»   » 'ಆರಂಭ'ದಲ್ಲೇ ಇದೆಲ್ಲಾ ಬೇಕಾ ಅಭಿ ಎಸ್ ಹನಕೆರೆಯವರೇ?

'ಆರಂಭ'ದಲ್ಲೇ ಇದೆಲ್ಲಾ ಬೇಕಾ ಅಭಿ ಎಸ್ ಹನಕೆರೆಯವರೇ?

Posted By: ಜೀವನರಸಿಕ
Subscribe to Filmibeat Kannada

ಎಂಜಿನಿಯರಿಂಗ್ ಮುಗಿಸಿ ಜಾಬ್ ಮಾಡ್ತಿದ್ದ ಈ ನಿರ್ದೇಶಕರಿಗೆ ಸಿನಿಮಾಗೆ ಬರ್ಬೇಕು ಅನ್ನೋ ಕನಸು ಬಿದ್ದು ಛಂಗನೆ ಸಿನಿಮಾ ರಂಗಕ್ಕೆ ಹಾರಿದ ನಿರ್ದೇಶಕರಿವರು. ಡೈರೆಕ್ಷನ್ ಅಂದ್ರೆ ಅಷ್ಟು ಸುಲಭ ಅಲ್ಲ ಅಂತ ಅರಿತು ನುರಿತ ನಿರ್ದೇಶಕರಾಗೋಕೆ ಒಂದಷ್ಟು ವರ್ಷ ಒದ್ದಾಡಿದ್ದಾರೆ ಕೂಡ.

ಅವ್ರ ಒದ್ದಾಟ ಗುದ್ದಾಟಕ್ಕೆ ಒಂದೊಳ್ಳೆ ಅವಕಾಶ ಸಿಕ್ಕಿ 'ಆರಂಭ' ಅನ್ನೋ ಸಿನಿಮಾನೂ ಆರಂಭವಾಯ್ತು. ಚಿತ್ರ ಆರಂಭವಾಗಿ ಎರಡು ವರ್ಷವಾಗ್ತಾ ಬಂದ್ರೂ ಮುಗಿಯಲಿಲ್ಲ. ಹೊಸಬರ ಸಿನಿಮಾ ಬೇರೆ ಪ್ರಚಾರ ಇಲ್ಲದೆ ಜನ ಸಿನಿಮಾವನ್ನ ಮರೆತೇ ಬಿಟ್ಟಿದ್ರು. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]

A scene from movie Aarambha

ಈಗ ಸಿನಿಮಾ ಮುಗಿದಿದೆ. ರಿಲೀಸ್ ಮಾಡಬೇಕು ಅಂದಾಗ ಪ್ರಚಾರದ ಪೀಕಲಾಟ ಶುರುವಾಗಿದೆ. ಪ್ರಚಾರಕ್ಕೆ ಗಿಮಿಕ್ ಮಾಡಬೇಕು ಅಂದುಕೊಂಡು ಇಂತಹದ್ದೊಂದು ಎದೆಮುಟ್ಟುವ ಚೀಪ್ ಗಿಮಿಕ್ ಮಾಡಿದ್ದಾರೆ ನಿರ್ದೇಶಕರು ಅನ್ನೋದು ಗಾಂಧಿನಗರದ ಸುಸಂಸ್ಕೃತ ಸಿನಿಪ್ರಿಯರ ವಾದ.

ಅದೇನೇ ಇರಲಿ 'ಆರಂಭ'ದಲ್ಲೇ ಇದೆಲ್ಲಾ ಬೇಕಾ? ಮೂಲತಃ ಮಂಡ್ಯದವ್ರಾದ ಅಭಿಯವ್ರಿಗೆ ಮಂಡ್ಯ ನಿರ್ದೇಶಕ ಪ್ರೇಮ್ ತರಹದ ಖಯಾಲಿ ಶುರುವಾಯ್ತಾ. ಶುರುವಾದ್ರೂ ಇದೇನು ಅಸಹ್ಯ ಅಂತಿದ್ದಾರೆ ಸಾತ್ವಿಕರು.

ಉಳಿದಂತೆ ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿರುವ ಚಿತ್ರದಲ್ಲಿ ನಟ ಮಿಥುನ್ ಪ್ರಕಾಶ್, ಅಭಿರಾಮಿ ಸೇರಿದಂತೆ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ಗುರುಕಿರಣ್, ಗೋಟುರಿ, ಕವಿರಾಜ್, ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿರುವುದು ಇನ್ನೊಂದು ವಿಶೇಷ. ಕಣಗಾಲ್ ನಲ್ಲಿ ಚಿತ್ರೀಕರಿಸಿರುವ ಮೊದಲ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದ ಪ್ರೀಮಿಯರ್ ಶೋ ಕಣಗಾಲ್ ನಲ್ಲಿ ಆಯೋಜಿಸಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ ಅಭಿ ಹನಕೆರೆ.

English summary
Kannada movie 'Aarambha - Last Chance' movie teaser became a debatable point among Sandalwood moviegoears, which had an intimacy scene. The movie directed by S Abhi Hanakere and produced by D Ganesh, V Nagenahalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada