For Quick Alerts
  ALLOW NOTIFICATIONS  
  For Daily Alerts

  ಕನ್ನಡ ಬಿಗ್‌ಬಾಸ್ ಸೀಸನ್ 3 ಅಕ್ಟೋಬರ್ 17ರಿಂದ ?

  By ಸೋನು ಗೌಡ
  |

  ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ಪ್ಲಾನ್ ಪ್ರಕಾರ ನಡೆದರೆ ಅಕ್ಟೋಬರ್ 17 ರಿಂದ ಖಾಸಗಿ ಚಾನಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಸ್ವಲ್ಪ ದಿನಗಳ ಹಿಂದೆ ರಿಯಾಲಿಟಿ ಶೋ ಪ್ರಸಾರ ಮಾಡುವ ದಿನಾಂಕದ ಬಗ್ಗೆ ಚರ್ಚೆ ನಡೆಸಲಾಗಿತ್ತು.

  ಇದೀಗ ಬಲ್ಲ ಮೂಲಗಳ ಪ್ರಕಾರ ಕಾರ್ಯಕ್ರಮದ ಟೆಸ್ಟ್ ರನ್ ಈಗಾಗಲೇ ಶುರುವಾಗಿದ್ದು, ಈ ಟೆಸ್ಟ್ ಗೆ ಟೆಕ್ನಿಕಲ್ ತಂಡ ಡಮ್ಮಿ ಸ್ಪರ್ಧಾರ್ಥಿಗಳನ್ನು ಬಿಗ್ ಬಾಸ್ ಮನೆಯ ಒಳಗೆ ಇಟ್ಟುಕೊಂಡು ಟೆಸ್ಟಿಂಗ್ ಕಾರ್ಯ ಮಾಡುತ್ತಿದೆ. ['ಬಿಗ್ ಬಾಸ್' ಕನ್ನಡ ಸೀಸನ್ 3 ಆಗುತ್ತಾ ಫ್ಲಾಪ್ ಶೋ?]

  'ಬಿಗ್ ಬಾಸ್ 3' ಹೊಸ ಮನೆಯ ಒಳಗಡೆ ಸುಮಾರು 80 ಕ್ಯಾಮರಗಳನ್ನು ಫಿಕ್ಸ್ ಮಾಡಲಾಗಿದೆ. ಜೊತೆಗೆ ಬೆಂಗಳೂರು-ಮೈಸೂರು ಹೈವೆ ರಸ್ತೆಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆ ಮಾಡಲಾಗಿದೆ.

  ಈಗಾಗಲೇ ಕೆಲವಾರು ಸ್ಪರ್ಧಾರ್ಥಿಗಳ ಹೆಸರನ್ನು ನಿಮ್ಮ ಕನ್ನಡ ಫಿಲ್ಮಿಬೀಟ್ ಪ್ರಸ್ತಾಪ ಮಾಡಿತ್ತಾದರೂ ಆಯ್ಕೆಯಾದ ಕೆಲವರಲ್ಲಿ ನೋ ಎಂದಿದ್ದಾರೆ. ಸದ್ಯಕ್ಕೆ ಫೈನಲ್ ಸ್ಪರ್ಧಾರ್ಥಿಗಳು ಯಾರು ಎಂಬುದು ಇನ್ನು ಪಕ್ಕಾ ಆಗಿಲ್ಲವಾದ್ದರಿಂದ ಶೋ ಆರಂಭವಾದ ಮೇಲೆ ತಿಳಿಯಲಿದೆ.[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

  ಎಂದಿನಂತೆ ಈ ಬಾರಿಯೂ ಕನ್ನಡದ ಮಾಣಿಕ್ಯ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆ ಇರುವ ಸ್ಥಳ ನಮ್ಮ ಬೆಂಗಳೂರಿಗೆ ಹತ್ತಿರವೇ ಆಗಿದೆ ಯಾಕೆಂದರೆ ಸ್ಟಾರ್ ಗಳಿಗೆ ಅವರವರ ಸಿನಿಮಾ ಕೆಲಸಗಳಿಗೆ ಹೆಚ್ಚಿನ ಸಮಯ ಸಿಗಲು ಈ ಥರ ಪ್ಲಾನ್ ಮಾಡಲಾಗಿದೆ.[ಬಿಗ್ ಬಾಸ್ ಮನೆಯ ಸ್ಪರ್ಧಿ ಬಗ್ಗೆ ಬಿಸಿಬಿಸಿ ಸುದ್ದಿ!]

  ಅದೇನೇ ಇರಲಿ ಒಟ್ನಲ್ಲಿ ಈ ಜನಪ್ರಿಯ ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿಗಳಿಂದ ಮತ್ತೊಮ್ಮೆ ವೀಕ್ಷಕರಿಗೆ ಪಕ್ಕಾ ಮನೋರಂಜನೆ ಗ್ಯಾರಂಟಿ.

  English summary
  If all goes as per plans, telecast of the Kannada Bigg Boss 3 will start on October 17. The date was finalised a few days ago and sources say test run of the programme have already begun. In the test run, dummy candidates are inside the house and the technical team is testing the process.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X