For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್-ಪ್ರಭಾಸ್ 'ಸಲಾರ್'ಗೆ ಬಾಲಿವುಡ್ ನಟಿ ಎಂಟ್ರಿ?

  |

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ರಾಧೆಶ್ಯಾಮ್ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರ್ತಿದೆ. ಇತ್ತೀಚಿಗಷ್ಟೆ ಬಿಡುಗಡೆ ದಿನಾಂಕ ಅಧಿಕೃತಗೊಳಿಸಲಾಗಿದ್ದು, ಡಾರ್ಲಿಂಗ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಜನವರಿ 14, 2022ಕ್ಕೆ ರಾಧೆಶ್ಯಾಮ್ ವರ್ಲ್ಡ್‌ವೈಡ್ ತೆರೆಗೆ ಬರಲಿದೆ.

  ರಾಧೆಶ್ಯಾಮ್ ಬಿಡುಗಡೆ ದಿನಾಂಕ ಘೋಷಣೆ ಬೆನ್ನಲ್ಲೆ ಪ್ರಭಾಸ್ ನಟಿಸುತ್ತಿರುವ ಮತ್ತೊಂದು ಚಿತ್ರದ ಅಪ್‌ಡೇಟ್ ಹೊರಬಿದ್ದಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಮತ್ತೆ ಚರ್ಚೆಗೆ ಬಂದಿದೆ.

  ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್

  ಈ ಮೊದಲು ಕತ್ರಿನಾ ಕೈಫ್ ಸಲಾರ್ ಚಿತ್ರಕ್ಕೆ ನಾಯಕಿ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ, ಸಲಾರ್‌ಗೆ ಹೀರೋಯಿನ್ ಆಗಿ ಶ್ರುತಿ ಹಾಸನ್ ಎಂಟ್ರಿಯಾಗಿತ್ತು. ಇದರಿಂದ ಕತ್ರಿನಾ-ಪ್ರಭಾಸ್ ಜೋಡಿ ನೋಡಲು ಕಾಯುತ್ತಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿತ್ತು. ಇದೀಗ, ಈ ಸುದ್ದಿಯನ್ನು ನಿಜ ಮಾಡಲು ಹೊರಟಿದೆ ಚಿತ್ರತಂಡ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

  ಐಟಂ ಹಾಡಿನಲ್ಲಿ ಕತ್ರಿನಾ ಹೆಜ್ಜೆ ?

  ಐಟಂ ಹಾಡಿನಲ್ಲಿ ಕತ್ರಿನಾ ಹೆಜ್ಜೆ ?

  ಸಲಾರ್ ಚಿತ್ರದಲ್ಲಿ ಕತ್ರಿನಾ ಕೈಫ್ ಸ್ಪೆಷಲ್ ನಂಬರ್ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಈ ಮೊದಲು ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ನಾಯಕಿ ಅವಕಾಶ ಮಿಸ್ ಆಗಿತ್ತು. ಇದೀಗ, ಹಾಡೊಂದರಲ್ಲಿ ಪ್ರಭಾಸ್ ಜೊತೆ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಹೊಸ ವಿಷಯ ಕುತೂಹಲ ಹೆಚ್ಚಿಸಿದೆ.

  ಎರಡನೇ ಶೆಡ್ಯೂಲ್ ಆರಂಭ

  ಎರಡನೇ ಶೆಡ್ಯೂಲ್ ಆರಂಭ

  ಸಲಾರ್ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಹೈದರಾಬಾದ್‌ನಲ್ಲಿ ಎರಡನೇ ಹಂತದ ಶೂಟಿಂಗ್‌ಗೆ ಚಿತ್ರತಂಡ ಚಾಲನೆ ಕೊಟ್ಟಿದೆ. ಸಾಹಸ ದೃಶ್ಯಗಳ ಶೂಟಿಂಗ್ ನಡೆಯುತ್ತಿದ್ದು, ಸಾಹಸ ನಿರ್ದೇಶಕ ಅನ್ಬು-ಅರಿವ್ ಪಾಲ್ಗೊಂಡಿದ್ದಾರೆ. ತಡರಾತ್ರಿವರೆಗೂ ಸಲಾರ್ ಚಿತ್ರೀಕರಣ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ದಿಶಾನೂ ಇಲ್ಲ, ಕತ್ರಿನಾ ಕೈಫ್ ಅಲ್ಲ....ಸಲಾರ್ ಚಿತ್ರದ ನಾಯಕಿ ಪಾತ್ರಕ್ಕೆ ಹೊಸ ಹೆಸರು?ದಿಶಾನೂ ಇಲ್ಲ, ಕತ್ರಿನಾ ಕೈಫ್ ಅಲ್ಲ....ಸಲಾರ್ ಚಿತ್ರದ ನಾಯಕಿ ಪಾತ್ರಕ್ಕೆ ಹೊಸ ಹೆಸರು?

  ಶ್ರುತಿ ಹಾಸನ್ ನಾಯಕಿ

  ಶ್ರುತಿ ಹಾಸನ್ ನಾಯಕಿ

  ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ಶ್ರುತಿ ಹಾಸನ್, ಈಗ ಎರಡನೇ ಶೆಡ್ಯೂಲ್‌ನಲ್ಲೂ ಭಾಗಿಯಾಗಿದ್ದಾರೆ.

  ಏಪ್ರಿಲ್‌ನಲ್ಲಿ ತೆರೆಗೆ?

  ಏಪ್ರಿಲ್‌ನಲ್ಲಿ ತೆರೆಗೆ?

  ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ವರದಿಗಳ ಪ್ರಕಾರ, ಸಲಾರ್ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ನಟ ಮಧು ಗುರುಸ್ವಾಮಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಚಿತ್ರತಂಡದ ಯೋಜನೆಯಂತೆ ಶೂಟಿಂಗ್ ಮುಗಿದರೆ 2022ರ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದೆ.

  ಪ್ರಭಾಸ್ ಸಿನಿಮಾಗಳು

  ಪ್ರಭಾಸ್ ಸಿನಿಮಾಗಳು

  ರಾಧೆಶ್ಯಾಮ್ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ. ಸಲಾರ್ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದೆಡೆ ಓಂ ರಾವತ್ ನಿರ್ದೇಶನ ಆದಿಪುರುಷ್ ಸಿನಿಮಾದ ಶೂಟಿಂಗ್ ಸಹ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನಾಗಿ ಅಭಿನಯಿಸುತ್ತಿದ್ದಾರೆ. ನಾಗ್ ಅಶ್ವಿನ್ ಜೊತೆ 21ನೇ ಚಿತ್ರ ಆರಂಭಿಸಬೇಕಿದೆ. ಈ ಪ್ರಾಜೆಕ್ಟ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಅಭಿನಯಿಸಲಿದ್ದಾರೆ.

  ಕತ್ರಿನಾ ಕೈಫ್ ಮದ್ವೆ?

  ಕತ್ರಿನಾ ಕೈಫ್ ಮದ್ವೆ?

  ಸಿನಿಮಾ ಸುದ್ದಿಗಳ ನಡುವೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುವೆ ಸುದ್ದಿಯೂ ಗಮನ ಸೆಳೆದಿದೆ. ಉರಿ ಖ್ಯಾತಿಯ ನಟ ವಿಕ್ಕಿ ಕೌಶಲ್ ಜೊತೆ ಡೇಟ್ ಮಾಡ್ತಿರುವ ನಟಿ ಕತ್ರಿನಾ, ಸದ್ಯದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ತುಂಬಾ ದಿನಗಳಿಂದ ಚರ್ಚೆಯಲ್ಲಿದೆ. ಸಲ್ಮಾನ್ ಖಾನ್ ಕಾಸ್ಟ್ಯೂಮ್ ಡಿಸೈನರ್ ಸಹ ಕತ್ರಿನಾ ಮದುವೆ ಬಗ್ಗೆ ಸುಳಿವು ನೀಡಿದ್ದರು.

  English summary
  Salaar makers have initiated talks with Katrina Kaif. If all goes well, she will be roped in to play a special number with Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X