ಸೆಪ್ಟೆಂಬರ್ ನಲ್ಲಿ 'ಮುಂಗಾರು ಮಳೆ 2' ಆರ್ಭಟ ಆರಂಭ.?

By Suneetha

2006ರಲ್ಲಿ ಯೋಗರಾಜ್ ಭಟ್ರು 'ಮುಂಗಾರು ಮಳೆ' ಎಂಬ ಅದ್ಭುತ ಪ್ರೇಮಕಾವ್ಯ ಒಂದನ್ನು ತೆರೆ ಮೇಲೆ ತಂದಾಗ ಎಲ್ಲರೂ ಕೂಡ 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಅಂತ ಹಾಡಿದ್ದೇ ಹಾಡಿದ್ದು.

ಯಾರ ಬಾಯಲ್ಲಿ ಕೇಳಿದರೂ, 'ಅನಿಸುತಿದೆ ಯಾಕೋ ಇಂದು', 'ಒಂದೇ ಒಂದು ಸಾರಿ', 'ಕುಣಿದು ಕುಣಿದು ಬಾರೆ' ಅನ್ನೋ ಹಾಡುಗಳೇ ಗುನುಗುನಿಸುತ್ತಿದ್ದವು. ಅಷ್ಟರಮಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗೇ ಇತ್ತು.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]

Kannada movie 'Mungaru Male 2' all set to release on September 9

ಇದೀಗ ಅದೇ ಇತಿಹಾಸ ಮತ್ತೆ 'ಮುಂಗಾರು ಮಳೆ 2' ಮೂಲಕ ಮರುಕಳಿಸುತ್ತದಾ ಅಂತ ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಭಟ್ರ ಮುಂಗಾರು ಮಳೆ ಸುರಿದು ಭರ್ತಿ ಹತ್ತು ವರ್ಷ ಕಳೆದಿದ್ದು, ಇದೀಗ ಶಶಾಂಕ್ ಅವರ 'ಮಳೆ' ಸದ್ಯದಲ್ಲೇ ಧೋ ಎಂದು ಸುರಿಯಲಿದೆ.

ಅಂದಹಾಗೆ 'ಮುಂಗಾರು ಮಳೆ 2' ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಸುರಿಯಲಿದೆ ಎನ್ನಲಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಿ, ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆ ಮೇಲೆ ತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.[ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು]

Kannada movie 'Mungaru Male 2' all set to release on September 9

ಇನ್ನು ಸೆಪ್ಟೆಂಬರ್ 5 ರಂದು 'ಚೌತಿ' ಹಬ್ಬ ಇರೋದ್ರಿಂದ, ಗಣೇಶನಿಗೆ ಒಂದು ದೀರ್ಘ ದಂಡ ನಮಸ್ಕಾರ ಹಾಕಿ, ಸೆಪ್ಟೆಂಬರ್ 9 ರಂದು 'ಮುಂಗಾರು ಮಳೆ 2' ಚಿತ್ರವನ್ನು ತೆರೆ ಮೇಲೆ ತರಲು ನಿರ್ಮಾಪಕ ಗಂಗಾಧರ್ ಅವರು ತಿರ್ಮಾನ ಮಾಡಿದ್ದಾರಂತೆ.

ಇದೇ ಮೊದಲ ಬಾರಿಗೆ ಮಳೆ ಹುಡುಗ ಗಣೇಶ್ ಅವರಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಅವರು ಮಳೆ ಹುಡುಗಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ನಟಿ ಐಂದ್ರಿತಾ ರೇ, ನಟಿ ಶಿಲ್ಪಾ ಮಂಜುನಾಥ್, ಮತ್ತು ಮಳೆ ಅತಿಥಿಯಾಗಿ 'ಯು-ಟರ್ನ್' ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಮಿಂಚಿದ್ದಾರೆ.[ಮುಂಗಾರುಮಳೆ 2 ಡಿ.29ಕ್ಕೆ ಬರಬೇಕು, ಯಾಕೆ ಗೊತ್ತಾ?]

Kannada movie 'Mungaru Male 2' all set to release on September 9

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಗಣೇಶ್ ಅವರು ಅಪ್ಪ-ಮಗನ ಪಾತ್ರದಲ್ಲಿ ಮಿಂಚಿರೋದ್ರಿಂದ ಸಹಜವಾಗಿ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕೊಂಚ ಕುತೂಹಲ ಹೆಚ್ಚಾಗೇ ಇದೆ.['ಮುಂಗಾರು ಮಳೆ-2' ಚಿತ್ರತಂಡದಿಂದ ಸುವರ್ಣಾವಕಾಶ.! ನಿಮಗಾಗಿ...]

Kannada movie 'Mungaru Male 2' all set to release on September 9

ಒಟ್ನಲ್ಲಿ ಈ ಬಾರಿಯ ಮುಂಗಾರು ಮಳೆ ಆರ್ಭಟಕ್ಕೆ ಬಾಕ್ಸಾಪೀಸ್ ಕೊಚ್ಚಿಕೊಂಡು ಹೋಗುತ್ತೋ, ಏನ್ಕತೆ ಅಂತ ಸೆಪ್ಟೆಂಬರ್ ತಿಂಗಳಲ್ಲಿ ತಿಳಿದು ಬರಲಿದೆ.

More from Filmibeat

English summary
Kannada movie 'Mungaru Male 2' all set to releasing on September 9th. Kannada actor Ganesh, Kannada Actress Neha Shetty, Actress Aindrita Ray, Actor Ravichandran in the lead role. The movie is directed by Shashank.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X