For Quick Alerts
  ALLOW NOTIFICATIONS  
  For Daily Alerts

  ಈಬಾರಿ ಬಿಗ್ಬಾಸ್ ಮಾಡೋದು ಕೂಡ ತಮಾಷೇನೆ ಅಲ್ಲ!

  By ಜೀವನರಸಿಕ
  |

  ಕಿಚ್ಚ ಸುದೀಪ್ ಈ ಬಾರಿಯ ಬಿಗ್ಬಾಸ್ ಹೋಸ್ಟ್ ಮಾಡ್ತಾರೆ ಅಂತ ಈಗಾಗ್ಲೇ ಗಾಳಿಸುದ್ದಿಗಳು ಹಬ್ಬಿವೆ, ಅವರೇನಾದ್ರೂ ಒಪ್ಪಿಕೊಂಡರೆ ಅವರ ಚಿತ್ರಗಳ ಗತಿಯೇನು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ಲೆಕ್ಕಾಚಾರ ಒಂದು ಕಡೆಯಾದ್ರೆ ಸುದೀಪ್ ಮಾತ್ರ ಬಿಗ್ಬಾಸ್ ತಮಾಷೇನೇ ಅಲ್ಲ ಅಂತಿದ್ದಾರೆ.. ಅರ್ಥಾತ್ ಅಷ್ಟು ಸುಲಭ ಅಲ್ಲ ಅಂತ..

  ನಿಜ್ವಾಗ್ಲೂ ಸೀರಿಯಸ್ ಸುದ್ದಿ. ಯಾಕಂದ್ರೆ ಕಿಚ್ಚನ ಕೈಯ್ಯಲ್ಲಿ ಈ ವರ್ಷ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳಿವೆ. ತಮಿಳಿನ ಜಿಗರ್ತಾಂಡ ಚಿತ್ರದ ರೀಮೇಕ್ ಶೂಟಿಂಗ್ ಈಗಾಗ್ಲೇ ಶುರುವಾಗಿದೆ. ನಿರ್ದೇಶನಕ್ಕೆ ಅಂತ ಇಳಿದ್ರೆ ಕಿಚ್ಚ ಸಿನಿಮಾಗೆ ಹೆಚ್ಚು ಸಮಯ ಕೊಡ್ತಾರೆ. ಇದ್ರ ನಡುವೆ ಎರಡು ಸಿನಿಮಾಗಳ ಮುಹೂರ್ತವೂ ನಡೆದಿದೆ.

  ಹೆಬ್ಬುಲಿ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದ್ರೆ, ಕೆ ಎಸ್ ರವಿಕುಮಾರ್ ಅಂತಹ ಖ್ಯಾತ ನಿರ್ದೇಶಕರ ಕೋಟಿಗೊಬ್ಬ-2 ಕೂಡ ಸುದೀಪ್ ಡೇಟ್ಸ್ಗಾಗಿ ಕಾದಿದೆ. ಈ ಮೂರು ಸಿನಿಮಾಗಳ ನಡುವೆ ಸಮಯ ಮಾಡ್ಕೊಂಡು ಸುದೀಪ್ ಬಿಗ್ಬಾಸ್ಗೆ ಸೈ ಅಂತಾರಾ ಅನ್ನೋ ಅನುಮಾನ ಶುರುವಾಗಿದೆ. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ?]


  ಆದ್ರೆ ಕೆಲಸದ ವಿಷ್ಯಕ್ಕೆ ಬಂದ್ರೆ ರಾತ್ರಿ ಹಗಲೂ ಕೆಲಸ ಮಾಡೋ ಸುದೀಪ್ ಹಾರ್ಡ್ ವರ್ಕ್ ಮಾಡೋ ಮನಸ್ಸು ಮಾಡಿದ್ರೆ ಈ ಬಾರಿಯ ಬಿಗ್ಬಾಸ್ ಸೀಸನ್-3ಯನ್ನು ಅನುಮಾನವೇ ಇಲ್ಲದೇ ಕಿಚ್ಚ ಹೋಸ್ಟ್ ಮಾಡಲಿದ್ದಾರೆ. ಸುದೀಪ್ ಅವರಿಂದ ಈಕುರಿತು ಯಾವುದೇ ಮಾತು ಬಂದಿಲ್ಲ. ಅಲ್ಟಿಮೇಟ್ಲಿ ಇದು ಪ್ರೆಸ್ಟೀಜ್ ವಿಷಯ!

  ಮೊದಲನೇ ಸೀಸನ್ ನಲ್ಲಿ ವಿಜಯ ರಾಘವೇಂದ್ರ ಅವರು ಅರುಣ್ ಸಾಗರ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೆ, ಎರಡನೇ ಸೀಸನ್ ನಲ್ಲಿ ಸೃಜನ್ ಲೋಕೇಶ್ ಅವರ ಮೇಲಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿ ಪ್ರಶಸ್ತಿ ಅಕುಲ್ ಬಾಲಾಜಿ ಪಾಲಾಗಿತ್ತು. ಈಬಾರಿ ಯಾರ್ಯಾರು ಬರ್ತಾರೋ? ಯಾರ ಕೊರಳಿಗೆ ಪ್ರಶಸ್ತಿಯ ಹಾರ ಬೀಳಲಿದೆಯೋ ಎಂಬ ಚರ್ಚೆಗಳು ಕೂಡ ಶುರುವಾಗಿವೆ. ['ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್']

  English summary
  Who will host Kannada Bigg Boss Season 3 to be telecast by Colors Kannada? Gossip is that Kichcha Sudeep will host this too. But, he has already accepted 3 movies, for one of them shooting is already started. After all, hosting Bigg Boss is prestige question for Sudeep.
  Monday, June 29, 2015, 12:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X