»   » 'ಕನ್ನಡದ ಕೋಟ್ಯಾಧಿಪತಿ', ಬೆನ್ನು ಹತ್ತಲಿದ್ದಾರ, ಲಕ್ಕಿ ಸ್ಟಾರ್ ರಮ್ಯಾ?

'ಕನ್ನಡದ ಕೋಟ್ಯಾಧಿಪತಿ', ಬೆನ್ನು ಹತ್ತಲಿದ್ದಾರ, ಲಕ್ಕಿ ಸ್ಟಾರ್ ರಮ್ಯಾ?

By: ಸೋನು ಗೌಡ
Subscribe to Filmibeat Kannada

ಮೋಹಕ ತಾರೆ ರಮ್ಯಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಅಂತ, ಅಂತೆ-ಕಂತೆಗಳ ಸುದ್ದಿಯಾದ ಬೆನ್ನಲ್ಲೇ, ಹೊಸದಾಗಿ ಬಂದ ಸುದ್ದಿ ಏನಪ್ಪಾ ಅಂದ್ರೆ, ಲಕ್ಕಿ ಸ್ಟಾರ್ ರಮ್ಯಾ ಅವರು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅಂತ ಸುದ್ದಿ ಹಬ್ಬಿದೆ.

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಹುಚ್ಚ ವೆಂಕಟ್ ಅವರ ಡ್ರಾಮಾ ನಡೆಯುತ್ತಿದ್ದ ಸಂದರ್ಭದಲ್ಲಿ ನಟಿ ರಮ್ಯಾ ಅವರ ಹೆಸರು ಬಿಗ್ ಬಾಸ್ ಮನೆಯಲ್ಲಿ ತಳಕು ಹಾಕಿಕೊಂಡಿತ್ತು.[ವಿಭಿನ್ನವಾಗಿ ಬರ್ತ್ ಡೇ ಆಚರಿಸ್ತಾರಂತೆ, ಮೋಹಕ ತಾರೆ..!]

Kannada Actress Ramya going 'Bigg Boss' or 'Kannadada Kotyadhipathi'

ನಟಿ ರಮ್ಯಾ ಅವರು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲವಾದರೂ, ಬಿಗ್ ಬಾಸ್ ಕಾರ್ಯಕ್ರಮದ ರೂವಾರಿ ಪರಮೇಶ್ ಗುಂಡ್ಕಲ್ ಅವರು 'ಇಲ್ಲ ರಮ್ಯಾ ಅವರು ಬಿಗ್ ಬಾಸ್ ಮನೆಗೆ ಬರುತ್ತಿಲ್ಲ' ಎಂದು ಹೇಳಿಕೆ ನೀಡುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.

ಇದೀಗ ಸದ್ಯಕ್ಕೆ ಗಾಂಧಿನಗರದಲ್ಲಿ ಸುದ್ದಿಯಾಗಿರುವ ಪ್ರಕಾರ ನಟಿ ರಮ್ಯಾ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಡೆಸಿ ಕೊಡುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಪ್ರಚಾರವಾಗಿದೆ.[ಚಿತ್ರಗಳು: ಆಕರ್ಷಕ ಲುಕ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ಕ್ವೀನ್.!]

Kannada Actress Ramya going 'Bigg Boss' or 'Kannadada Kotyadhipathi'

ಆದರೆ ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಇಷ್ಟೆಲ್ಲಾ ಅಂತೆ-ಕಂತೆಗಳ ಸುದ್ದಿ ಹರಿದಾಡುತ್ತಿದ್ದರೂ ಮೋಹಕ ತಾರೆ ರಮ್ಯಾ ಅವರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿದ್ದು, ಸದ್ಯಕ್ಕೆ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಅಭಿಮಾನಿಗಳನ್ನು ಭೇಟಿಯಾಗುವ ಸಂಭ್ರಮದಲ್ಲಿದ್ದಾರೆ.

ಒಟ್ನಲ್ಲಿ ಈ ಎಲ್ಲಾ ಗಾಸಿಪ್ ಗಳಿಗೆ ಸ್ವತಃ ನಟಿ ರಮ್ಯಾ ಅವರೇ ತೆರೆ ಎಳೆಯಬೇಕಿದೆ. ಈಗಾಗಲೇ ಎದ್ದಿರುವ ಅಂತೆ-ಕಂತೆಗಳ ಸುದ್ದಿಯಲ್ಲಿ ಲಕ್ಕಿ ಸ್ಟಾರ್ ರಮ್ಯಾ ಯಾವುದನ್ನು ನಿಜವಾಗಿಸುತ್ತಾರೆ?, ಯಾವುದನ್ನು ಸುಳ್ಳಾಗಿಸುತ್ತಾರೆ?, ಅಥವಾ ಎರಡು ಸುದ್ದಿಗಳನ್ನು ನಿಜವಾಗಿಸುತ್ತಾರ?, ಸುಳ್ಳಾಗಿಸುತ್ತಾರ?. ಅಂತ ಕಾದು ನೋಡಬೇಕು.

English summary
Sandalwood Popular Actress Ramya going 'Bigg Boss' or 'Kannadada Kotyadhipathi'. Latest report says that Actress Ramya going to 'Bigg Boss Kannada 3' reality show or 'Kannadada Kotyadhipathi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada