ಲಗಾನ್, ಸ್ವದೇಶ್ ಸಿನಿಮಾಗಳ ನಿರ್ದೇಶಕರ ಜೊತೆಗೆ ಕೈ ಜೋಡಿಸಿದ ನಟ ರಿಷಬ್ ಶೆಟ್ಟಿ!: ಏನಿದು ಹೊಸ ಅಪ್‌ಡೇಟ್?

ಕಾಂತಾರ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕನ್ನಡದ ನಿರ್ದೇಶಕ, ನಟ ಮತ್ತು ಬರಹಗಾರ ರಿಷಬ್ ಶೆಟ್ಟಿ ಈಗ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಈ ಹಿಂದೆಯೇ ಅವರು ದೊಡ್ಡ ಹಿಂದಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಇದಕ್ಕೆ ತಕ್ಕಂತೆ ಹೊಸ ಅಪ್‌ಡೇಟ್ ಸಿಕ್ಕಿದೆ.

2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಪ್ರಚಂಡ ಯಶಸ್ಸು ಗಳಿಸಿ, ದೇಶದಾದ್ಯಂತ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಗಳಿಸಿತ್ತು. ಸದ್ಯ ನಟ ಈಗ 'ಕಾಂತಾರಾ ಎ ಲೆಜೆಂಡ್: ಅಧ್ಯಾಯ 1'ರ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ರಿಷಬ್ ಶೆಟ್ಟಿ ಬಾಲಿವುಡ್‌ನ ಖ್ಯಾತ ನಿರ್ದೇಶಕರನ್ನು ಭೇಟಿಯಾಗಿದ್ದಾರೆ.

Kantara actor Rishab Shetty spotted outside Ashutosh Gowariker office

ಲಗಾನ್, ಸ್ವದೇಶ್ ಸಿನಿಮಾಗಳ ನಿರ್ದೇಶಕರ ಸಿನಿಮಾದಲ್ಲಿ ರಿಷಬ್ ಶೆಟ್ಟಿ!?

ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಪ್ರಿಕ್ವೇಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಜನವರಿ 12 ರಂದು ಮುಂಬೈನಲ್ಲಿರುವ ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಕಚೇರಿಗೆ ಭೇಟಿ ನೀಡಿದ್ದಾರೆ. ಇದು ಅವರ ಬಾಲಿವುಡ್ ಪಾದಾರ್ಪಣೆ ಬಗ್ಗೆ ಹಲವು ವದಂತಿಗಳನ್ನು ಹರಡಿದೆ.

ಜನವರಿ 12 ರ ಶುಕ್ರವಾರ ಮುಂಬೈನಲ್ಲಿರುವ ಅಶುತೋಷ್ ಗೋವರಿಕರ್ ಅವರ ಕಚೇರಿಗೆ ಭೇಟಿ ರಿಷಬ್ ಶೆಟ್ಟಿ ಭೇಟಿ ನೀಡಿದ್ದು, ಈ ವೇಳೆ ಅಲ್ಲಿದ್ದ ಮಾಧ್ಯಮಗಳ ಮುಂದೆ ನಿರ್ದೇಶಕರ ಜೊತೆಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಅದರಲ್ಲೂ ರಿಷಬ್ ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಲಗಾನ್ ನಿರ್ದೇಶಕನ ಸಿನಿಮಾದಲ್ಲಿ ರಿಷಬ್!

ಸೆಪ್ಟೆಂಬರ್ 2023 ರಲ್ಲಿ, ಅಶುತೋಷ್ ಗೋವರಿಕರ್ ಅವರು ರಿಷಬ್ ಶೆಟ್ಟಿ ಅವರೊಂದಿಗೆ ದೊಡ್ಡ ಪ್ಯಾನ್ ಇಂಡಿಯಾ ಫಿಲ್ಮ್‌ನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಈ ಭೇಟಿ ಕೂಡ ನಡೆದಿದೆ. ಮೂಲಗಳ ಪ್ರಕಾರ, ಅಶುತೋಷ್ ಗೋವರಿಕರ್ ಮತ್ತು ರಿಷಬ್ ಶೆಟ್ಟಿ ಹಲವು ದಿನಗಳಿಮದ ಒಮದು ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತಿದ್ದಾರೆ.

Kantara actor Rishab Shetty spotted outside Ashutosh Gowariker office

"ಅಶುತೋಷ್ ಗೋವರಿಕರ್ ಅವರು ಒಂದು ದೊಡ್ಡ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ರಿಷಬ್ ಶೆಟ್ಟಿ ಅತ್ಯುತ್ತಮ ಆಯದಕೆ ಎಂದು ಅಂದುಕೊಂಡಿದ್ದಾರೆ. ಹೀಗಾಗಿ ಕಳೆದ ಕೆಲವು ತಿಂಗಳುಗಳಲ್ಲಿ ರಿಷಬ್ ಶೆಟ್ಟಿ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದಾರೆ. ಇಬ್ಬರೂ ತಮ್ಮ ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ. ಸ್ವತಃ ಬರಹಗಾರರಾಗಿ, ರಿಷಬ್ ಸ್ಕ್ರಿಪ್ಟ್‌ನಲ್ಲಿ ಅಶುತೋಷ್‌ರೊಂದಿಗೆ ಉತ್ತಮವಾಗಿ ಕೈ ಜೋಡಿಸಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಸೇರಲು ಸಿದ್ಧರಾಗಿದ್ದಾರೆ" ಎಂದು ಮೂಲಗಳು ಬಹಿರಂಗಪಡಿಸಿವೆ.

" ಸಿನಿಮಾದ ಸ್ಕ್ರಿಪ್ಟ್ ಲಾಕ್ ಆಗಿದ್ದು, ಮುಂದಿನ ಎರಡು ತಿಂಗಳಲ್ಲಿ ಅಶುತೋಷ್ ಗೋವರಿಕರ್ ಚಿತ್ರವನ್ನು ಪ್ರಿ-ಪ್ರೊಡಕ್ಷನ್ ಹಂತಕ್ಕೆ ತೆಗೆದುಕೊಳ್ಳಲಿದ್ದಾರೆ. 2024 ರ ಮಧ್ಯದಲ್ಲಿ ಈ ಹೆಸರಿಡದ ಸಿನಿಮಾ ಶುರುವಾಗಲಿದೆ. ಅಥವಾ ರಿಷಬ್ ಶೆಟ್ಟಿ ಕಾಂತಾರದ ಪ್ರಿಕ್ವೆಲ್ ಮುಗಿಸಿದ ನಂತರ ನಡೆಯಲಿದೆ. ಎಲ್ಲಾ ಶೆಡ್ಯೂಲ್ ಕಾಂತಾರ 2 ರ ಶೂಟಿಂಗ್ ಮತ್ತು ಪೋಸ್ಟ್-ಪ್ರೊಡಕ್ಷನ್‌ ವೇಳಾಪಟ್ಟಿ ಮೇಲೆ ಅವಲಂಭಿಸಿವೆ" ಎಂದು ಮಾಹಿತಿ ಸಿಕ್ಕಿದೆ. ಕಾಂತಾರ ಅಧ್ಯಾಯ ಒಂದು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

More from Filmibeat

English summary
Rishab Shetty poses with Ashutosh Gowariker outside the latter's office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X