ಕತ್ರೀನಾ-ವಿಕ್ಕಿ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಸಿನಿಮಾ ರೂಪ ಪಡೆಯುತ್ತಿದೆ ವಿಕ್ಕಿ-ಕ್ಯಾಟ್ ಲವ್ ಸ್ಟೋರಿ

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಜೋಡಿ ಈಗ ಎಲ್ಲೆಲ್ಲೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಲವ್ ಸ್ಟೋರಿ ಬಗ್ಗೆ, ಇವರಿಬ್ಬರ ಸಿನಿಮಾಗಳ ಬಗ್ಗೆ, ಹಾಗೇ ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಆಸ್ತಿ ಇದೆ ಎಂಬ ಬಗ್ಗೆ ಹುಡುಕಾಟಗಳು ಜೋರಾಗಿದೆ. ಇದಿಷ್ಟೇ ಅಲ್ಲದೇ ಕ್ಯಾಟ್ ಮತ್ತು ವಿಕ್ಕಿ ಮದುವೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.

ಬಹಳ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಮತ್ತು ವಿಕ್ಕಿ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದರೇ ಈ ಜೋಡಿ ಮದುವೆ ಬಗ್ಗೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು, ಮದುವೆಗೆ ಬರುವ ಅತಿಥಿಗಳಿಗೂ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದರು. ಹೀಗಾಗಿ ಮದುವೆ ಹೇಗೆ ನಡೀತು, ಯಾವ ಶಾಸ್ತ್ರಗಳನ್ನು ಮಾಡಲಾಯಿತು, ಎಂಬ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಾಗಲೇ ಇಲ್ಲ.

ಕೆಲ ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮತ್ತು ರಣ್‌ಬೀರ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದ ಕತ್ರೀನಾ ಕೈಫ್ ಕೆಲ ದಿನಗಳ ಹಿಂದಿನಿಂದ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್, ಓಡಾಟ ಅಂತ ಮಾಡಿಕೊಂಡು ಈಗ ಮದುವೆ ಕೂಡ ಆಗಿದ್ದಾರೆ. ಆದರೇ ಇವರಿಬ್ಬರು ಕೂಡ ತಮ್ಮಿಬ್ಬರ ಮಧ್ಯ ಪ್ರೀತಿ ಹೇಗೆ ಆಯಿತು, ಯಾರು ಮೊದಲು ಪ್ರಪೋಸ್ ಮಾಡಿದ್ದು, ಎಂಬ ಬಗ್ಗೆ ಎಲ್ಲಿಯೂ ಮಾತು ಬಿಚ್ಚಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಇವರಿಬ್ಬರ ಲವ್‌ ಸ್ಟೋರಿ ಬಗ್ಗೆ ತಿಳಿದುಕೊಳ್ಳಲು ಎಕ್ಸೈಟ್ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್ ಈಗ ಹೊರಬಂದಿದ್ದು ಅದೇನೂ ಅಂತ ಮುಂದೆ ಓದಿ.

ಕ್ಯಾಟ್-ವಿಕ್ಕಿ ಲವ್ ಸ್ಟೋರಿ ಏನು ಗೊತ್ತಾ?

ಕ್ಯಾಟ್-ವಿಕ್ಕಿ ಲವ್ ಸ್ಟೋರಿ ಏನು ಗೊತ್ತಾ?

ಕತ್ರೀನಾ ವಿಕ್ಕಿ ಕೌಶಲ್ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಯಾವಾಗ ಬಾಲಿವುಡ್‌ನಲ್ಲಿ ಗುಲ್ಲೊಡೆಯಲು ಆರಂಭಿಸಿತ್ತೋ, ಆಗಲೇ ಸಾಕಷ್ಟು ಮಂದಿ ಆಶ್ಚರ್ಯಕ್ಕೆ ಒಳಗಾಗಿದ್ದರು. ಮತ್ತೂ ಕೆಲವರು ಇದು ಬರೀ ಗಾಸಿಪ್ ಅಷ್ಟೇ ಎಂದು ಸುಮ್ಮನಿದ್ದರು, ಮತ್ತೂ ಕೆಲವರು ಇದ್ದರೂ ಇರಬಹುದು ಎಂದು ಅಂದುಕೊಂಡಿದ್ದರು. ಕೊನೆಗೂ ವಿಕ್ಕಿ-ಕ್ಯಾಟ್ ಮದುವೆ ಆಗಿ ವಾರಗಳೇ ಕಳೆದಿದೆ. ಮದುವೆ ಕಾರ್ಯಕ್ರಮಗಳನ್ನು ಮುಗಿಸಿ ಹನಿಮೂನ್‌ಗೂ ಹೋಗಿ ಬಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಈ ಇಬ್ಬರ ಬಗ್ಗೆ ಮತ್ತೊಂದು ಸುದ್ದಿ ಕೂಡ ಹರಿದಾಡುತ್ತಿದೆ.

ಲವ್ ಸ್ಟೋರಿ ಸಿನಿಮಾ ಮಾಡಲು ಮುಂದೆ ಬರ್ತಿದ್ದಾರೆ ನಿರ್ಮಾಪಕರು

ಲವ್ ಸ್ಟೋರಿ ಸಿನಿಮಾ ಮಾಡಲು ಮುಂದೆ ಬರ್ತಿದ್ದಾರೆ ನಿರ್ಮಾಪಕರು

ಕ್ಯಾಟ್-ವಿಕ್ಕಿ ತಮ್ಮ ಪ್ರೀತಿಯ ಬಗ್ಗೆ ಇಲ್ಲಿಯವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಇದನ್ನೆ ಕೆಲವರು ಬಂಡವಾಳ ಮಾಡಿಕೊಂಡು ಈಗ ಇವರಿಬ್ಬರ ಲವ್ ಸ್ಟೋರಿ ಮೇಲೆಯೇ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮದುವೆ ಬಳಿಕ ಈ ಜೋಡಿಗೆ ಬೇಡಿಕೆ ಹೆಚ್ಚಾಗಿದ್ದು, ಕೋಟಿ ಕೋಟಿ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಈಗಾಗಲೇ ಕತ್ರೀನಾ ಮತ್ತು ವಿಕ್ಕಿ ಜೊತೆ ಮಾತುಕತೆ ಕೂಡ ನಡೆಸಿದ್ದಾರಂತೆ.

ಸಿನಿಮಾ ಆದ್ರೇ ಹಿಟ್ ಆಗೋದು ಗ್ಯಾರಂಟಿ

ಸಿನಿಮಾ ಆದ್ರೇ ಹಿಟ್ ಆಗೋದು ಗ್ಯಾರಂಟಿ

ಮೂಲಗಳ ಪ್ರಕಾರ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಪ್ರೇಮ ಕತೆ ತುಂಬ ವಿಶೇಷವಾಗಿದೆ ಯಂತೆ. ಈ ವರೆಗೂ ಯಾವ ಸಿನಿಮಾದಲ್ಲು ಇಂತಹ ಒಂದು ಪ್ರೇಮ ಕಥೆಯನ್ನು ಸೆರೆಹಿಡಿದಿಲ್ಲ. ಒಂದು ವೇಳೆ ಕತ್ರೀನಾ ಮತ್ತು ವಿಕ್ಕಿ ಅವರಿಬ್ಬರ ಲವ್‌ ಸ್ಟೋರಿಮೇಲೆ ಸಿನಿಮಾ ಮಾಡಿದರೆ ಬ್ಲಾಕ್ ಬಸ್ಟರ್ ಹಿಟ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇದಿಷ್ಟೆ ಅಲ್ಲದೇ ಈಗಾಗಲೇ ಈ ಚಿತ್ರವನ್ನು ನಿರ್ಮಿಸಲು ಸಾಕಷ್ಟು ನಿರ್ಮಾಪಕರು, ಉದ್ಯಮಿಗಳು ಮುಂದೆ ಬರುತ್ತಿದ್ದು, ಕತ್ರಿನಾ-ವಿಕ್ಕಿ ಜೋಡಿಯ ಮನವೊಲಿಸಲು ಪ್ರಯತ್ನ ಮಾಡುತ್ತಿದೆ.

ಬಾಲಿವುಡ್‌ನಿಂದ ಬಂದಿರೋ ಸುದ್ದಿ ಏನು ನೋಡಿ

ಬಾಲಿವುಡ್‌ನಿಂದ ಬಂದಿರೋ ಸುದ್ದಿ ಏನು ನೋಡಿ

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಕೂಡ ಈ ಬಗ್ಗೆ ಚಿಂತಿಸುತ್ತಿದ್ದು, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂಬ ಸುದ್ದಿ ಕೂಡ ಈಗ ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ. ಮತ್ತೊಂದು ವಿಶೇಷ ಅಂದರೆ ಒಂದು ವೇಳೆ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರೇ ಆ ಸಿನಿಮಾದಲ್ಲಿ ಇವರಿಬ್ಬರೇ ಆಕ್ಟ್‌ ಕೂಡ ಮಾಡಲಿದ್ದಾರೆ. ಈ ಬಗ್ಗೆ ಈಗ ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಅಭಿಮಾನಿಗಳು ಕೂಡ ಈ ಸಿನಿಮಾಗಾಗಿ ನಿರೀಕ್ಷಿಸುತ್ತಿದ್ದಾರೆ.

More from Filmibeat

English summary
Katrina kaif and Vicky Kaushal will share screen space for new movie it's based on vicky-cat love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X