ಕಾಶಿನಾಥ್ 12 AM ಚಿತ್ರ ನಾಲ್ಕು ಭಾಷೆಗಳಿಗೆ ರೀಮೇಕ್

By Rajendra

ಒಟ್ಟಿನಲ್ಲಿ ಉತ್ತಮ ಮನರಂಜನಾತ್ಮಕ ಅಂಶಗಳಿಂದ ಕೂಡಿದ ಕನ್ನಡ ಚಿತ್ರಗಳಿಗೂ ಡಿಮ್ಯಾಂಡ್ ಇದೆ ಎಂಬುದನ್ನು ಕನ್ನಡ ಚಿತ್ರಗಳ ಖ್ಯಾತ ನಿರ್ದೇಶಕ, ನಟ ಕಾಶಿನಾಥ್ ನಿರೂಪಿಸಿದ್ದಾರೆ. ಕಾಶಿನಾಥ್ ಅವರ ಗರಡಿಯಲ್ಲಿ ಬಂದಂತಹ ನಿರ್ದೇಶಕ ಕಾರ್ತಿಕ್ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ '12 AM ಮಧ್ಯರಾತ್ರಿ'.

ಈ ಚಿತ್ರದ ಕಥಾವಸ್ತು Darkness phobia (ಕತ್ತಲೆಂದರೆ ಭಯ). ಮೀಡಿಯಂ ಬಜೆಟ್ ಚಿತ್ರವಾದ 12 AMಗೆ ಥಿಯೇಟರ್ ಸಮಸ್ಯೆ ಸೇರಿದಂತೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಿದ್ದವು. ಈಗ ಈ ಚಿತ್ರ ಯಶಸ್ವಿಯಾಗಿಯೂ ಪ್ರದರ್ಶನವಾಗುತ್ತಿದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಹಾಗೆಯೇ ಪರಭಾಷಾ ಚಿತ್ರೋದ್ಯಮದ ಗಮನವನ್ನೂ ಸೆಳೆದಿದೆ. ಈ ಚಿತ್ರವನ್ನು ಚಿತ್ರದ ನಿರ್ಮಾಪಕ ಪ್ರತಿಮಾ ವಿಜಯಕುಮಾರ್ ಅವರು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ರೀಮೇಕ್ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಇದೆ.

ಆದರೆ ಗಾಂಧಿನಗರದ ಮಂದಿ ಮಾತ್ರ ಈ ಸುದ್ದಿಯನ್ನು ಒಪ್ಪಲು ಸುತಾರಾಂ ಸಿದ್ಧರಿಲ್ಲ. "ಹೇ ಬಿಡ್ರಿ ಇದೆಲ್ಲಾ ಬರಿ ಬೊಗಳೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ತಂತ್ರ ಇದು" ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 12 AM ಚಿತ್ರ ರೀಮೇಕ್ ಆದ ಬಳಿಕವಷ್ಟೇ ಸುದ್ದಿಗೆ ಮಹತ್ವಬರಲಿದೆ.

ಈ ಹಿಂದೆ ಕಾಶಿನಾಥ್ ಅವರು ಪತ್ರಿಕೆಗಳಿಗೆ ಜಾಹೀರಾತು ನೀಡಿ, ಥಿಯೇಟರ್ ಮಾಲೀಕರಿಗೆ ಎಕ್ಕಾಮಕ್ಕಾ ಬೆಂಡೆತ್ತಿದ್ದರು. ಹಾಗಾಗಿ ಗಾಂಧಿನಗರ ಕೂಡ ಕಾಶಿನಾಥ್ ಅವರ ವಿರುದ್ಧ ಪರೋಕ್ಷ ಸಮರ ಸಾರುತ್ತಿದೆ ಎಂಬ ಮಾಹಿತಿಯೂ ಇದೆ.

ವಿ ಮನೋಹರ್ ಅವರ ಸಂಗೀತ ಇರುವ ಈ ಚಿತ್ರದ ಒಟ್ಟು 50 ದಿನಗಳ ಚಿತ್ರೀಕರಣದಲ್ಲಿ 35 ದಿನಗಳನ್ನು ರಾತ್ರಿಯಲ್ಲೇ ಚಿತ್ರೀಕರಿಸಿರುವುದು ವಿಶೇಷ. ಕಾಶಿನಾಥ್ ಅವರ ಪುತ್ರ ಅಲೋಕ್ ಈ ಚಿತ್ರದ ಮೂಲಕ ಅಭಿಮನ್ಯು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಸಿನಿ ಡೆಸ್ಕ್)

More from Filmibeat

English summary
Kannada films actor and director Kashinath claims that his latest film 12 AM Midnight to remade in four languages. This film is made in Tamil, Telugu, Malayalam and Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X