For Quick Alerts
ALLOW NOTIFICATIONS
For Daily Alerts

ಶ್ವೇತಾ ಪಂಡಿತ್ ಗೆ ವೈಟರ್ ನಿಂದ ಸಕತ್ ಕಾಟ

By ಜೇಮ್ಸ್ ಮಾರ್ಟಿನ್

ಕೆಫೆ ಕಾಫಿ ಡೇನಲ್ಲಿ ವೈಟರ್ ಆಗಿರುವ ವ್ಯಕ್ತಿಯೊಬ್ಬ ನನಗೆ ಸಕತ್ ಕಾಟ ಕೊಡುತ್ತಿದ್ದಾನೆ. ಇದು ಅವನ ಮೊಬೈಲ್ ಸಂಖ್ಯೆ. ಇದು ಅವನ ಫೇಸ್ ಬುಕ್ ಪುಟ. ನನಗೂ ಸಾಕಾಗಿ ಹೋಗಿದೆ. ಇವತ್ತು ಪೊಲೀಸರಿಗೆ ದೂರು ನೀಡುತ್ತಿದ್ದೇನೆ.

ಆ ವ್ಯಕ್ತಿ ಕಾಟ ಅಲ್ಲದೆ ಬೆದರಿಕೆ ನೀಡುತ್ತಿದ್ದಾನೆ. ನನ್ನ ಕಾಲು ಮುರಿಯುತ್ತಾನಂತೆ. ದಯವಿಟ್ಟು ನನಗೆ ಸಹಾಯ ಮಾಡಿ. ಈ ರೀತಿ ಪ್ರಕರಣಗಳನ್ನು ಪೊಲೀಸ್ ಠಾಣೆ ತನಕ ತೆಗೆದುಕೊಂಡು ಹೋದರೆ ಯುವತಿಯ ಮಾನ ಮರ್ಯಾದೆ ಏನು ಹಾಳಾಗುವುದಿಲ್ಲ.

Post by Shweta Pandit.

ಇಂಥ ಸಂದರ್ಭದಲ್ಲಿ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಬೇಕು. ನನ್ನ ಜತೆ ನೀವೆಲ್ಲರೂ ಇದ್ದೀರಿ ಎಂಬ ಭರವಸೆ ನನಗಿದೆ ಎಂದು ಶ್ವೇತಾ ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.

ನಟಿ ಶ್ವೇತಾ ಪಂಡಿತ್ ಫ್ಯಾನ್ ನಿಂದ ಕಿರುಕುಳ

ನಟಿ ಶ್ವೇತಾ ಪಂಡಿತ್ ಫ್ಯಾನ್ ನಿಂದ ಕಿರುಕುಳ

ತನಗೆ ಕಾಟಕೊಡುತ್ತಿರುವ ವ್ಯಕ್ತಿ ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಬೆದರಿಕೆ ಹಾಕಿದ. ಆತನ ಅಕೌಂಟ್ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂದು ಈ ರೀತಿ ಪೋಸ್ಟ್ ಮಾಡಿದ್ದೇನೆ ಎಂದು ಶ್ವೇತಾ ಹೇಳಿಕೊಂಡಿದ್ದಾರೆ.

ನಟಿ ಶ್ವೇತಾ ಕಾಟಕೊಟ್ಟವ ಲಕ್ಕಿ ವಿನಿ

ನಟಿ ಶ್ವೇತಾ ಕಾಟಕೊಟ್ಟವ ಲಕ್ಕಿ ವಿನಿ

ಲಕ್ಕಿ ವಿನಿ ಫೇಸ್ ಬುಕ್ ಪ್ರೊಫೈಲ್ ಪ್ರಕಾರ ಆತ 2013ರ ನವೆಂಬರ್ ನಿಂದ ಕೆಫೆ ಕಾಫಿ ಡೇ ನಲ್ಲಿ ಟ್ರೈನಿಯಾಗಿದ್ದಾನೆ. ಚಿಕ್ಕಮಗಳೂರಿನ ಎಸ್ ವಿ ಜಿಎಚ್ ವಿಟಿಸಿಯಲ್ಲಿ ಹೈಸ್ಕೂಲ್, ಸಾಗರದ ಎಂಡಿಎಫ್ ಕಾಲೇಜಿನಲ್ಲಿ ಪಿಯು, ಎಲ್ ಬಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾನೆ. ಈತನ ಊರು ಹೊಸನಗರವಂತೆ.

ಲಕ್ಕಿ ವಿನಿ ಸಂಪರ್ಕ ಇನ್ನೂ ಸಿಕ್ಕಿಲ್ಲ

ಲಕ್ಕಿ ವಿನಿ ಸಂಪರ್ಕ ಇನ್ನೂ ಸಿಕ್ಕಿಲ್ಲ

ಲಕ್ಕಿ ವಿನಿ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಆತನ ಹೊಸನಗರ ಮನೆ ಅಡ್ರೆಸ್ ಇದೆ. ಆದರೆ, ಬೆಂಗಳೂರಿನ ವಿಳಾಸ ಕೊಟ್ಟಿಲ್ಲ. ಫೇಸ್ ಬುಕ್ ಮೇಲ್ ಐಡಿ ಮಾತ್ರ ಇದೆ. ಫೋನ್ ನಂಬರ್ ಇಲ್ಲ. ಲಕ್ಕಿ ವಿನಿ ನಿಜಕ್ಕೂ ಶ್ವೇತಾ ಅವರಿಗೆ ಯಾವ ರೀತಿ ಕಾಮೆಂಟ್ ಹಾಕಿದ್ದ. ಅದು ತಮಾಷೆಯಾಗಿ ಹಾಕಿದ ಕಾಮೆಂಟ್ ಆಗಿತ್ತಾ ಅಥವಾ ಉದ್ದೇಶ ಪೂರ್ವಕ ಕಿರುಕುಳವಾಗಿತ್ತಾ? ಇನ್ನೂ ತಿಳಿದು ಬಂದಿಲ್ಲ

ಪೊಲೀಸರಿಗೆ ದೂರು ಯಾಕೆ ನೀಡಿಲ್ಲ

ಪೊಲೀಸರಿಗೆ ದೂರು ಯಾಕೆ ನೀಡಿಲ್ಲ

ಶ್ವೇತಾ ಅವರ ಬೋಲ್ಡ್ ನೆ ಸ್ ಮೆಚ್ಚಿರುವ ಅವರ ಅಭಿಮಾನಿಗಳು ಪೊಲೀಸರಿಗೆ ದೂರು ಯಾಕೆ ನೀಡಿಲ್ಲ ಎಂಬ ಪ್ರಶ್ನೆಯನ್ನು ಎಸೆದಿದ್ದಾರೆ. ಮೊದಲು ಜನರಿಗೆ ಇಂಥವರು ಇದ್ದಾರೆ. ನಮ್ಮಂಥವರು ಮುಂದೆ ಬಂದು ಬಣ್ಣ ಬಯಲು ಮಾಡಬೇಕು ನಂತರ ಪೊಲೀಸರ ಮೊರೆ ಹೊಕ್ಕಬೇಕು ಎಂದು ಶ್ವೇತಾ ಸಮಜಾಯಿಸಿ ನೀಡಿದ್ದಾರೆ.

English summary
Actress Shweta Pandit revealed she faced Eve Teasing and threaten by a person called Vinay. Shweta has posted the miscreant's Facebook account details. The pervert Vini on his page says he is a trainee at a Cafe Coffee Day

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X