ಜನಪ್ರಿಯ ಧಾರಾವಾಹಿಯ ಹೀರೊ-ಹೀರೋಯಿನ್ ನಡುವೆ ಅಫೇರ್? ಸೆಟ್ಟಲ್ಲೇ ನಾಯಕಿಗೆ ಚಪ್ಪಲಿಯಲ್ಲಿ ಹೊಡೆದ ಪತ್ನಿ!

By ಫಿಲ್ಮಿಬೀಟ್ ಡೆಸ್ಕ್

ಗ್ಲಾಮರ್ ಪ್ರಪಂಚದಲ್ಲಿ ದಿನಕ್ಕೊಂದು ಅಫೇರ್ ಸುದ್ದಿಗಳು ಹೊರಬೀಳುತ್ತಲೇ ಇರುತ್ತೆ. ಇದರಲ್ಲಿ ಹೊಸತೇನು ಇಲ್ಲ. ಆದರೆ, ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಮಟ್ಟಿಗೆ ಇದು ಇನ್ನು ಸೂಕ್ಷ್ಮ ವಿಚಾರವೇ. ಅದರಲ್ಲೂ ವಿವಾಹಿತ ಹೀರೊ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಾನೆ ಅಂದರಂತೂ ಮುಗಿದೇ ಹೋಯ್ತು. ಕನ್ನಡ ಚಿತ್ರರಂಗದ ಮಟ್ಟಿಗೆ ಅದೊಂದು ದೊಡ್ಡ ಸುದ್ದಿಯಾಗಿಬಿಡುತ್ತೆ.

ಕನ್ನಡ ಕಿರುತೆರೆಯಲ್ಲಿ ಇಂತಹದ್ದೇ ಒಂದು ಸಂಗತಿ ನಡೆದಿರುವ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಎರಡು ದಿನಗಳ ಹಿಂದಷ್ಟೇ ಜನಪ್ರಿಯ ಧಾರಾವಾಹಿಯ ಹೀರೊ-ಹೀರೊಯಿನ್ ಮತ್ತೆ ಹೀರೊ ಪತ್ನಿ ನಡುವೆ ನಡೆದ ಗಲಾಟೆ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಅದಕ್ಕೆ ಕಾರಣ, ಅಫೇರ್ ಹಾಗೂ ಫಾರಿನ್ ಟ್ರಿಪ್.

Kannada famous serial actor and actress affair goes wrong, wife slapped

ಕನ್ನಡದ ಜನಪ್ರಿಯರ ಧಾರಾವಾಹಿಯೊಂದರ ನಾಯಕ ಹಾಗೂ ನಾಯಕಿ ನಡುವೆ ಕಳೆದ ಕೆಲವು ದಿನಗಳಿಂದ ಅಫೇರ್ ನಡೆಯುತ್ತಿತ್ತು. ಇವರಿಬ್ಬರ ಮ್ಯಾಟರ್ ಕಿರುತೆರೆ ಲೋಕದಲ್ಲಿ ಬಹುತೇಕ ಎಲ್ಲರಿಗೂ ಗೊತ್ತಿರೋ ಸಂಗತಿ ಎಂದು ಬಲ್ಲ ಮೂಲಗಳು ಮಾಹಿತಿಯನ್ನು ಹಂಚಿಕೊಂಡಿದೆ.

ಏನಿದು ಘಟನೆ?: ಕಳೆದೆರಡು ದಿನಗಳ ಹಿಂದಷ್ಟೇ ಆ ಜನಪ್ರಿಯ ಧಾರಾವಾಹಿಯ ಸೆಟ್ಟಿನಲ್ಲಿ ಒಂದು ಘಟನೆ ನಡೆದಿದೆ. ನಾಯಕನ ಪತ್ನಿ ಸೆಟ್ಟಿಗೆ ಬಂದು ಇವರಿಬ್ಬರ ಅಫೇರ್ ಬಗ್ಗೆ ಗಲಾಟೆ ಮಾಡಿದ್ದಾರೆ. ನಾಯಕಿಗೆ ಎಲ್ಲರ ಮುಂದೇನೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ಹೊರಹಾಕಿದ್ದಾರೆ ಅಂತ ಬಲ್ಲ ಮೂಲವೊಂದು ಮಾಹಿತಿ ಹಂಚಿಕೊಂಡಿದೆ. ಇಂಟ್ರೆಸ್ಟಿಂಗ್ ವಿಷಯ ಅಂದರೆ, ಆ ಧಾರಾವಾಹಿಗೆ ನಾಯಕನ ಪತ್ನಿ ಕೂಡ ನಿರ್ಮಾಪಕಿ.

ಈ ಧಾರಾವಾಹಿ ಈಗಾಗಲೇ ಹಲವು ಸಂಚಿಕೆಗಳ ಪ್ರಸಾರ ಕಂಡಿದೆ. ಇದರಲ್ಲಿ ನಾಯಕನಿಗೆ ಈಗಾಗಲೇ ಮದುವೆ ಆಗಿದ್ದು, ಪತ್ನಿ ಕಾಣೆಯಾಗಿದ್ದಾಳೆ. ಆ ಜಾಗಕ್ಕೆ ಯುವತಿ ಪತ್ನಿಯಾಗಿ ಬಂದಿದ್ದಾಳೆ. ಇವರಿಬ್ಬರನ್ನು ಇಟ್ಟುಕೊಂಡು ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂದು ಈ ಧಾರಾವಾಹಿ ಸಾರಿ ಹೇಳುತ್ತಿದೆ. ಆದ್ರೀಗ ಅದು ಹೀರೊ-ಹೀರೋಯಿನ್ ರಿಯಲ್ ಲೈಫ್‌ನಲ್ಲೂ ನಡೆದು ಹೋಗಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

Kannada famous serial actor and actress affair goes wrong, wife slapped

ಅಷ್ಟಕ್ಕೂ ನಡೆದಿದ್ದು ಏನು?: ಕಳೆದ ನಾಲ್ಕೈದು ತಿಂಗಳಿನಿಂದ ಜನಪ್ರಿಯ ಧಾರಾವಾಹಿಯ ಹೀರೊ ಹಾಗೂ ಹೀರೊಯಿನ್ ನಡುವೆ ಅಫೇರ್ ನಡೀತಿತ್ತು. ಇದು ಆ ಧಾರಾವಾಹಿ ಸೆಟ್ಟಿನವರಿಗೂ ಗೊತ್ತಿತ್ತು. ಕೆಲವು ದಿನಗಳ ಹಿಂದಷ್ಟೇ ಆ ಹೀರೊ ತಮ್ಮ ಧಾರಾವಾಹಿಯ ನಾಯಕಿ ಜೊತೆ ವಿದೇಶಿ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿಂದ ಪರಿಸ್ಥಿತಿ ತುಂಬಾನೇ ಬಿಗಡಾಯಿಸಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ನಾಯಕ ಪತ್ನಿ ಕೆಂಡಾಮಂಡಲವಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಾಯಕಿಗೆ ಈ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಪ್ರತಿದಿನ ಸೆಟ್ಟಿಗೆ ಹೋಗುತ್ತಿದ್ದರು. ಇದು ನಾಯಕಿಗೆ ಕಿರಿಕಿರಿಯಾಗಿದೆ. ಎರಡು ದಿನದ ಹಿಂದಷ್ಟೇ ಫಾರಿನ್ ಟೂರ್ ವಿಚಾರವಾಗಿ ನಾಯಕನ ಪತ್ನಿ ಹಾಗೂ ನಾಯಕಿ ನಡುವೆ ಮಾತಿಗೆ ಮಾತು ಬೆಳೆದೆ. ಹೀರೊ ಪತ್ನಿ ಸೆಟ್ಟಿನಲ್ಲೇ ನಾಯಕಿಗೆ ಚಪ್ಪಲಿಯಲ್ಲಿ ಬಾರಿಸಿದ್ದಾರೆಂದು ಮೂಲವೊಂದು ಫಿಲ್ಮಿಬೀಟ್‌ಗೆ ಮಾಹಿತಿ ಕೊಟ್ಟಿದೆ.

ಮುಂದೇನು?: ಈ ಘಟನೆ ನಡೆಯುತ್ತಿದ್ದಂತೆ ನಾಯಕಿ ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲವೆಂದು ಮನರಂಜನಾ ವಾಹಿನಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಒಂದು ಧಾರಾವಾಹಿಯ ವಿವಾದದಿಂದ ಹೊರಬಂದಿರೋ ವಾಹಿನಿಗೆ ಮತ್ತೆ ಸಿಕ್ಕಿಕೊಳ್ಳುವುದರಲ್ಲಿ ಆಸಕ್ತಿಯಿಲ್ಲ. ಹೀಗಾಗಿ ಆದಷ್ಟು ಬೇಗ ಆ ಧಾರಾವಾಹಿಯನ್ನೇ ಅಂತ್ಯ ಮಾಡುವುದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.

ಸದ್ಯ ಆ ನಾಯಕಿ ಕೂಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ಚೊಚ್ಚಲ ಸಿನಿಮಾ ಇನ್ನೇನು ರಿಲೀಸ್ ಆಗಬೇಕಿದೆ. ಒಂದು ವೇಳೆ ಆ ಸಿನಿಮಾ ಗೆದ್ದರೆ, ಧಾರಾವಾಹಿ ಕಡೆಗೆ ಹಿಂತಿರುಗಿ ನೋಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಸದ್ಯ ಇಂತಹದ್ದೊಂದು ಘಟನೆ ಕಿರುತೆರೆಯಲ್ಲಿ ನಡೆದಿರೋ ಬಗ್ಗೆ ಜೋರಾಗಿಯೇ ಚರ್ಚೆಯಾಗುತ್ತಿದೆ. ಆದರೆ, ಅವರು ಯಾರು ಅನ್ನೋದ ಮಾಹಿತಿಯನ್ನು ಇನ್ನು ರಿವೀಲ್ ಮಾಡಿಲ್ಲ. ಒಂದು ವೇಳೆ ಆ ಹೆಸರುಗಳು ಹೊರ ಬಂದರೆ, ಈ ವಿವಾದ ಇನ್ನಷ್ಟು ತಾರಕಕ್ಕೇರುವ ಸಾಧ್ಯತೆನೇ ಹೆಚ್ಚಿದೆ.

More from Filmibeat

English summary
Buzz is that Zed Kannada famous serial hero in trouble. He had an affair with his co-star. An actress was slapped by her husband on the set:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X