For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ, ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ತಾರಾ?

  By ಸೋನು ಗೌಡ
  |

  ಕನ್ನಡದಲ್ಲಿ ಜನಮನ್ನಣೆ ಗಳಿಸಿದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಅನ್ನೋವಷ್ಟರಲ್ಲಿ ಒಂದು ಹಾಟ್ ನ್ಯೂಸ್ ಹೊರಬಿದ್ದಿದೆ.

  ಅದೇನಪ್ಪಾ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯರ ಸಾಲಿಗೆ ಸೇರಿಸಬಹುದಾದ ಖ್ಯಾತ ನಟಿ 'ಕರ್ಪೂರದ ಗೊಂಬೆ' ಚಿತ್ರದಲ್ಲಿ ಮನಸೂರೆಗೊಳ್ಳುವ ನಟನೆ ಮಾಡಿದ ನಟಿ ಶ್ರುತಿ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಅಂತ ಅಲ್ಲಲ್ಲಿ ಗಾಳಿ ಸುದ್ದಿ ಹಬ್ಬಿದೆ.[ಮನೆ ಒಳಗಡೆ ಕಿಚ್ಚು, ಹೊರಗಡೆ ನಿಮ್ಮ ಕಿಚ್ಚ]

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಾರ್ಥಿಗಳಲ್ಲಿ ಸ್ಯಾಂಡಲ್ ವುಡ್ ನ ಹಲವಾರು ನಟ-ನಟಿಯರ ಹೆಸರುಗಳು ಹಾಗೆ ಗಾಂಧಿನಗರದಲ್ಲಿ ಹಾದು ಹೋಗಿದ್ದು, ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಆ 15 ಖಿಲಾಡಿಗಳ ಪಟ್ಟಿಯಲ್ಲಿ ಖ್ಯಾತ ನಟಿ ಶ್ರುತಿ ಅವರ ಹೆಸರು ಕೂಡ ಕೇಳಿ ಬಂದಿದೆ.

  ಹಿಂದಿನ ಕಾಲದಿಂದಲೂ ಡಿ-ಗ್ಲಾಮರಸ್ ಪಾತ್ರಗಳ ಮೂಲಕ ಕನ್ನಡ ಸಿನಿಪ್ರೀಯರ ಮನಗೆದ್ದಿರುವ ಶ್ರುತಿ ಅವರು ಹಲವಾರು ಸಿನಿಮಾಗಳಲ್ಲಿ ತಮ್ಮ ಎಮೋಷನಲ್ ಅಭಿನಯದ ಮೂಲಕ ಹಲವಾರು ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.[ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

  ನಿರ್ದೇಶಕ ಮಹೆಂದರ್ ಜೊತೆ 'ಹಂಸವೇ ಹಂಸವೇ ಹಾಡು ಬಾ' ಅಂತ ಡ್ಯುಯೆಟ್ ಹಾಡಿ ಆ ನಂತರ ಅವರೊಂದಿಗೆ ತಾಳಿ ಕಟ್ಟಿಸಿಕೊಂಡು ಸಂಸಾರದ ರಾಗ ಹಾಡಿದ್ದು, ತದನಂತರ ಸುಮಾರು 11 ವರ್ಷಗಳ ನಂತರ ಅವರ ಸಂಸಾರಕ್ಕೆ ವಿಚ್ಛೇದನದ ಮೂಲಕ ತೆರೆ ಬಿದ್ದಿದ್ದು, ಆಮೇಲೆ 2013 ರಲ್ಲಿ ನಿರ್ದೇಶಕ ಚಕ್ರವರ್ತಿ ಅವರೊಂದಿಗೆ ಮತ್ತೆ ವಿವಾಹ ಇದೆಲ್ಲಾ ನಟಿ ಶ್ರುತಿ ಅವರದು ಹಳೆ ಕಥೆ ಅಲ್ವಾ.

  ಇದೀಗ ಹೊಸ ಕಥೆ ಅಂದ್ರೆ ಸೆನ್ಸೇಷನಲ್ ನಟಿ ಶ್ರುತಿ ಅವರು ಬಿಗ್ ಬಾಸ್ ಶೋ ನಲ್ಲಿ ಕಾಣಿಸಿಕೊಳ್ತಾರ, ಅಂತ. ಈ ಸುದ್ದಿ ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲರ ಎದುರು ಬಹಿರಂಗವಾಗಲಿದೆ.

  ಒಂದು ವೇಳೆ ನಟಿ ಶ್ರುತಿ ಅವರು ಬಿಗ್ ಬಾಸ್ ಮನೆ ಕದ ತಟ್ಟಿದರೆ ಶ್ರುತಿ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಆಗೋದು ಗ್ಯಾರಂಟಿ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ನಮ್ಮ ಪುಟ್ಟಕ್ಕ ಕಮಾಲ್ ಮಾಡ್ತಾರ, ಅಂತ ಕಾದು ನೋಡೋಣ.[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

  ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರು ಯಾರು ಇರ್ತಾರೆ ಎಂದು ವೀಕ್ಷಕರಲ್ಲಿ ಕಾಡುವ ಯಕ್ಷ ಪ್ರಶ್ನೆಗೆ ಅಕ್ಟೋಬರ್ 25 ರಂದು ನಡೆಯುವ 'ಬಿಗ್ ಬಾಸ್ 3' ಗ್ರ್ಯಾಂಡ್ ಒಪನ್ನಿಂಗ್ ಶೋ ನಲ್ಲಿ ಉತ್ತರ ದೊರೆಯಲಿದೆ. ಅಲ್ಲಿಯವರೆಗೂ ಆ ಕುತೂಹಲ ಹಾಗೆ ಇರಲಿ ನೀವೇನಂತೀರಾ?.

  English summary
  The girl next door of earlier days, actress Shruthi to enter Bigg Boss 3. According to the latest news, Shruthi is now a contestant of Bigg Boss 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X