ಕದಂಬ ಕಾಲದ ದಂತಕಥೆ, ನಾಗಸಾಧು ಆಗಿ ರಿಷಬ್ ಶೆಟ್ಟಿ; 'ಕಾಂತಾರ್-1' ಸ್ಟೋರಿ ಲೀಕ್?

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್-1' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ತೆರೆಗಪ್ಪಳಿಸಲು 17 ದಿನಗಳು ಮಾತ್ರ ಬಾಕಿಯಿದೆ. ಚಿತ್ರದ ಪ್ರಮೋಷಶ್ ಆರಂಭಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಿದೇಶಗಳಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀಯಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿತ್ತು. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಕರಾವಳಿಯ ಆಚರಣೆ ಹಾಗೂ ದೈವಗಳ ಕಥೆಗಳನ್ನು ರಿಷಬ್ ಶೆಟ್ಟಿ ತೆರೆಗೆ ತಂದಿದ್ದರು. ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ಪರಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

Kantara Chapter-1 Storyline Leaked Online US Ticketing Site Sparks Buzz Ahead of Release

ಚಾಪ್ಟರ್- 1 ಕಥೆ ಏನು? ಎನ್ನುವ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಪೋಸ್ಟರ್‌ಗಳು ಬಿಟ್ಟರೆ ಟೀಸರ್ ಕೂಡ ಬಂದಿಲ್ಲ. ಸಿನಿಮಾ ಪ್ರಾರಂಭಿಸಿದಾಗ ಸಣ್ಣ ಗ್ಲಿಂಪ್ಸ್ ಬಿಟ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಇನ್ನುಳಿದಂತೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ 'ಕಾಂತಾರ'-1 ಸ್ಟೋರಿಲೈನ್ ಹಾಗೂ ರಿಷಬ್ ಶೆಟ್ಟಿ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಯುಎಸ್‌ ಸಿನಿಮಾ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್ ಚಿತ್ರದ ಕಥೆಯ ಸಾರಾಂಶವನ್ನು ಹಂಚಿಕೊಂಡಿರುವುದಾಗಿ ಹೇಳಲಾಗ್ತಿದೆ.

30ಕ್ಕೂ ದೇಶಗಳಲ್ಲಿ ಏಕಕಾಲಕ್ಕೆ 'ಕಾಂತಾರ-1' ಸಿನಿಮಾ ಬಿಡುಗಡೆ ಆಗಲಿದೆ. ಫಾರ್ಸ್ ಫಿಲ್ಮ್ ಕಂಪನಿ LLC ಸಂಸ್ಥೆ ಚಿತ್ರದ ಓವರ್‌ಸೀಸ್ ವಿತರಣೆ ಹಕ್ಕು ಕೊಂಡುಕೊಂಡಿದೆ. ಪ್ರತ್ಯಂಗಿರಾ ಸಿನೆಮಾಸ್ ಸಂಸ್ಥೆ ಉತ್ತರ ಅಮೆರಿಕಾ ರೈಟ್ಸ್ ಧಕ್ಕಿಸಿಕೊಂಡಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಹಾಗಾಗಿ ಅಲ್ಲಿನ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ಚಿತ್ರದ ಸ್ಟೋರಿಲೈನ್ ಹಾಕಿದ್ದಾರೆ ಎಂದು ನೆಟ್ಟಿಗರು ವೈರಲ್ ಮಾಡ್ತಿದ್ದಾರೆ.

Kantara Chapter-1 Storyline Leaked Online US Ticketing Site Sparks Buzz Ahead of Release

2022ರ ಸಂಚಲನ ಘಟನೆಗಳಿಗೂ ಬಹಳ ಹಿಂದೆಯೇ, ಒಂದು ದಂತಕಥೆ ಹುಟ್ಟಿಕೊಂಡಿತು. ಕದಂಬ ರಾಜವಂಶದ ಆಳ್ವಿಕೆ ಅವಧಿಯಲ್ಲಿ ಅಂದರೆ 300CEಯಲ್ಲಿ ನಡೆಯುವ ಕಾಂತಾರ: ಅಧ್ಯಾಯ-1 ಕಥೆ ಬನವಾಸಿಯ ಅತೀಂದ್ರಿಯ ಕಾಡುಗಳಿಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತದೆ. ಅಲ್ಲಿ ದೈವಿಕ ಶಕ್ತಿಗಳು ಜಾಗೃತಗೊಳ್ಳುತ್ತವೆ. ರಿಷಬ್ ಶೆಟ್ಟಿ ಉಗ್ರ ನಾಗಸಾಧುವಾಗಿ ರೂಪಾಂತರಗೊಳ್ಳುತ್ತಾರೆ. ಪ್ರಾಚೀನ ಆಚರಣೆಗಳು, ಅಲೌಕಿಕ ಶಕ್ತಿಗಳು ಮತ್ತು ಬುಡಕಟ್ಟು ಜನರ ಹೋರಾಟದ ಕಥೆ ಇದಾಗಿದೆ ಎಂದು ಹೇಳಲಾಗ್ತಿದೆ.

ಸದ್ಯ ಈ ಸ್ಟೋರಿಲೈನ್‌ ಕೇಳಿ ಸಿನಿರಸಿಕರು ಫಿದಾ ಆಗಿದ್ದಾರೆ. ರಿಷಬ್ ಅಂಡ್ ಟೀಂ ಬಹಳ ದೊಡ್ಡದಾಗಿ ಪ್ಲ್ಯಾನ್ ಮಾಡಿದ್ದಾರೆ. ಸೆಪ್ಟೆಂಬರ್ 2ರಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ಅದರ ಝಲಕ್ ನೋಡಬಹುದು. ಅಕ್ಟೋಬರ್ 2ಕ್ಕೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದು ಅದೇ ವೆಬ್‌ಸೈಟ್‌ನಲ್ಲಿ ಚಿತ್ರದ ಕಾಲಾವಧಿ 1 ಗಂಟೆ 45 ನಿಮಿಷ ಎಂದು ನಮೂದಿಸಲಾಗಿದೆ.

ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 7 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಬರೀ ಮೇಕಿಂಗ್ ವೀಡಿಯೋ ನೋಡಿ ಸಿನಿರಸಿಕರು ಹುಬ್ಬೇರಿಸಿದ್ದರು. ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಅಂದಾಜಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ನಡೆದಿದೆ. ಖ್ಯಾತ ವಿತರಣೆ ಸಂಸ್ಥೆ ರೈಟ್ಸ್‌ ಕೊಂಡುಕೊಳ್ಳಲು ಮುಗಿಬಿದ್ದಿವೆ.

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ 'ಕಾಂತಾರ- 1' ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಚಿತ್ರಕ್ಕೆ ಓಪನಿಂಗ್ ಸಿಗುವ ನಿರೀಕ್ಷೆಯಿದೆ. ಸಿನಿಮಾ ಹೇಗಿದೆ ಎನ್ನುವುದು ಬಾಕ್ಸಾಫೀಸ್ ಗಳಿಕೆಯನ್ನು ನಿರ್ಧರಿಸುತ್ತದೆ.

More from Filmibeat

English summary
Kantara Chapter-1 Story Rumors Go Viral Ahead of October 2 Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X