ಹನಿಮೂನ್‌ಗಾಗಿ ಕೋಟಿ ಕೋಟಿ ಖರ್ಚು ಮಾಡಿದ ಕತ್ರೀನಾ-ವಿಕ್ಕಿ!

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಜೋಡಿ ಈಗ ಎಲ್ಲೆಲ್ಲೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸೋ‍ಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಲವ್ ಸ್ಟೋರಿ ಬಗ್ಗೆ, ಇವರಿಬ್ಬರ ಸಿನಿಮಾಗಳ ಬಗ್ಗೆ, ಹಾಗೇ ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಆಸ್ತಿ ಇದೆ ಎಂಬ ಬಗ್ಗೆ ಹುಡುಕಾಟಗಳು ಜೋರಾಗಿದೆ. ಇದಿಷ್ಟೇ ಅಲ್ಲದೇ ಕ್ಯಾಟ್ ಮತ್ತು ವಿಕ್ಕಿ ಮದುವೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.

ಬಹಳ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಮತ್ತು ವಿಕ್ಕಿ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಈ ಜೋಡಿ ಮದುವೆ ಬಗ್ಗೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು, ಮದುವೆಗೆ ಬರುವ ಅತಿಥಿಗಳಿಗೂ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದರು. ಹೀಗಾಗಿ ಮದುವೆ ಹೇಗೆ ನಡೀತು, ಯಾವ ಶಾಸ್ತ್ರಗಳನ್ನು ಮಾಡಲಾಯಿತು, ಎಂಬ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಾಗಲೇ ಇಲ್ಲ.

ಹಾಗೇ ಕತ್ರೀನಾ ವಿಕ್ಕಿ ಹನಿಮೂನ್ ಬಗ್ಗೆಯೂ ಹೆಚ್ಚಾಗಿ ಯಾರಿಗೂ ಗೊತ್ತಾಗಲೇ ಇಲ್ಲ. ನಾಲ್ಕು ದಿನಗಳ ಹನಿಮೂನ್ ಮುಗಿಸಿ ಮನೆಗೆ ವಾಪಾಸ್ಸಾಗಿರುವ ಈ ಜೋಡಿ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ಎಂದು ತೆರಳಿತ್ತು. ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರೆಟಿಗಳು ಹನಿಮೂನ್‌ಗೆ ಹೋದರು ಅಂದ್ರೆ ಅಲ್ಲಿ ಎಷ್ಟು ಖರ್ಚು ಮಾಡಿದ್ದಾರೆ, ಯಾವ ಹೋಟೆಲ್‌ನಲ್ಲಿ ತಂಗಿದ್ದಾರೆ, ಎಂಬೆಲ್ಲ ಬಗ್ಗೆ ಅಭಿಮಾನಿಗಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಜಾಲಾಡಿದ್ದಾರೆ. ಈ ಬಗ್ಗೆ ಈಗ ಮಾಹಿತಿ ಲಭ್ಯವಾಗಿದ್ದು, ಕೋಟಿ ಕೋಟಿ ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಹನಿಮೂನ್‌ಗೆ ಮಾಡಿದ ಖರ್ಚು ಎಷ್ಟು ಗೊತ್ತಾ !

ಹನಿಮೂನ್‌ಗೆ ಮಾಡಿದ ಖರ್ಚು ಎಷ್ಟು ಗೊತ್ತಾ !

ನಟಿ ಕತ್ರಿನಾ ಕೈಫ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಚಿತ್ರರಂಗ ಖ್ಯಾತ ನಟಿಯರಲ್ಲಿ ನಟಿ ಕತ್ರಿನಾ ಕೈಫ್ ಕೂಡ ಒಬ್ಬರು ಎಂದು ಹೇಳಬಹುದು. ಅದೆಷ್ಟೋ ಟಾಪ್ ನಟರ ಜೊತೆ ನಟನೆಯನ್ನು ಮಾಡಿ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಕತ್ರಿನಾ ಕೈಫ್ ಅವರಿಗೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವೇ ಇದೆ. ಡಿಸೆಂಬರ್ ೯ಕ್ಕೆ ನಟಿ ಕತ್ರಿನಾ ಕೈಫ್ ಅವರು ಖ್ಯಾತ ನಟ ವಿಕ್ಕಿ ಕೌಶಲ್ ಅವರನ್ನು ರಾಜಸ್ಥಾನದಲ್ಲಿ ಖಾಸಗಿ ಮಂಟಪದಲ್ಲಿ ಮದುವೆಯನ್ನ ಮಾಡಿಕೊಂಡಿದ್ದಾರೆ.

ಹನಿಮೂನ್‌ಗೆ ಈ ಜೋಡಿ ಖರ್ಚು ಮಾಡಿದ್ದು ಬರೋಬ್ಬರಿ 5 ಕೋಟಿ

ಹನಿಮೂನ್‌ಗೆ ಈ ಜೋಡಿ ಖರ್ಚು ಮಾಡಿದ್ದು ಬರೋಬ್ಬರಿ 5 ಕೋಟಿ

ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಮದುವೆಯನ್ನು ಮಾಡಿಕೊಂಡ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಮದುವೆಯ ನಂತರ ಮಾಲ್ಡಿವ್ಸ್‌ಗೆ ಹನಿಮೂನ್ ಹೋಗಿದ್ದರು. ಹೌದು ಸಾಮಾನ್ಯವಾಗಿ ಹೆಚ್ಚಿನ ಸೆಲೆಬ್ರಟಿಗಳು ಮದುವೆಯ ನಂತರ ಹನಿಮೂನ್‌ಗಾಗಿ ಮಾಲ್ಡಿವ್ಸ್‌ಗೆ ಹೋಗುದು ಕಾಮನ್. ಅಂತೆಯೇ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಹನಿಮೂನ್‌ಗಾಗಿ ಮಾಲ್ಡಿವ್ಸ್‌ಗೆ ಹೋಗಿದ್ದು ಗೊತ್ತೇ ಇದೆ. ಇನ್ನು ಕತ್ರಿನಾ ಕೈಫ್ ಅವರು ಹನಿಮೂನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದು ಅಭಿಮಾನಿಗಳು ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದರು. ಮಾಲ್ಡಿವ್ಸ್‌ಗನಲ್ಲಿ ಹನಿಮೂನ್ ಮುಗಿಸಿರುವ ಈ ಜೋಡಿ ಬರೋಬ್ಬರಿ 5 ಕೋಟಿಗು ಹೆಚ್ಚು ಮೊತ್ತವನ್ನು ಖರ್ಚು ಮಾಡಿದೆಯಂತೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೊಸ್ ವೈರಲ್ !

ಸಾಮಾಜಿಕ ಜಾಲತಾಣದಲ್ಲಿ ಫೋಟೊಸ್ ವೈರಲ್ !

ಇನ್ನು ಸುಮಾರು ನಾಲ್ಕು ದಿನಗಳ ಕಾಲ ಮಾಲ್ಡಿವ್ಸ್‌ಗೆ ಹನಿಮೂನ್ ಪ್ರಯಾಣ ಮಾಡಿದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಹನಿಮೂನ್‌ಗಾಗಿ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಅಗುತ್ತಿದ್ದು, ಬಾಲಿವುಡ್ ಮೂಲಗಳ ಪ್ರಕಾರ ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಲಕ್ಸುರಿ ರೆಸ್ಟೋರೆಂಟ್‌ನಲ್ಲಿ ತಂಗಿದ್ದು, ಒಂದು ದಿನ ಅಲ್ಲಿ ಉಳಿದುಕೊಳ್ಳಲು ಬರೋಬ್ಬರು 25ಲಕ್ಷ ವಂತೆ. ಹಾಗೇ ದುಬಾರಿ ಆಹಾರ, ಸೀ ಫುಡ್ ಸೇರಿದಂತೆ, ಮಾಲ್ಡಿವ್ಸ್‌ನಲ್ಲಿ ಕತ್ರೀನಾ ವಿಕ್ಕಿ ದುಬಾರಿ ಶಾಪಿಂಗ್ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ 5 ಕೋಟಿಗು ಹೆಚ್ಚು ಮೊತ್ತ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಸಾಮಾನ್ಯ ಜನರು ಇದನ್ನು ಕೇಳಿ ದಂಗಾಗಿದ್ದಾರೆ.

ಕ್ರಿಸ್‌ಮಸ್ ಸಂಭ್ರಮದಲ್ಲಿ ವಿಕ್ಕಿ-ಕತ್ರೀನಾ

ಕ್ರಿಸ್‌ಮಸ್ ಸಂಭ್ರಮದಲ್ಲಿ ವಿಕ್ಕಿ-ಕತ್ರೀನಾ

ಸದ್ಯ ಮದುವೆ ಬ್ಯುಸಿ ಮತ್ತು ಹನಿಮೂನ್ ಮುಗಿಸಿಕೊಂಡು ಸುಂದರ ಜೀವನ ನಡೆಸಲು ಅಣಿಯಾಗಿರುವ ಈ ಜೋಡಿಯ ಹೊಸ ಮನೆಯಲ್ಲಿ ಕ್ರಿಸ್‌ಮಸ್ ರಂಗು ಜೋರಾಗಿದೆ. ಮದುವೆಯ ಬಳಿಕ ಮೊದಲ ಬಾರಿಗೆ ಕತ್ರೀನಾ ವಿಕ್ಕಿ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದ್ದು, ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಖುಷಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕತ್ರೀನಾ ವಿಕ್ಕಿ ಅವರನ್ನು ತಬ್ಬಿ ಹಿಡಿದುಕೊಂಡಿರುವ ಫೋಟೊ ಈಗ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ.

More from Filmibeat

English summary
bollywood couple katrina kaif and Vicky Kaushal spend Rs 5 crore for maldives honeymoon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X