ಕಾಮುಕ ಕಾಮಿಡಿ ಕಿಂಗ್ ಕಾರಿನಲ್ಲಿ ಮಾಡಿದ್ದೇನು?
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಾಮಿಡಿ ಕಿಂಗ್ ಗಳಿದ್ದಾರೆ. ಅದರಲ್ಲಿ ಒಬ್ಬರಿಗೆ ಹುಡ್ಗೀರು ಅಂದ್ರೆ ಹುಚ್ಚು. ಹೊಸ ಹೊಸ ಹೀರೋಯಿನ್ ಗಳನ್ನ ಮಾತನಾಡಿಸೋ ಚಪಲ. ಅವರಿಗೆ ಹೆಣ್ಣಿನ ಧ್ವನಿ ಕೇಳಿದ್ರೆ ಮನಸ್ಸು ಪ್ರಫುಲ್ಲವಾಗುತ್ತೆ. ಕಣ್ಣುಗಳು ಕೋರೈಸುತ್ತೆ. ಗಂಟೆಗಟ್ಟಲೆ ಮಾತಾಡಬೇಕು ಅನ್ನಿಸುತ್ತೆ.
ಚೆನ್ನಾಗೀರೋ ಹುಡ್ಗೀರನ್ನ ಕಂಡ್ರೆ ನಿನ್ನನ್ನ ಹೀರೋಯಿನ್ ಮಾಡ್ತಿನಿ ಅಂತ ಕಾರಿನಲ್ಲಿ ಕರ್ಕೊಂಡು ಹೊರಟು ಬಿಡ್ತಾರೆ. ಅವರ ಕಾರೇ ಒಂದು ಲಾಡ್ಜ್ ನಷ್ಟು ರಿಚ್ಚಾಗಿದೆಯಂತೆ. ಅಲ್ಲಿ ಕಾಮದಾಟಕ್ಕೆ ಏನೇನುಬೇಕೋ ಎಲ್ಲವೂ ರೆಡಿ ಇರುತ್ತಂತೆ. ಅಬ್ಬಬ್ಬಾ ಹೌದಾ ಅಂದ್ರೆ ಹೌದು ಅಂತಾರೆ ಅವರಿಂದ ಅನುಭವಿಸಿದ ಕಷ್ಟದ ಕಥೆ ಹೇಳೋ ಕಲಾವಿದೆ. ['ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9]

ಆದರೆ ವರ್ಷಕ್ಕೆ 15-20 ಸಿನಿಮಾ ಮಾಡೋ ಕಾಮಿಡಿಯನ್ ಗಳು ಯಾವಾಗ್ಲೂ ಬಿಜಿ. ಅದ್ರಲ್ಲಿ ಇದಕ್ಕೆಲ್ಲಾ ಟೈಮ್ ಎಲ್ಲಿ ಸಿಕ್ಕುತ್ತಪ್ಪಾ. ಗಾಂಧಿನಗರದ ಗಲ್ಲಿಯಲ್ಲಿ ಓಡಾಡ್ತಿರೋ ಈ ಗಾಸಿಪ್ಪನ್ನೆಲ್ಲಾ ನಂಬಬಹುದಾ? ಅದು ನಿಮಗೇ ಬಿಟ್ಟಿದ್ದು!
More from Filmibeat
English summary
Some of the industry's most well-known names were part of a sleazy sex scandal sting operation that played out on television. The gossip is that, even comedy actors are not the exception for casting couch.


Click it and Unblock the Notifications











