ಪ್ರಭಾಸ್ 'ಸ್ಪಿರಿಟ್‌'ಗೆ ಕರೀನಾ ಕಪೂರ್ ಸಹಿ!

ನಟ ಪ್ರಭಾಸ ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ನಟ ಪ್ರಭಾಸ್. ಪ್ರಭಾಸ ನಟಿಸುತ್ತಿರುವ ಎಲ್ಲಾ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿವೆ. ಹಾಗಾಗಿ ಪ್ರಭಾಸ ಸಿನಿಮಾ ಮತ್ತು ತಾರಾಬಳಗದ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡುತ್ತದೆ.

ಆದಿಪುರುಷ್, ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಭಾಸ್ ಮುಂದಿನ ಸಿನಿಮಾ 'ಸ್ಪಿರಿಟ್'. ಈ ಚಿತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರವನ್ನು ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದು, ಪ್ರಭಾಸ್ ನಾಯಕನಾಗಿ ಅಬ್ಬರಿಸಲಿದ್ದಾರೆ.

ಹಾಗಾಗಿ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ನಟಿಸುವ ನಾಯಕಿ ಯಾರು ಎನ್ನುವ ಕುತೂಹಲ ಮೂಡಿತ್ತು. ಈ ಹಿಂದೆಯೇ, ಕಳೆದ ವರ್ಷ ಈ ಬಗ್ಗೆ ಸುದ್ದಿ ಕೂಡ ಹಬ್ಬಿತ್ತು ಬಾಲಿವುಡ್ ನಟಿ ಕರೀನಾ ಕಪೂರ್ ಪ್ರಭಸ್ ಜೊತೆಗೆ ನಟಿಸಲಿದ್ದಾರೆ ಎನ್ನಲಾಗಿತ್ತು, ಈ ಬಗ್ಗೆ ಅಪ್ಡೇಟ್ ಬಂದಿದ್ದು, ನಾಯಕಿ ಫಿಕ್ಸ್ ಆಗಿದ್ದಾರೆ.

ಪ್ರಭಾಸ್ ಜೊತೆ ಕರೀನಾ!

ಪ್ರಭಾಸ್ ಜೊತೆ ಕರೀನಾ!

ಹೌದು ಈ ಹಿಂದೆಯೇ ಕಳೆದ ವರ್ಷ ಪ್ರಭಾಸ್ ಜೊತೆಗೆ 'ಸ್ಪಿರಿಟ್' ಸಿನಿಮಾದಲ್ಲಿ, ನಟಿ ಕರೀನಾ ಕಪೂರ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆಗ ಈ ಸುದ್ದಿ ಗಾಸಿಪ್ ರೂಪದಲ್ಲಿ ಹರಿದಾಡಿತ್ತು. ಈಗ ಮತ್ತೆ ಇದೆ ಸುದ್ದಿ ಚಾಲ್ತಿಯಲ್ಲಿದೆ. ಇನ್ನೇನು ಸಿನಿಮಾ ಚಿತ್ರೀಕರಣ ಶುರುವಾಗುವ ದಿನಗಳು ಹತ್ತಿರ ಬರುತ್ತಿದೆ. ಹಾಗಾಗಿ ಚಿತ್ರದ ನಾಯಕಿ ಕರೀನಾ ಕಪೂರ್ ಎನ್ನುವ ಸುದ್ದಿ ಮತ್ತೆ ಹರಿದಾಡುತ್ತಿದೆ.

ಸ್ಪಿರಿಟ್‌ನಲ್ಲಿ ಬಾಲಿವುಡ್‌ ಬೇಬೋ!

ಸ್ಪಿರಿಟ್‌ನಲ್ಲಿ ಬಾಲಿವುಡ್‌ ಬೇಬೋ!

ಈಗ ಮತ್ತೆ ಸ್ಪಿರಿಟ್ ಚಿತ್ರದ ನಾಯಕಿ ಕರೀನಾ ಕಪೂರ್ ಎನ್ನುವ ಸುದ್ದಿ ಹರಿದಾಡಲು ಕಾರಣ ಚಿತ್ರದ ಹೊಸ ಅಪ್ಡೇಟ್. ಹೌದು ನಟಿ ಕರೀನಾ ಕಪೂರ್ ಸ್ಪಿರಿಟ್ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ. ಪ್ರಭಾಸ್ ಜೊತೆಗೆ ಕರೀನಾ ಕಪೂರ್ ನಟಿಸುವುದು ಪಕ್ಕಾ ಆಗಿದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ. ಸ್ಪಿರಿಟ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ತೆಲುಗು, ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಕೂಡ ಸಿನಿಮಾ ಬರಲಿದೆ. ಹಾಗಾಗಿಯೇ ಪ್ಯಾನ್ ಇಂಡಿಯಾ ಚಿತ್ರರಂಗಗಳ ಕಲಾವಿದರು ಈ ಸಿನಿಮಾಗೆ ಮುಖ್ಯವಾಗುತ್ತಾರೆ. ಸದ್ಯ ಪ್ರಭಾಸ್ ಜೊತೆಗೆ ನಾಯಕಿಯಾಗಿ ಕರೀನಾ ಕಪೂರ್ ಖಾನ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಎನ್ನುವ ವಿಚಾರ ಮಾತ್ರವೇ ರಿವೀಲ್ ಆಗಿದೆ. ಇದನ್ನು ಚಿತ್ರತಂಡ ಇನ್ನೂ ಅಧಿಕೃತ ಪಡಿಸಿಲ್ಲ.

'ಲಾಲ್ ಸಿಂಗ್ ಚೆಡ್ಡ' ಚಿತ್ರದಲ್ಲಿ ಕರೀನಾ!

'ಲಾಲ್ ಸಿಂಗ್ ಚೆಡ್ಡ' ಚಿತ್ರದಲ್ಲಿ ಕರೀನಾ!

ಇನ್ನು ಬಾಲಿವುಡ್ ನಟಿ ಕರೀನಾ ಕಪೂರ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿಕೊಂಡಿದ್ದಾರೆ. ನಟ ಸೈಫ್ ಅಲಿ ಖಾನ್‌ರನ್ನು ಮದುವೆಯಾದ ಬಳಿಕ ಕರೀನಾ ಕಪೂರ್ ಹೆಚ್ಚಾಗಿ ಮಕ್ಕಳ ಆರೈಕೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಹಾಗಾಗಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕರೀನಾ ಅಭಿನಯದ 'ಲಾಲ್ ಸಿಂಗ್ ಚೆಡ್ಡ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ತೆರೆ ಹಂಚಿಕೊಂಡಿದ್ದಾರೆ.

ಪ್ರಾಜೆಕ್ಟ್ ಕೆ, ಅನಿಮಲ್ ಬಳಿಕ ಸ್ಪಿರಿಟ್!

ಪ್ರಾಜೆಕ್ಟ್ ಕೆ, ಅನಿಮಲ್ ಬಳಿಕ ಸ್ಪಿರಿಟ್!

'ಸ್ಪಿರಿಟ್' ಸಿನಿಮಾ ಶುರುವಾಗುವ ದಿನಗಳು ಹತ್ತಿರ ಬಂದಿವೆ. ಒಂದು ಕಡೆ ನಟ ಪ್ರಭಾಸ್ ತಮ್ಮ ಕೈಯಲ್ಲಿರುವ ಸಿನಿಮಾಗಳನ್ನು ಮಾಡಿ ಮುಗಿಸುತ್ತಿದ್ದಾರೆ. 'ಆದಿಪುರುಷ್' ಸಿನಿಮಾ ಬಹುತೇಕ ಮುಗಿದಿದ್ದು, ಪ್ರಾಜೆಕ್ಟ್ ಕೆ ಚಿತ್ರೀಕರಣವನ್ನು ಕೂಡ ಪ್ರಭಾಸ್ ಮುಗಿಸುತ್ತಿದ್ದಾರೆ. ಅತ್ತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಅಭಿನಯಿಸುತ್ತಿರುವ 'ಅನಿಮಲ್' ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಈ ಎರಡು ಸಿನಿಮಾಗಳು ಮುಗಿದ ಬಳಿಕ ಸಂದೀಪ್ ರೆಡ್ಡಿ ವಂಗ ಮತ್ತು ಪ್ರಭಾಸ್ ಸ್ಪಿರಿಟ್‌ಗಾಗಿ ಜೊತೆಯಾಗಲಿದ್ದಾರೆ.

More from Filmibeat

English summary
Kareena kapoor Khan Will Be The female Lead For Prabhas's movie 'Spirit', Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X