ಕಿಚ್ಚ 'ರನ್ನ' 7ಕ್ಕೆ ಇಲ್ಲ 14ಕ್ಕೂ ಡೌಟು, ಏನು ಕಾರಣ?
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ 'ರನ್ನ' ಏಪ್ರಿಲ್ ತಿಂಗಳಿಂದಲೂ ರಿಲೀಸಾಗುತ್ತೆ ಅಂತ ಸಿನಿಪ್ರಿಯರು ಕಾಯ್ತಾನೇ ಇದ್ದಾರೆ. ಆದ್ರೆ ಏಪ್ರಿಲ್ ಎರಡಕ್ಕೆ ಬರ್ತೀವಿ ಅಂದ ರನನ್ನ ಮೇ ಒಂದಕ್ಕೆ ಬಂದೇ ಬರ್ತೀವಿ ಅಂತ ತಯಾರಾಗಿತ್ತು.
ಮೇ ಒಂದರಿಂದ ಮೇ 7ಕ್ಕೆ ಚಿತ್ರ ಮುಂದೆ ಹೋಯ್ತು. ಈಗ ಮೇ 7ಕ್ಕೆ ಕೂಡ ಚಿತ್ರ ರಿಲೀಸಾಗಲ್ಲ ಅನ್ನೋ ಸುದ್ದಿ ಗ್ಯಾರಂಟಿಯಾಗಿದೆ. ಈ ವಿಷಯ ಚಿತ್ರಕ್ಕಾಗಿ ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ರನ್ನ ಆರಂಭವಾದಾಗಿನಿಂದ್ಲೆ ಒಂದಲ್ಲ ಒಂದು ಅಡೆತಡೆಗಳನ್ನ ಎದುರಿಸ್ತಾ ಇದೆ. ಇದಕ್ಕೆ ನಿರ್ಮಾಪಕರು ಕಾರಣ, ನಿರ್ಮಾಪಕರಿಗೆ ಹಣದ ಕೊರತೆಯಾಗಿರೋದು ಒಂದು ಕಾರಣವಾದ್ರೆ ಕಿಚ್ಚ ಕೂಡ ಕಾರಣ ಅಂತಿದೆ ಗಾಂಧಿನಗರ. ಯಾಕೆ? ಏನು ಕಥೆ ಅನ್ನೋ ಸಂಪೂರ್ಣ ಮಾಹಿತಿಗೆ ಸ್ಲೈಡ್ ನೋಡಿ.

ರನ್ನನ ಖರ್ಚಿಗೆ ನಿರ್ಮಾಪಕ ಕಂಗಾಲು!
ರನ್ನ ಬಿಗ್ ಬಜೆಟ್ ಸಿನಿಮಾ ಅನ್ನೋದು ನಿರ್ಮಾಪಕರಿಗೆ ಗೊತ್ತಿತ್ತು. ಆದ್ರೆ ನಿರ್ಮಾಪಕರು ಅಂದುಕೊಂಡಿದ್ದಕ್ಕಿಂತ ಡಬಲ್ ಖರ್ಚಾಗಿದೆಯಂತೆ. ನಿರ್ಮಾಪಕರು ಹಣಕ್ಕಾಗಿ ಈಗ ಹಲುಬುವಂತಾಗಿದೆ ಅನ್ನೋದು ಗಾಂಧಿನಗರದ ಬಲ್ಲ ಮೂಲಗಳ ಮಾಹಿತಿ.

ಕಿಚ್ಚನಿಂದಾಯ್ತಾ ಹೆಚ್ಚು ಖರ್ಚು
ಮೇಕಿಂಗ್ ವಿಷಯದಲ್ಲಿ ಕಿಚ್ಚ ತಾವೇ ಸ್ವತಃ ತಲೆಕೆಡಿಸಿಕೊಂಡು ಸಿನಿಮಾವನ್ನ ತೆರೆಗೆ ತರ್ತಿದ್ದಾರಂತೆ. ನಂದಕಿಶೋರ್ ನಿರ್ದೇಶಕರಾದ್ರೂ ಸೆಟ್ ನಲ್ಲಿ ಕಿಚ್ಚ ಸುದೀಪ್ ಹೇಳಿದ್ದೇ ಅಂತೀಮ. ಹಾಗಾಗಿ ಮೊದಲ ಫೋಟೋ ಶೂಟ್ ನ ಸೂಟ್ ಗಳಿಗೆ ರು.10 ಲಕ್ಷದಿಂದ ಶುರುವಾಗಿ ಸಣ್ಣ ಸಣ್ಣ ವಿಷಯಗಳಿಗೂ ಲಕ್ಷದ ಲೆಕ್ಕದಲ್ಲಿ ಖರ್ಚಾಗಿದೆಯಂತೆ.

ದುಂದು ವೆಚ್ಚ ಮಾಡಿದ್ರಾ ಸುದೀಪ್?
ಸುದೀಪ್ ರೀಮೇಕ್ ಹಣೆಪಟ್ಟಿ ಹೊತ್ತುಕೊಂಡೂ ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದೇ ನಿರ್ಮಾಪಕರಿಗೆ ಸಹಾಯವಾಗ್ಲಿ ಅಂತ. ಹಾಗಾಗಿ ಶತಾಯಗತಾಯ ಚಿತ್ರ ಗೆಲ್ಲಿಸೋಕೆ ಹೊರಟಿರೋ ಕಿಚ್ಚ ಸಣ್ಣ ಸಣ್ಣ ವಿಷಯಗಳಿಗೂ ದುಂದು ವೆಚ್ಚ ಮಾಡಿದ್ದಾರೆ ಅಂತಿದೆ ರನ್ನ ಲೈಟ್ ಹೌಸ್.

ಸುದೀಪ್ ಗೆ ಸಂಭಾವನೆ ಕೊಟ್ಟಿಲ್ಲ
ಈ ಹಿಂದೆ ರನ್ನ ನಿರ್ಮಾಪಕರ ಚೆಕ್ ಬೌನ್ಸ್ ಪ್ರಕರಣದ ಮೂಲಕ ನಿರ್ಮಾಪಕರ ಜೇಬು ಖಾಲಿ ಅನ್ನೋ ಸುದ್ದಿ ಸಿಕ್ಕಿತ್ತು. ಅದು ಸತ್ಯವೂ ಹೌದು. ಅದಕ್ಕಿಂತ ಅಚ್ಚರಿಯ ವಿಚಾರ ಅಂದ್ರೆ ಸಿನಿಮಾ ಮುಗಿದ್ರೂ ನಿರ್ಮಾಪಕರು ಸುದೀಪ್ ರಿಗೆ ಅರ್ಧಕರ್ಧ ಸಂಭಾವನೆ ಹಾಗೆ ಉಳಿಸಿಕೊಂಡಿದ್ದಾರಂತೆ.

ರನ್ನ ಬರೋದ್ಯಾವಾಗ?
ಇದೆಲ್ಲದರ ನಡುವೆ ಏಪ್ರಿಲ್ 2ಕ್ಕೆ ತೆರೆಗೆ ಬರೋಕೆ ರೆಡಿ ಅನ್ನೋ ಯೋಚನೆಯಲ್ಲಿದ್ದ ರನ್ನ ಇನ್ನೂ ಒಂದು ಹಾಡನ್ನು ಭರ್ಜರಿಯಾಗಿ ಶೂಟ್ ಮಾಡಿದೆ. ಈಗ ಚಿತ್ರ ಅಂತಿಮ ಹಂತದ ಕೆಲಸದಲ್ಲಿದೆ. ಆದ್ರೆ ಕೆಲಸವನ್ನೇ ಮುಗಿಸದೆ ಮೇ 7ಕ್ಕೆ ರಿಲೀಸ್ ಅನೌನ್ಸ್ ಮಾಡಿದ್ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ಮೇ ತಿಂಗಳ ಕೊನೆಯಲ್ಲಿ ರನ್ನ
ಮೇ ತಿಂಗಳ ಮೂರನೇ ವಾರ ರನ್ನ ಬರ್ತಾನೆ ಅಂತಿದೆ ಗಾಂಧಿನಗರದ ಪಂಡಿತರ ಪಡಸಾಲೆ. ಬೇಸಿಗೆ ರಜೆಯಲ್ಲೇ ಬಬ್ಬರ್ ಶೇರ್ ಭರ್ಜರಿ ಹವಾ ನೋಡೋಕೆ ಕಾದಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾಗಿದೆ.


Click it and Unblock the Notifications











