»   » ಮುರಿದು ಬಿತ್ತಾ ಕಪಿಲ್ ಶರ್ಮಾ ಮತ್ತು ಗಿನ್ನಿಯ ಪ್ರೇಮ ಸಂಬಂಧ.?

ಮುರಿದು ಬಿತ್ತಾ ಕಪಿಲ್ ಶರ್ಮಾ ಮತ್ತು ಗಿನ್ನಿಯ ಪ್ರೇಮ ಸಂಬಂಧ.?

Posted By:
Subscribe to Filmibeat Kannada

ಅದ್ಯಾಕೋ, ಬಾಲಿವುಡ್ ಟಿವಿ ನಿರೂಪಕ ಕಪಿಲ್ ಶರ್ಮಾಗೆ ಟೈಂ ಸರಿಯಿಲ್ಲ. ಒಂದರ ಹಿಂದೆ ಮತ್ತೊಂದರಂತೆ ಕಷ್ಟಗಳು, ಸಂಕಷ್ಟಗಳು ಎದುರಾಗುತ್ತಲೇ ಇದೆ. ಇತ್ತೀಚೆಗಷ್ಟೇ 'ಕಪಿಲ್ ಶರ್ಮಾ ಶೋ' ನಿಂತು ಹೋಗಿತ್ತು. ಇದೀಗ, ಕಪಿಲ್ ಲವ್ ಕೂಡ ಬ್ರೇಕ್ ಅಪ್ ಆಗಿದ್ಯಂತೆ.

ಬಾಲಿವುಡ್ ನಲ್ಲಿ ಗುಲ್ಲೆದ್ದಿರುವ ಪ್ರಕಾರ, ಕಪಿಲ್ ಶರ್ಮಾ-ಗಿನ್ನಿ ಚತ್ರಾತ್ ಪ್ರೇಮ ಸಂಬಂಧ ಮುರಿದು ಬಿದ್ದಿದೆ. ಇವರಿಬ್ಬರ ಮಧ್ಯೆ ಮನಸ್ತಾಪ ಮೂಡಿದ್ದು, ಇಬ್ಬರು ಬೇರೆಯಾಗಲು ನಿರ್ಧರಿಸಿದ್ದಾರಂತೆ.

Kapil Sharma and Ginni Chatrath love Break up

ಇದಕ್ಕೆ ನಿಖರವಾದ ಕಾರಣವೇನು ಎಂಬುದು ಬಹಿರಂಗವಾಗಿಲ್ಲದಿದ್ದರೂ, ಕಪಿಲ್ ಶರ್ಮಾ ಅವರಿಗೆ ಸಹನಟಿಯೊಬ್ಬರ ಜೊತೆ ಸಂಬಂಧವಿರುವುದು ಇದಕ್ಕೆ ಕಾರಣವೆನ್ನಲಾಗಿದೆ. ಈ ವಿಷ್ಯ ತಿಳಿದ ಗಿನ್ನಿ, ಕಪಿಲ್ ಅವರಿಂದ ದೂರುವಾಗಿದ್ದಾಳಂತೆ.

ಪರಸ್ಪರ ಪ್ರೀತಿಸುತ್ತಿದ್ದ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರಾತ್ ಅವರು ಈ ವರ್ಷದಲ್ಲಿ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದರು. ಆದ್ರೀಗ, ಮದುವೆಗೂ ಮುಂಚೆಯೇ ಇಬ್ಬರು ದೂರುವಾಗಿರುವುದು ಬಿಸಿಬಿಸಿ ಚರ್ಚೆಯಾಗುತ್ತಿದೆ.

English summary
Kapil Sharma had been in news for his show going off air. But looks like yet another news of Kapil is going viral on social media. There are reports that Kapil Sharma and Ginni Chatrath ended their relationship.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada