For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ವಿರಹ ನೂರು ನೂರು ತರಹ

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ಅವರ ಮದುವೆಯೇನೋ ಧಾಂ ಧೂಂ ಎಂದು ನಡೆದುಹೋಯಿತು. ತಮ್ಮ ಬಹುಕಾಲದ ಬಾಯ್ ಫ್ರೆಂಡ್ ಸೈಫ್ ಆಲಿ ಖಾನ್ ಅವರನ್ನು ವರಿಸುವ ಮೂಲಕ ಕರೀನಾ ಹೊಸ ಬಾಳಿಗೆ ಅಡಿಯಿಟ್ಟರು. ಆದರೆ ಅವರು "ಬಾ ನಲ್ಲೆ ಬಾ ನಲ್ಲೆ ಮಧುಚಂದ್ರ" ಎಂದು ಹಾಡಿ ನಲಿದರೇ?

  ಮೂಲಗಳ ಪ್ರಕಾರ ಮದುವೆ ಬಳಿಕ ಇನ್ನೂ ಅವರಿಬ್ಬರ ಮಧುಚಂದ್ರ ನಡೆದಿಲ್ಲವಂತೆ. ಅತ್ತ ಸೈಫ್, ಇತ್ತ ಕರೀನಾ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವುದೇ ಇದಕ್ಕೆ ಕಾರಣ. ಇತ್ತ ಮಧುವೂ ಇಲ್ಲದೆ ಅತ್ತ ಚಂದ್ರನ ದರ್ಶನವೂ ಇಲ್ಲದೆ ಸೈಫ್ ಚಡಪಡಿಸುತ್ತಿದ್ದಾರಂತೆ. ಕರೀನಾ ಕಪೂರ್ ವಿರಹ ನೂರು ನೂರು ತರಹ ಎಂದು ಪರಿತಪಿಸುತ್ತಿದ್ದಾರಂತೆ.

  ಸೈಫ್ ಆಲಿ ಖಾನ್ ಅವರು ಸದ್ಯಕ್ಕೆ 'ರೇಸ್ 2' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದನ್ನು ಆದಷ್ಟು ಬೇಗ ಮುಗಿಸಿ ಮಧುಚಂದ್ರಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿ ದಿನವೊಂದಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರಂತೆ.

  ಇನ್ನೊಂದು ಕಡೆ ಕರೀನಾ ಸಹ ಅಷ್ಟೇ, ಸುಮ್ಮನೆ ಕೂತಿಲ್ಲ. ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಆದಷ್ಟು ಬೇಗ ಮುಗಿಸುತ್ತಿದ್ದಾರೆ. ಬಹುಶಃ ಇಬ್ಬರೂ ಜನವರಿ 2013ರ ಹೊತ್ತಿಗೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮಧುಚಂದ್ರ ಮಧು ಹೀರಲಿದ್ದಾರಂತೆ.

  ಮದುವೆಗೂ ಮುಂಚೆಯೇ ನಮ್ಮಿಬ್ಬರ ಹನಿಮೂನ್ ನಡೆದುಹೋಗಿದೆ. ಡಿಸೆಂಬರ್ ನಲ್ಲಿ ನಾವೇನಾದರೂ ಇನ್ನೊಮ್ಮೆ ಆಚರಿಸಿಕೊಂಡರೆ ಅದು 250ನೇ ಹನಿಮೂನ್ ಆಗುತ್ತದೆ ಎಂದಿದ್ದರು ಕರೀನಾ. ಆದರೆ ಅವರಿಗೆ 250ನೇ ಮಧುಚಂದ್ರ ಆಚರಿಸಿಕೊಳ್ಳಲು ಪುರುಸೊತ್ತೇ ಇಲ್ಲದಂತಾಗಿದೆ. (ಏಜೆನ್ಸೀಸ್)

  English summary
  The latest bollywood buzz is that actress Kareena Kapoor and Saif Ali Khan is scheduled to leave for his holiday with Kareena Kapoor in January. Kareena Kapoor can't wait to leave for his long-due honeymoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X