ಕಲೆಕ್ಷನ್ ರಿಪೋರ್ಟ್: ಬಿಸಿಬಿಸಿಯಾಗಿ ಸೇಲಾದ 'ನೀರ್ ದೋಸೆ'
ನವರಸ ನಾಯಕ ಜಗ್ಗೇಶ್, ಹರಿಪ್ರಿಯಾ, ದತ್ತಣ್ಣ ಮತ್ತು ನಟಿ ಸುಮನ್ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನೀರ್ ದೋಸೆ', ಬಿಡುಗಡೆ ಆಗಿ ವಾರ ಆಗುತ್ತಾ ಬಂದರೂ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇಡೀ ಕರ್ನಾಟಕದಾದ್ಯಂತ ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಬಿಸಿಬಿಸಿಯಾಗಿ ಖರ್ಚಾದ ಪರಿಣಾಮ, ಬರೀ ಒಂದೇ ವಾರದಲ್ಲಿ 'ದೋಸೆ' ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]

ಡಬಲ್ ಮೀನಿಂಗ್ ಡೈಲಾಗ್, ನಾಲ್ವರ ಬಾಳಿನಲ್ಲಿ ನಡೆದ ಕಹಿ ಘಟನೆ, ನೋವು-ದುಮ್ಮಾನ, ಜೀವನದ ಹಲವು ಮಜಲುಗಳು ಇತ್ಯಾದಿಗಳನ್ನು ಒಳಗೊಂಡಿದ್ದ, 'ನೀರ್ ದೋಸೆ' ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಆಗಿತ್ತು.
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಕಳೆದ ಶುಕ್ರವಾರ (ಸೆಪ್ಟೆಂಬರ್ 2) ಕರ್ನಾಟಕದಾದ್ಯಂತ ತೆರೆ ಕಂಡಿದ್ದ 'ನೀರ್ ದೋಸೆ', ಬರೀ ಒಂದೇ ವಾರಕ್ಕೆ ಬರೋಬ್ಬರಿ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ಕಲೆಕ್ಷನ್ ವಿಚಾರವನ್ನು ಖುದ್ದು ಜಗ್ಗೇಶ್ ಅವರೇ, ಸೋಮವಾರ ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.['ನೀರ್ ದೋಸೆ' ಸವಿಯಲು ಗರ್ಲ್ ಫ್ರೆಂಡ್ ಜೊತೆ ಹೋದ್ರೆ 'ಗುಮ್ಮೋದು' ಖಚಿತ!]

ಇನ್ನು ಜಗ್ಗೇಶ್ ಅವರ ಪ್ರಕಾರ ಸುಮಾರು 10 ಕೋಟಿ ರೂಪಾಯಿ ಆಗಬಹುದಂತೆ. ಅದರಲ್ಲಿ ಶೇ.40ರಷ್ಟು ಬಾಡಿಗೆ, ಅದು-ಇದೂ ಅಂತ ಕಳೆದರೆ, ಮೊದಲ ವಾರದ ಒಟ್ಟು ನೆಟ್ ಕಲೆಕ್ಷನ್ ಸುಮಾರು 6 ಕೋಟಿ ಆಗುತ್ತದೆ ಎಂದಿದ್ದಾರೆ ನಟ ಜಗ್ಗೇಶ್.['ನೀರ್ ದೋಸೆ' ಅಂದ್ರೆ ಹಲಸಿನ ಹಣ್ಣಿದ್ದಂತೆ, ಬಿಚ್ಚಿ ನೋಡಿದ್ರೆ ಗೊತ್ತಾಗೋದು]

ಇದು ಜಗ್ಗೇಶ್ ಅವರ ಸಿನಿಮಾ ಪಯಣದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾವಂತೆ. ಸದ್ಯಕ್ಕೆ 'ನೀರ್ ದೋಸೆ' ಯಶಸ್ಸನ್ನು ಕಂಡು ಇನ್ನೂ ಒಂದು 15 ವರ್ಷ ನಟಿಸುವ ತಾಕತ್ ಬಂದಿದೆ, ಅಂತ ನಗೆ ಚಟಾಕಿಯನ್ನು ಜಗ್ಗೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಡಿಸಿದ್ದಾರೆ.


Click it and Unblock the Notifications











