ಬ್ರೇಕಪ್ ಸುದ್ದಿ ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು.!
Recommended Video

ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಕಳೆದ ವಾರವಷ್ಟೇ ಬ್ರೇಕಿಂಗ್ ನ್ಯೂಸ್ ಆಗಿತ್ತು. ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು ಕೇಳಿಬರುತ್ತಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ, ನಟಿ ರಶ್ಮಿಕಾ ಮಂದಣ್ಣ 'ವೃತ್ರ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗಾಗಲೇ 'ವೃತ್ರ' ಚಿತ್ರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಕೂಡ ಮಾಡಿದ್ದರು. 'ಯಜಮಾನ' ಶೂಟಿಂಗ್ ಬಳಿಕ 'ವೃತ್ರ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಚಾಲನೆ ಕೊಡಬೇಕಿತ್ತು. ಆದ್ರೆ, ಈ ಚಿತ್ರದಿಂದ ನಟಿ ರಶ್ಮಿಕಾ ಹೊರಬಂದಿದ್ದಾರಂತೆ ಎಂಬ ಅಂತೆ-ಕಂತೆ ಗಾಂಧಿನಗರದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಎಲ್ಲರ ಕಿವಿಗೂ ಬಡಿಯುತ್ತಿದೆ.
'ವೃತ್ರ' ಚಿತ್ರಕ್ಕೆ ಗೌತಮ್ ಅಯ್ಯರ್ ನಿರ್ದೇಶಕ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ತನಿಖಾ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದ್ರೀಗ, 'ವೃತ್ರ' ಚಿತ್ರದಲ್ಲಿ ರಶ್ಮಿಕಾ ನಟಿಸುವ ಹಾಗೆ ಕಾಣುತ್ತಿಲ್ಲ.

ಸದ್ಯ ಟಾಲಿವುಡ್ ನಲ್ಲಿಯೇ ರಶ್ಮಿಕಾ ಬಿಜಿಯಿದ್ದಾರೆ. ಮುಂದಿನ ವರ್ಷಾರಂಭದವರೆಗೂ ಅವರು ಫ್ರೀ ಇಲ್ಲ. ಹೀಗಾಗಿ ರಶ್ಮಿಕಾರನ್ನ ಬಿಟ್ಟು ಬೇರೆ ನಾಯಕಿಯ ಹುಡುಕಾಟದಲ್ಲಿ 'ವೃತ್ರ' ಚಿತ್ರತಂಡ ತೊಡಗಿದ್ಯಂತೆ.
ಅಂದ್ಹಾಗೆ, 'ವೃತ್ರ' ಚಿತ್ರದಿಂದ ಹೊರಬಂದಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಆಗಲಿ, ಅಥವಾ ಚಿತ್ರತಂಡ ಆಗಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆದ್ರೆ, ಈ ಗಾಸಿಪ್ ಮಾತ್ರ ಗಾಂಧಿನಗರದಲ್ಲಿ ಹಬ್ಬಿದೆ.


Click it and Unblock the Notifications











