ಸುಧಾರಾಣಿ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ? ಕನ್ನಡದ ಯುವ ನಾಯಕನಿಗೆ ನಾಯಕಿ ಆಗ್ತಾರಾ?

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಚಿತ್ರರಂಗದಲ್ಲಿ ಸದ್ದು ಮಾಡಿದ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಕಾಮನ್ ಆಗಿದೆ. ಕೇವಲ ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂತಷ್ಟೇ ಅಲ್ಲ. ಕನ್ನಡ ಚಿತ್ರರಂಗದಲ್ಲೂ ಈಗ ತಾರೆಯರ ಮಕ್ಕಳು ನಟನೆಯ ಕಡೆ ಮುಖ ಮಾಡುತ್ತಿದ್ದಾರೆ. ಸದ್ಯ ಇದೊಂದು ಟ್ರೆಂಡ್ ಆಗಿಟ್ಟಿದೆ.

ಹೆಚ್ಚಾಗಿ ಹಿರಿಯ ಕಲಾವಿದರ ಪುತ್ರಂದಿರು ಚಿತ್ರರಂಗಕ್ಕೆ ಗ್ರ್ಯಾಂಟಿ ಕೊಡುತ್ತಿದ್ದರು. ಆದ್ರೀಗ ಪುತ್ರಿಯರೂ ಕೂಡ ಸಿನಿಮಾಗಳಲ್ಲಿ ಬರುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ 'ಟಗರು ಪಲ್ಯ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆದ್ರೀಗ ಮತ್ತೊಬ್ಬ ನಟಿಯ ಪುತ್ರಿ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

Kannada actress Sudharani s daughter Nidhi is preparing to enter Sandalwood

ಕನ್ನಡ ಚಿತ್ರರಂಗದಲ್ಲಿ ಗಾಳಿ ಸುದ್ದಿಗಳಿಗೇನು ಭರವಿಲ್ಲ. ಪ್ರತಿ ದಿನ ಏನಾದರೂ ಒಂದು ಸುದ್ದಿ ಸಿನಿಮಾ ಮಂದಿಯ ಕಿವಿಗಳಿಗೆ ಬೀಳುತ್ತಲೇ ಇರುತ್ತೆ. ಸದ್ಯಕ್ಕೀಗ ಹರಿದಾಡುತ್ತಿರುವ ಸುದ್ದಿ ಏನಂದ್ರೆ, ಕನ್ನಡ ಚಿತ್ರರಂಗದ ಹಿರಿಯ ನಟ ಸುಧಾರಾಣಿ ಪುತ್ರಿ ನಿಧಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ನಿಧಿ ಸ್ಯಾಂಡಲ್‌ವುಡ್ ಎಂಟ್ರಿ ಬಗ್ಗೆ ಏನದು ಸುದ್ದಿ? ಹೀರೊ ಯಾರು? ಗಾಂಧಿನಗರದಲ್ಲಿ ಗುಲ್ಲೆದ್ದಿರೋ ಸುದ್ದಿಯೇನು? ತಿಳಿಯಲು ಮುಂದೆ ಓದಿ..

ಹೌದು, ಸುಧಾರಾಣಿ ಪುತ್ರಿ ನಿಧಿ ಕನ್ನಡ ಚಿತ್ರರಂಗಕ್ಕೆ ಶೀಘ್ರದಲ್ಲಿಯೇ ಎಂಟ್ರಿ ಕೊಡುತ್ತಿದ್ದಾರೆ. ಇಂತಹದ್ದೊಂದು ಸುದ್ದಿ ಸಿನಿಮಾ ವಲಯದಲ್ಲಿ ಓಡಾಡುತ್ತಿದೆ. ಹಾಗಂತ ಸುಧಾರಾಣಿ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ ಬಗ್ಗೆ ಸುದ್ದಿ ಹಬ್ಬುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಈ ಸುದ್ದಿ ಜೋರಾಗಿಯೇ ಸದ್ದು ಮಾಡಿತ್ತು.

ಹೆಚ್ಚು ಕಡಿಮೆ ಆರು ವರ್ಷಗಳ ಹಿಂದೆ ಜೋಗಿ ಪ್ರೇಮ್ ನಿರ್ದೇಶಿಸಲು ಹೊರಟಿದ್ದರು. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಟಿಸುತ್ತಿದ್ದ ಮೊದಲ ಸಿನಿಮಾ 'ಏಕ್‌ ಲವ್ ಯಾ'ಗೆ ಸುಧಾರಾಣಿ ಪುತ್ರಿಯೇ ನಾಯಕಿ ಅಂತ ವರದಿಗಳಾಗಿದ್ದವು. ಈ ಸಿನಿಮಾಗೆ ನಾಯಕಿಯಾಗಿ ಸುಧಾರಾಣಿ ಪುತ್ರಿ ನಿಧಿ ನಾಯಕಿ ಎಂದು ವರದಿಗಳಲಾಗಿದ್ದವು. ಈಗ ಮತ್ತೆ ಸುಧಾರಾಣಿ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ ಬಗ್ಗೆ ಸದ್ದು ಮಾಡುತ್ತಿದೆ.

Kannada actress Sudharani s daughter Nidhi is preparing to enter Sandalwood

ನಿಧಿ ಭರತನಾಟ್ಯವನ್ನು ಈಗಾಗಲೇ ಕಲಿತಿದ್ದಾರೆ. ಸದ್ಯಕ್ಕೀಗ ನಟನೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಒಳ್ಳೊಳ್ಳೆ ಆಫರ್‌ಗಳು ಕೂಡ ಬರುತ್ತಿದ್ದು, ಕನ್ನಡ ಯುವ ನಾಯಕನ ಸಿನಿಮಾವೊಂದಕ್ಕೆ ಆಫರ್ ಸಿಕ್ಕಿದೆ ಎಂದು ಚರ್ಚೆಗಳಾಗುತ್ತಿವೆ. ಆದರೆ, ಈ ಬಗ್ಗೆ ಸುಧಾರಾಣಿ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಈ ಹಿಂದಿನಂತೆ ಈ ಬಾರಿ ಕೂಡ ಕೇವಲ ಗಾಳಿ ಸುದ್ದಿಯಾಗಿಯೇ ಉಳಿದು ಬಿಡುತ್ತಾ? ಇಲ್ಲ ನಿಜಕ್ಕೂ ನಾಯಕಿಯಾಗಿ ಎಂಟ್ರಿ ಕೊಡುತ್ತಾರಾ? ಅನ್ನೋ ಕುತೂಹಲವಂತೂ ಅಭಿಮಾನಿಗಳಲ್ಲಿ ಇದೆ.

ಇನ್ನು ಸುಧಾರಾಣಿ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆರೆಕಂಡಿರೋ 'ಯುವ' ಸಿನಿಮಾದಲ್ಲಿಯೂ ಸುಧಾರಾಣಿ ನಟಿಸಿದ್ದರು. ಹಾಗೇ ಜೀ ಕನ್ನಡದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದು, ಕಿರುತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಈಗ ಸುಧಾರಾಣಿ ಪುತ್ರಿ ಸ್ಯಾಂಡಲ್‌ವುಡ್ ಎಂಟ್ರಿ ಮತ್ತೆ ಸದ್ದು ಮಾಡುತ್ತಿದ್ದು, ಈ ಸುದ್ದಿ ನಿಜವೇ ಆಗಿದ್ದರೆ, ಸುಧಾರಾಣಿ ಫ್ಯಾನ್ಸ್ ಥ್ರಿಲ್ ಆಗೋದು ಗ್ಯಾರಂಟಿ.

More from Filmibeat

English summary
Buzz is that Sudharani daughter Nidhi is planning to make a sandalwood entry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X