ್ ನಟಿಸಿದ ಸಿನಿಮಾ ಎಲ್ಲಾ ಹಿಟ್ ಲಿಸ್ಟ್ ಗೆ ಸೇರುತ್ತಿವೆ.

ಸದಾ ಜನಪ್ರಿಯ ನಟರ ಜೊತೆ ತೆರೆಯ ಮೇಲೆ ಮಿಂಚಿರುವ ನಟಿ ರಚಿತಾ ರಾಮ್ ಅವರು ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ 'ಖದರ್' ನಲ್ಲಿ ಇದೇ ಮೊದಲ ಬಾರಿಗೆ ನಾಯಕಿ ನಟಿಯಾಗಿ ಮಿಂಚಲು ತಯಾರಾಗುತ್ತಿದ್ದಾರೆ ಎನ್ನಲಾಗುತ್ತಿದೆ.[ಕನ್ನಡದ ಫೈವ್ ಸ್ಟಾರ್ ಚೆಲುವೆ ಇವಳು.. ರಚಿತಾ ರಾಮ್]

Kannada Actress Rachita Ram's next movie with Actor Shiva Rajkumar

ನಿರ್ಮಾಪಕ ಕೆ.ಎ ಸುರೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಖದರ್' ಚಿತ್ರಕ್ಕೆ ನಿರ್ದೇಶಕ ಕುಮಾರ್ ಎಸ್ ರಾಜ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ರಾಜ್ ಅವರು 'ಗೋವಿಂದಾಯ ನಮಃ' ಚಿತ್ರಕ್ಕೆ ಸಹ ನಿರ್ದೇಶಕರಾಗಿ ದುಡಿದಿದ್ದು, ಇದೀಗ 'ಖದರ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.

'ಶಿವಲಿಂಗ' ಚಿತ್ರದ ಯಶಸ್ಸಿನಲ್ಲಿರುವ ಸೆಂಚುರಿ ಸ್ಟಾರ್ ಶಿವಣ್ಣ ಅವರು ಮತ್ತೊಮ್ಮೆ ತೆರೆಯ ಮೇಲೆ 'ಖದರ್' ತೋರಲು ಸಜ್ಜಾಗುತ್ತಿದ್ದಾರೆ.[ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ]

Kannada Actress Rachita Ram's next movie with Actor Shiva Rajkumar

ಇನ್ನು 'ಶಿವಲಿಂಗ' 100 ದಿನ ಪೂರೈಸಿದ ಸಂಭ್ರಮದ ಸಮಾರಂಭವನ್ನು ಜೂನ್ 19 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಗ್ರ್ಯಾಂಡ್ ಆಗಿ ಆಚರಣೆ ಮಾಡಲಿದ್ದು, ಆ ದಿನ 'ಖದರ್' ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಮಾಪಕ ಕೆ.ಎ ಸುರೇಶ್ ಅವರು ಪ್ಲ್ಯಾನ್ ಮಾಡಿದ್ದಾರೆ.[ಈ ವರ್ಷದ ಅತ್ತ್ಯುತ್ತಮ ನಾಯಕಿ ಯಾರು?]

Kannada Actress Rachita Ram's next movie with Actor Shiva Rajkumar

ಈಗಾಗಲೇ 'ಖದರ್' ಚಿತ್ರದ ಬಗ್ಗೆ ನಟಿ ರಚಿತಾ ರಾಮ್ ಅವರ ಜೊತೆ ಮಾತು-ಕತೆ ಅಂತಿಮವಾಗಿದ್ದು, ಇನ್ನು ಅಧೀಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. 'ಬುಲ್ ಬುಲ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ನಟಿ ರಚಿತಾ ರಾಮ್ ಅವರು ತದನಂತರ 'ಅಂಬರೀಶ', 'ರನ್ನ', 'ರಥಾವರ' ಹಾಗೂ 'ಚಕ್ರವ್ಯೂಹ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

English summary
After a good response in Actress Rachita Ram's latest film 'Chakravyuha' she has bagged a role in Kannada Actor Shiva Rajkumar's Kannada Movie 'Khadar'. The movie is produced by KA Suresh and Directed by Kumar S Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada