»   » 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಬಗ್ಗೆ ಬ್ರೇಕಿಂಗ್ ನ್ಯೂಸ್!

'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಬಗ್ಗೆ ಬ್ರೇಕಿಂಗ್ ನ್ಯೂಸ್!

By: ಹರಾ
Subscribe to Filmibeat Kannada

ಬ್ರೇಕಿಂಗ್ ನ್ಯೂಸ್ ಅಂದ ತಕ್ಷಣ, ನೆಗೆಟಿವ್ ಯೋಚನೆ ಮಾಡಲೇ ಬೇಡಿ. ನಾವು ಹೇಳುವುದಕ್ಕೆ ಹೊರಟಿರುವುದು ರಚಿತಾ ರಾಮ್ ವೃತ್ತಿ ಬದುಕಿನ ಬಗ್ಗೆ ಮಾತ್ರ!

'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಟಾಲಿವುಡ್ ಗೆ ಹಾರುವುದಕ್ಕೆ ತಯಾರಾಗಿದ್ದಾರಂತೆ.! ['ಬುಲ್ ಬುಲ್' ಬೆಡಗಿ ರಚಿತಾಗೆ ಇರುವ ಏಕೈಕ ಆಸೆ]

kannada-actress-rachita-ram-to-make-tollywood-debut

'ಬುಲ್ ಬುಲ್', 'ರನ್ನ', 'ದಿಲ್ ರಂಗೀಲಾ', 'ಅಂಬರೀಶ', 'ರಥಾವರ' ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಜೆಟ್ ಚಿತ್ರಗಳ ಮೂಲಕ ಸಖತ್ ಸೌಂಡ್ ಮಾಡಿದ್ದ ರಚಿತಾ ರಾಮ್ ಗೆ ಟಾಲಿವುಡ್ ನಿಂದ ಬುಲಾವ್ ಬಂದಿದೆ.

ಮೂಲಗಳ ಪ್ರಕಾರ, ರಚಿತಾ ರಾಮ್ ಕೈಯಲ್ಲಿ ಸದ್ಯ ಮೂರು ತೆಲುಗು ಸಿನಿಮಾಗಳ ಕಥೆ ಇದೆ. ಒಪ್ಪಿಕೊಳ್ಳುವುದೋ, ಬೇಡವೋ ಅಂತ ರಚಿತಾ ಇನ್ನೂ ಯೋಚನೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ರಚಿತಾ ಎಲ್ಲೂ ಮಾತನಾಡುತ್ತಿಲ್ಲ. [ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್]

ಸದ್ಯಕ್ಕೆ 'ಚಕ್ರವ್ಯೂಹ' ಚಿತ್ರದಲ್ಲಿ ಬಿಜಿಯಾಗಿರುವ ರಚಿತಾ ಒಂದ್ವೇಳೆ ಮನಸ್ಸು ಮಾಡಿದ್ರೆ, ಟಾಲಿವುಡ್ ಗೆ ಹಾರುವುದು ಕನ್ಫರ್ಮ್. ಹಾಗೇನಾದರೂ, ರಚಿತಾ ಡಿಸೈಡ್ ಮಾಡಿದ್ರೆ, ನಿಮಗೆ ಸುದ್ದಿ ಮುಟ್ಟಿಸುತ್ತೇವೆ.

English summary
According to the grapevine, Kannada Actress Rachita Ram has bagged offers from Tollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada