For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ' ತೆಲುಗು ರೀಮೇಕ್ ಗೆ ಯಾರು ನಾಯಕ, ನಿರ್ದೇಶಕ.?

  By Bharath Kumar
  |

  'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಇತ್ತೀಚೆಗಷ್ಟೇ ಹೈದರಾಬಾದ್ ಗೆ ಹೋಗಿದ್ದರು. ಅಲ್ಲಿ ನಿರ್ದೇಶಕ ರಾಜಮೌಳಿನ ಭೇಟಿ ಮಾಡಿರುವ ಫೋಟೋ ವೈರಲ್ ಆಗಿತ್ತು.

  ಅಷ್ಟಕ್ಕೂ, ಸಂತೋಷ್ ಮತ್ತು ಕಾರ್ತಿಕ್ ಹೈದರಾಬಾದ್ ಗೆ ಯಾಕೆ ಹೋಗಿದ್ದರು ಎಂಬುದು ಸಖತ್ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಬ್ಬರು ಕೂಡ ಸಣ್ಣ ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಆದ್ರೆ, 'ರಾಜಕುಮಾರ' ಮೇಕರ್ಸ್ ಹೈದ್ರಾಬಾದ್ ಗೆ ಹೋಗಿದ್ದರ ಗುಟ್ಟು ಈಗ ರಟ್ಟಾಗಿದೆ.

  ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್.!

  ಇದು ಪುನೀತ್ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಆಗಿದ್ದರು, ಸ್ಯಾಂಡಲ್ ವುಡ್ ಗೂ ಸಂಭ್ರಮದ ವಿಷಯವೇ ಸರಿ. ಯಾಕೆ ಅಂತ ಮುಂದೆ ಓದಿ.....

  ಟಾಲಿವುಡ್ ಗೆ 'ರಾಜಕುಮಾರ'

  ಟಾಲಿವುಡ್ ಗೆ 'ರಾಜಕುಮಾರ'

  ಮೂಲಗಳ ಪ್ರಕಾರ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಟಾಲಿವುಡ್ ಗೆ ಕಾಲಿಡಲಿದೆಯಂತೆ. ಅರ್ಥಾಥ್ 'ರಾಜಕುಮಾರ' ತೆಲುಗಿಗೆ ರೀಮೇಕ್ ಆಗಲಿದೆಯಂತೆ.

  'ರಾಜಕುಮಾರ' ಚಿತ್ರ ನೋಡಿ 'ಪುನೀತ'ರಾದ ಮಾಜಿ ಪ್ರಧಾನಿ ದೇವೇಗೌಡ್ರು

  ಮಾತುಕತೆಗಾಗಿ ಹೈದರಾಬಾದ್ ಗೆ ಹೋಗಿದ್ದರು...!

  ಮಾತುಕತೆಗಾಗಿ ಹೈದರಾಬಾದ್ ಗೆ ಹೋಗಿದ್ದರು...!

  'ರಾಜಕುಮಾರ' ಚಿತ್ರದ ತೆಲುಗು ರೀಮೇಕ್ ಬಗ್ಗೆ ಚರ್ಚಿಸಲು ನಿರ್ದೇಶಕ ಸಂತೋಷ್ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರು ಹೈದರಾಬಾದ್ ಗೆ ಹೋಗಿದ್ದರಂತೆ.

  ರೀಮೇಕ್ ಗೆ ಸಖತ್ ಡಿಮ್ಯಾಂಡ್!

  ರೀಮೇಕ್ ಗೆ ಸಖತ್ ಡಿಮ್ಯಾಂಡ್!

  ಅಂದ್ಹಾಗೆ, 'ರಾಜಕುಮಾರ' ಚಿತ್ರದ ರೀಮೇಕ್ ಗೆ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಬೇಡಿಕೆಯಿದೆಯಂತೆ. ಆದ್ರೆ, ನಿರ್ಮಾಪಕರು ರೀಮೇಕ್ ರೈಟ್ಸ್ ಸೇಲ್ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  75 ದಿನಗಳನ್ನು ಪೂರೈಸಿದ 'ರಾಜಕುಮಾರ' ಕನ್ನಡದಲ್ಲಿ ಹಿಸ್ಟರಿ ಸೃಷ್ಟಿಸಿದ!

  'ರಾಜಕುಮಾರ'ನ ಜೊತೆ 'ಹೊಂಬಾಳೆ' ಜರ್ನಿ

  'ರಾಜಕುಮಾರ'ನ ಜೊತೆ 'ಹೊಂಬಾಳೆ' ಜರ್ನಿ

  ಯಾಕಂದ್ರೆ, 'ರಾಜಕುಮಾರ' ಚಿತ್ರದ ರೀಮೇಕ್ ನ್ನ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ತಾವೇ ನಿರ್ಮಾಣ ಮಾಡಲು ನಿರ್ಮಾಪಕ ಕಾರ್ತಿಕ್ ಗೌಡ ಯೋಚಿಸಿದ್ದಾರಂತೆ. ಈ ಮೂಲಕ ಕನ್ನಡದ ನಿರ್ಮಾಪಕ ಟಾಲಿವುಡ್ ಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದಾರೆ.

  'ಬೊಂಬೆ ಹೇಳುತೈತೆ' ಹಾಡಿಗೂ ಮುಂಚೆ 2 ಕೋಟಿ ದಾಟಿದ್ದ ಹಾಡು ಯಾವುದು?

  ಡೈರೆಕ್ಟರ್ ಯಾರು?

  ಡೈರೆಕ್ಟರ್ ಯಾರು?

  ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ಮೂಲ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಆಕ್ಷನ್ ಕಟ್ ಹೇಳಲು ಚಿಂತಿಸಿದ್ದಾರಂತೆ.

  'ರಾಜಕುಮಾರ' ಯಾರಾಗಲಿದ್ದಾರೆ?

  'ರಾಜಕುಮಾರ' ಯಾರಾಗಲಿದ್ದಾರೆ?

  ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರವನ್ನ ಈಗ ತೆಲುಗಿನಲ್ಲಿ ಯಾರು ಮಾಡುತ್ತಾರೆ ಎಂಬ ಪ್ರಶ್ನೆ, ಕುತೂಹಲ ಕಾಡತ್ತಿದೆ.

  ಪುನೀತ್ 'ರಾಜಕುಮಾರ'ನಿಗೆ ಶತ್ರುವಾದ 'ಆ' ಕೇಬಲ್ ಚಾನಲ್.!

  ರಾಜಮೌಳಿ ಭೇಟಿ ಯಾಕೆ?

  ರಾಜಮೌಳಿ ಭೇಟಿ ಯಾಕೆ?

  'ರಾಜಕುಮಾರ' ಚಿತ್ರದ ರೀಮೇಕ್ ಗೂ ಬಾಹುಬಲಿ ನಿರ್ದೇಶಕ ರಾಜಮೌಳಿ ಭೇಟಿಗೂ ಏನ್ ಸಂಬಂಧ ಎಂದು ನೋಡಿದ್ರೆ, ರಾಜಮೌಳಿ ಅವರನ್ನ ಭೇಟಿ ಮಾಡಿದ್ದು, ಕೇವಲ ಯೋಗಕ್ಷೇಮ ವಿಚಾರಿಸಿವುದಕ್ಕೆ ಮಾತ್ರ ಎನ್ನಲಾಗಿದೆ.

  'ರಾಜಕುಮಾರ'ನ ಮುಂದೆ ಮಂಡಿಯೂರಿದ 'ಬಾಹುಬಲಿ-2'

  ಶತದಿನದತ್ತ 'ರಾಜಕುಮಾರ' ಹೆಜ್ಜೆ

  ಶತದಿನದತ್ತ 'ರಾಜಕುಮಾರ' ಹೆಜ್ಜೆ

  ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನ ಪುಡಿ ಮಾಡಿ ಮುನ್ನಗ್ಗುತ್ತಿರುವ 'ರಾಜಕುಮಾರ' 100ನೇ ದಿನದ ಸನಿಹದಲ್ಲಿದೆ. ಪುನೀತ್ ರಾಜ್ ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಸಿದ್ದಾರೆ.

  English summary
  According to Sources Kannada Movie Raajkumara will remade in Telugu. Hombale Films will be venturing into Tollywood for the first time, producing this film, and Santhosh Ananddramm will be directing the Telugu version too says Source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X