ವಿರೋಧದ ನಡುವೆಯೂ ಈ ನಟಿಯೇ ಬೇಕು ಅಂತ ಪಟ್ಟು ಹಿಡಿದ ನಿರ್ದೇಶಕ; ಲವ್ ಒನ್ ವೇ ನಾ? ಟು ವೇ ನಾ?
ಚಿತ್ರರಂಗ ಅಂದ್ಮೇಲೆ ಸುದ್ದಿಗಳಿಗೇನು? ಪ್ರತಿ ದಿನ ಒಂದಲ್ಲ ಇಂದು ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಲೇ ಇರುತ್ತೆ. ಇದೇ ಗಲ್ಲಿಯಲ್ಲಿ ಹೊಸ ಹೊಸ ಸುದ್ದಿಗಳು ಆಚೆ ಬರುತ್ತವೆ. ಇಲ್ಲೇ ಹೀರೋ- ಹೀರೋಯಿನ್ ನಡುವಿನ ಸಲುಗೆಯ ಮ್ಯಾಟರ್ ಹೊರಬರೋದು. ಇಲ್ಲೇ ನಿರ್ದೇಶಕರ ಆಸೆ ಚಿಗುರೊಡೆಯೋದು. ಇಲ್ಲೇ ಸೆಲೆಬ್ರೆಟಿಗಳ ಕನಸು ನನಸಾಗೋದು. ಇಂತಹ ಸ್ಥಳದಲ್ಲಿ ಹೊಸದೊಂದು ಸುದ್ದಿ ಗಾಳಿಗಿಂತಲೂ ವೇಗವಾಗಿ ಓಡಾಡುತ್ತಿದೆ.
ಒಂದು ಸಿನಿಮಾ ಶುರುವಾದರೇ, ನಿರ್ದೇಶಕ ಆಯ್ಕೆನೇ ಅಂತಿಮ. ಕಲಾವಿದರ ಆಯ್ಕೆಯಲ್ಲಿ ಹೀರೋಗಳು ತಲೆ ಹಾಕುವುದು ತೀರಾ ವಿರಳ. ಕೆಲವೊಮ್ಮೆ ಸಲಹೆಗಳನ್ನು ಕೊಡುವುದು ಬಿಟ್ಟರೆ, ಒತ್ತಡ ಹಾಕುವುದಕ್ಕೆ ಹೋಗುವುದಿಲ್ಲ. ಅದೇ ಒಂದು ವೇಳೆ ನಿರ್ದೇಶಕರು ತಮ್ಮ ಪಾತ್ರಕ್ಕೆ ಹೋಲುವವರನ್ನು ಕರೆತರುವುದಕ್ಕಿಂತ ವೈಯಕ್ತಿಕ ಆಸಕ್ತಿ ಮೇಲೆ ಆಯ್ಕೆ ಮಾಡುತ್ತಿದ್ದಾರೆ ಅಂತ ಗೊತ್ತಾದರೆ, ನಿರ್ಮಾಪಕರಿಂದ ಹಿಡಿದು ನಾಯಕ ನಟ ಕೂಡ ಎಂಟ್ರಿ ಕೊಡುವ ಸಾಧ್ಯತೆ ಇರುತ್ತೆ.

ಕನ್ನಡದ ನಾಲ್ಕು ಮಂದಿ ಸೂಪರ್‌ಸ್ಟಾರ್‌ಗಳ ಜೊತೆ ಕೆಲಸ ಮಾಡಿರೋ ನಿರ್ದೇಶಕರೊಬ್ಬರು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಮತ್ತೊಬ್ಬ ಸ್ಟಾರ್ ನಟನೊಂದಿಗೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಪ್ರಾಜೆಕ್ಟ್ ಆರಂಭ ಆಗಬೇಕಷ್ಟೇ. ಸದ್ಯ ನಾಯಕಿಯರು ಹಾಗೂ ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಈಗ ಈ ನಿರ್ದೇಶಕರು ಈಗ ಬಂಗಾರದಂತಹ ನಟಿಯೇ ನಾಯಕಿಯಾಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರಂತೆ. ಅಸಲಿಗೆ ಮ್ಯಾಟರ್ ಏನು ಅಂತ ನೋಡುವುದಾರೇ.
ಸೂಪರ್‌ಸ್ಟಾರ್‌ಗೆ ಸಿನಿಮಾ ಮಾಡಿದ ಬಳಿಕ ಒಂದು ವರ್ಷ ಗ್ಯಾಪ್ ತಗೊಂಡು ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಹೀರೋ ಬರ್ತ್‌ಡೇ ದಿನವೇ ಹೊಸ ಪ್ರಾಜೆಕ್ಟ್ ಕೂಡ ಅನೌನ್ಸ್ ಆಗಿದೆ. ಎಲ್ಲವೂ ಚೆನ್ನಾಗಿಯೇ ನಡೀತಿದೆ. ಆದರೆ, ಒಂದು ಕಡೆ ಮಾತ್ರ ನಿರ್ದೇಶಕರು ಕಾಂಪ್ರಮೈಸ್ ಆಗುವುದಕ್ಕೆ ರೆಡಿ ಇಲ್ವಂತೆ. ಇಡೀ ತಂಡ ಬೇರೆ ನಟಿಯನ್ನು ಆಯ್ಕೆ ಮಾಡಬಹುದು. ಈಕೆ ಸೂಟ್ ಆಗುವುದಿಲ್ಲ ಎಂದು ಹೇಳಿದರೂ ಕೇಳುತ್ತಿಲ್ವಂತೆ. ಬಂಗಾರದ ಬಣ್ಣದ ನಟಿಯೇ ನಾಯಕಿಯಾಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರಂತೆ.
ಇದು ತಂಡಕ್ಕೆ ದೊಡ್ಡ ತಲೆ ನೋವಾಗಿದೆಯಂತೆ. ಇನ್ನೇನು ಭರ್ಜರಿಯಾಗಿ ಸಿನಿಮಾ ಆರಂಭ ಮಾಡೇ ಬಿಡೋದು ಅಂತ ಜೋಷ್‌ನಲ್ಲಿ ಇದ್ದವರಿಗೆ ನಿರ್ದೇಶಕರ ಹಠ ಕಂಡು ದಿಕ್ಕೇ ತೋಚದಂತಾಗಿದೆಯಂತೆ. ಅಂದ್ಹಾಗೆ ಆ ನಟಿ ಕನ್ನಡದ ಜನಪ್ರಿಯ ನಿರ್ಮಾಪಕರೊಬ್ಬರ ಫೇವರಿಟ್ ಅಂತನೂ ಸುದ್ದಿಯಿದೆ. ಆದರೆ, ಇಲ್ಲಿ ಅವರ ಇನ್‌ಫ್ಲ್ಯೂಯೆನ್ಸ್ ಏನೂ ಕೆಲಸ ಮಾಡಿಲ್ಲ. ನಿರ್ದೇಶಕರು ಆ ನಟಿಯ ಮೋಹಕ್ಕೆ ಬಿದ್ದೋಗಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ.

ಇಷ್ಟು ಹಠ ಮಾಡಿದ್ಮೇಲೆ ಗಾಂಧಿನಗರದ ಮಂದಿಯ ಕಿವಿಗೆ ಮುಟ್ಟದೇ ಇರುತ್ತದೆಯೇ? ಒಬ್ಬರಿಗೆ ಮುಟ್ಟಿದ ವಿಷ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಸುವಾಸನೆ ಬೀರುತ್ತಾ? ಎಲ್ಲಾ ಕಡೆಗೂ ಹಬ್ಬಿಬಿಟ್ಟಿದೆ. ಗಾಳಿ ಹಾರಿ ಬಂದ ಈ ಸುದ್ದಿಯನ್ನು ಕೇಳಿ ಚಿತ್ರರಂಗದ ಸಮ್ ಜನ, ಛೇ.. ಇದೆಲ್ಲ ಬೇಕಿತ್ತಾ? ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ ನಿರ್ದೇಶಕ ಪ್ರೀತಿ ಏಕ ಮುಖನಾ? ದ್ವಿಮುಖನಾ ಅನ್ನೋದು ಗೊತ್ತಿಲ್ಲ.
ಇನ್ನು ಕೆಲವರು ನಿರ್ದೇಶಕರು ಹಂಗೆನೇ.. ಅವರಿಗೆ ಮನಸ್ಸಿಗೆ ಒಬ್ಬರು ಬಂದರೆ ಮುಗೀತು. ಅವರನ್ನೇ ಆಯ್ಕೆ ಮಾಡುತ್ತಾರೆ. ಯಾರೂ ಅನ್ಯತಾ ಭಾವಿಸಬೇಕಿಲ್ಲ. ಅವರ ಕಲ್ಪನೆಯಲ್ಲಿ ಆ ನಟಿ ಎದ್ದು ಕಾಣುತ್ತಿದ್ದಾರೆ. ಅದಕ್ಕೆ ಹಠ ಹಿಡಿದಿದ್ದಾರೆ. ಅಲ್ಲದೇ, ಆ ನಟಿಯೇ ಇರಲಿ ಅಂತಿರೋದು ಸೆಕೆಂಡ್ ಹೀರೋಯಿನ್ ಪಾತ್ರಕ್ಕೆ. ಹೀಗಾಗಿ ಈ ಮ್ಯಾಟರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ ಅಂತ ಆಪ್ತರು ಹೇಳುತ್ತಿದ್ದಾರೆ. ಆದರೆ, ಸಿನಿಮಾ ಮಂದಿ ಮಾತ್ರ ಇಬ್ಬರ ನಡುವೆ ಏನೋ ನಡೀತಿದೆ ಅಂತ ಊರೆಲ್ಲ ಮ್ಯಾಟರ್ ಹಬ್ಬಿಸೋದರಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











