»   » ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ

ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ

Posted By:
Subscribe to Filmibeat Kannada

ಎಲ್ಲರ ಮೆಚ್ಚಿನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷಿತ 'ಅಪೂರ್ವ' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ? ಮತ್ತು ರವಿಚಂದ್ರನ್ ಅವರೇ ಈ ಬಾರಿ ಆದ್ರೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೀರಾ? ಅಂತ ಅಭಿಮಾನಿಗಳು 2 ಪ್ರಶ್ನೆ ಹಾಕಿದ್ದು, ಇದೀಗ ಆ ಪ್ರಶ್ನೆಗಳಿಗೆ ರವಿಮಾಮ ಉತ್ತರ ನೀಡಲು ನಿರ್ಧಾರ ಮಾಡಿದ್ದಾರೆ.

ಹೌದು ಇದೇ ತಿಂಗಳು ಮೇ 27 ರಂದು ಬಹುನಿರೀಕ್ಷಿತ ಸಿನಿಮಾ 'ಅಪೂರ್ವ' ಭರ್ಜರಿಯಾಗಿ ಬಿಡುಗಡೆ ಆಗುತ್ತಿದೆಯಂತೆ. ಬಹಳ ಲೇಟ್ ಆಗಿ ಲೇಟೆಸ್ಟ್ ಆಗಿ ಸಿನಿಮಾ ಮೂಡಿಬರುತ್ತಿದ್ದು, ಬರೀ ಒಂದು ಲಿಫ್ಟ್ ನಲ್ಲಿ ಇಡೀ ಸಿನಿಮಾವನ್ನು ಶೂಟ್ ಮಾಡಿರುವುದು ಈ ಚಿತ್ರದ ವಿಶೇಷ.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]


Kannada Movie 'Apoorva' all set to release on May 27th

ಇನ್ನು ಈ ಬಾರಿ ರವಿಮಾಮ ತಮ್ಮ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರಂತೆ. ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳದೇ ಇದ್ದ ಕ್ರೇಜಿಸ್ಟಾರ್ ಈ ಬಾರಿ ಅಚರಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ.[ಕನ್ನಡ ರಾಜ್ಯೋತ್ಸವ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಕೊಡುಗೆ]


Kannada Movie 'Apoorva' all set to release on May 27th

ಮೇ 27ಕ್ಕೆ ಭಾರಿ ಕುತೂಹಲ ಮೂಡಿಸಿರುವ 'ಅಪೂರ್ವ' ಸಿನಿಮಾ ತೆರೆ ಕಂಡರೆ ಮೇ 31ಕ್ಕೆ ರವಿಚಂದ್ರನ್ ಅವರ ಹುಟ್ಟುಹಬ್ಬವಿದೆ. ಆದ್ದರಿಂದ ಹುಟ್ಟುಹಬ್ಬದ ಎರಡು ದಿನ ಮುಂಚೆ 'ಅಪೂರ್ವ' ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ.[ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್]


Kannada Movie 'Apoorva' all set to release on May 27th

ಅಂದಹಾಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಅಥವಾ ನಟಿಯರ ಸಿನಿಮಾ ಬಿಡುಗಡೆಯಾಗುವ ಟ್ರೆಂಡ್ ಇತ್ತೀಚೆಗೆ ಕಡಿಮೆಯಾಗಿದ್ದು, ಆ ಟ್ರೆಂಡ್ ಮತ್ತೆ ಮುಂದುವರಿಸಲು ರವಿಮಾಮ ನಿರ್ಧರಿಸಿದ್ದಾರೆ. ಅಂತೂ ಇಂತೂ ಅಭಿಮಾನಿಗಳಿಗೆ ಈ ತಿಂಗಳಿನ ಕೊನೆಯ ವಾರ ಭರ್ಜರಿ ವಾರ ಆಗೋದು ಗ್ಯಾರೆಂಟಿ.

English summary
Kannada Movie 'Apoorva' all set to release on May 27th. Kannada Actor Ravichandran, Actress Apoorva' in the lead role. The movie is directed by Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada