ಜನಮನ ಗೆದ್ದ 'ಗುಳ್ಟು' ಚಿತ್ರಕ್ಕೆ ಬಂತು ಆಫರ್.!
Recommended Video

ಕಳೆದ ವಾರವಷ್ಟೇ ತೆರೆಕಂಡಿದ್ದ 'ಗುಳ್ಟು' ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚಗೆ ಸಿಗುತ್ತಿದೆ. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನ ಒಪ್ಪಿಕೊಂಡು, ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ.
ಹೀಗಿರುವಾಗ, ಚಿತ್ರತಂಡಕ್ಕೊಂದು ಸಂತಸದ ಸುದ್ದಿ ಸಿಕ್ಕಿದೆ. ಕನ್ನಡದಲ್ಲಿ ಕಮಾಲ್ ಮಾಡುತ್ತಿರುವ ಗುಳ್ಟು ಸಿನಿಮಾ ಈಗ ಪರಭಾಷೆಯಲ್ಲೂ ಮೋಡಿ ಮಾಡಲು ಸಿದ್ದವಾಗುತ್ತಿದೆ. ಇಂತಹದೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.
ಹೌದು, 'ಗುಳ್ಟು' ಸಿನಿಮಾದ ಯಶಸ್ಸು ನೋಡಿದ ಕೆಲವು ನಿರ್ಮಾಪಕರು 'ಗುಳ್ಟು' ಸಿನಿಮಾವನ್ನ ಮಲಯಾಳಂ ಮತ್ತು ತಮಿಳಿನಲ್ಲಿ ರೀಮೇಕ್ ಮಾಡಲು ಮನಸ್ಸು ಮಾಡಿದ್ದಾರೆ.

ಸದ್ಯ ರೀಮೇಕ್ ಕುರಿತಾಗಿ ಮಾತುಕತೆ ನಡೆಯುತ್ತಿದ್ದು, ಅಂತಿಮ ಹಂತ ಚರ್ಚೆ ಆಗುತ್ತಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಸದ್ಯದಲ್ಲೇ ಗುಳ್ಟು ಚಿತ್ರ ಕರ್ನಾಟಕದ ಆಚೆಯೂ ಮಿಂಚಲಿದೆ.
ನವೀನ್ ಶಂಕರ್ ಮತ್ತು ಸೋನು ಗೌಡ ಅಭಿನಯದ 'ಗುಳ್ಟು' ಚಿತ್ರವನ್ನ ಜರ್ನಾಧನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಅವಿನಾಶ್, ರಂಗಾಯಣ ರಘು ಅಂತಹ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications











