ಚಿರಂಜೀವಿ ಚಿತ್ರದಲ್ಲಿ ನಟಿಸಲು ಕೀರ್ತಿ ಸುರೇಶ್‌ಗೆ ಇಷ್ಟೊಂದು ಸಂಭಾವನೆನಾ?

'ಮಹಾನಟಿ' ಚಿತ್ರದ ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಕೀರ್ತಿ ಸುರೇಶ್ ಈಗ ದಕ್ಷಿಣ ಭಾರತದ ಬೇಡಿಕೆಯ ಕಲಾವಿದೆ. ಕಥೆಯಾಧರಿತ ಚಿತ್ರಗಳಾಗಲಿ ಅಥವಾ ಸ್ಟಾರ್ ನಟರ ಕಮರ್ಷಿಯಲ್ ಚಿತ್ರಗಳಾಗಲಿ ಕೀರ್ತಿ ಸುರೇಶ್ ನಾಯಕಿ ಇದ್ದರೆ ಒಳ್ಳೆಯದು ಎಂದು ಚಿಂತಿಸುವ ನಿರ್ದೇಶಕರಿದ್ದಾರೆ.

ರಜನಿಕಾಂತ್, ಮೋಹನ್ ಲಾಲ್, ಮಹೇಶ್ ಬಾಬು ಅಂತಹ ದೊಡ್ಡ ನಟರ ಚಿತ್ರಗಳಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್‌ಗೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಆದರೆ, ಈ ಚಿತ್ರದಲ್ಲಿ ನಾಯಕಿ ಪಾತ್ರವಲ್ಲ, ಬದಲಾಗಿ ಚಿರಂಜೀವಿ ಸಹೋದರಿ ಪಾತ್ರ.

ತೆರೆಮೇಲೆ ಮೆಗಾಸ್ಟಾರ್ ಚಿರಂಜೀವಿ ಸಹೋದರಿ ಪಾತ್ರದಲ್ಲಿ ನಟಿಸಲು ಕೀರ್ತಿ ಸುರೇಶ್‌ಗೆ ಆಫರ್ ಮಾಡಿದ್ದು, ಬಹುದೊಡ್ಡ ಸಂಭಾವನೆ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂದು ತೆಲುಗು ಫಿಲ್ಮಿಬೀಟ್ ಸೇರಿದಂತೆ ಹಲವು ವೆಬ್‌ಸೈಟ್‌ಗಳು ವರದಿ ಮಾಡಿದೆ.

Keerthy Suresh Demand Huge Remuneration For Chiranjeevi Movie

ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸಿದ್ದ 'ವೇದಲಂ' ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದು, ಈ ಸಿನಿಮಾದಲ್ಲಿ ಮೆಗಸ್ಟಾರ್ ನಾಯಕನಾಗಿ ನಟಿಸಲಿದ್ದಾರೆ. 'ವೇದಲಂ' ಚಿತ್ರದಲ್ಲಿ ಅಜಿತ್‌ಗೆ ತಂಗಿಯಾಗಿ ಲಕ್ಷ್ಮಿ ಮೆನನ್ ಅಭಿನಯಿಸಿದ್ದರು. ತೆಲುಗು ರಿಮೇಕ್‌ನಲ್ಲಿ ಚಿರಂಜೀವಿಗೆ ತಂಗಿಯಾಗಲು ಕೀರ್ತಿ ಅವರನ್ನು ಸಂಪರ್ಕಿಸಲಾಗಿದೆ ಎನ್ನುವ ವಿಚಾರ ಸುದ್ದಿಯಲ್ಲಿದೆ.

ಚಿರಂಜೀವಿ ಜೊತೆ ಕೀರ್ತಿ ಸುರೇಶ್ ತಂಗಿ ಪಾತ್ರ ಮಾಡಿದ್ರೆ ಚಿತ್ರದ ಇಮೇಜ್ ಹೆಚ್ಚಾಗಲಿದೆ ಎನ್ನುವ ಕಾರಣ, ನಿರ್ಮಾಪಕರು ಕೀರ್ತಿ ಸುರೇಶ್‌ಗೆ ಸುಮಾರು 3 ಕೋಟಿ ಆಫರ್ ಮಾಡಿದ್ದಾರೆ. ಈ ಸುದ್ದಿ ನಿಜವೇ ಆದರೆ ನಿಜಕ್ಕೂ ಕೀರ್ತಿ ಸುರೇಶ್ ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ನಡೆದ ನಟಿ ಎನಿಸಿಕೊಳ್ಳಲಿದ್ದಾರೆ. ಆದರೆ, ಕೀರ್ತಿ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ಅಧಿಕೃತವಾಗಿಲ್ಲ.

Keerthy Suresh Demand Huge Remuneration For Chiranjeevi Movie

ಸಿರುತೈ ಶಿವ ನಿರ್ದೇಶನ ಮಾಡಿದ್ದ ವೇದಲಂ ಸಿನಿಮಾದಲ್ಲಿ ಅಣ್ಣ ಮತ್ತು ತಂಗಿಯ ಎಮೋಷನ್ ಕಥೆ ಇದೆ. ಈ ಕಥೆಯ ಸುತ್ತ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಮಾಸ್ ಪ್ಯಾಕೇಜ್ ನೀಡಿದ್ದರು. ತಮಿಳು ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಬಹಳ ದೊಡ್ಡ ಹಿಟ್ ಆಗಿತ್ತು. ಅಜಿತ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದರು.

ಕೀರ್ತಿ ಸುರೇಶ್ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಅಣ್ಣಾತ್ತೇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ ಮರಕ್ಕರ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ನಿತೀನ್ ಜೊತೆ ಕಾಣಿಸಿಕೊಂಡ 'ರಂಗ್‌ದೇ' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು.

Keerthy Suresh Demand Huge Remuneration For Chiranjeevi Movie

ಇನ್ನು ಚಿರಂಜೀವಿ ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ರಾಮ್ ಚರಣ್ ನಿರ್ಮಾಣ ಮಾಡ್ತಿದ್ದು, ಮುಖ್ಯ ಪಾತ್ರವೊಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಅಗರ್‌ವಾಲ್, ಪೂಜಾ ಹೆಗ್ಡೆ, ಸೋನು ಸೂದ್, ಕಿಶೋರ್ ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ. ಸವೇದಲಂ ರಿಮೇಕ್ ಹೊರತುಪಡಿಸಿ ಮಲಯಾಳಂ ಹಿಟ್ ಚಿತ್ರ 'ಲೂಸಿಫರ್' ತೆಲುಗು ರಿಮೇಕ್‌ನಲ್ಲಿ ಚಿರಂಜೀವಿ ನಟಿಸಲಿದ್ದಾರೆ.

2020ರಲ್ಲಿ ಲಾಕ್‌ಡೌನ್ ಮಾಡಿದ ಸಂದರ್ಭದಲ್ಲಿ ಕೀರ್ತಿ ಸುರೇಶ್ ನಟಿಸಿದ್ದ 'ಪೆಂಗ್ವಿನ್' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಅದಾದ ಬಳಿಕ 'ಮಿಸ್ ಇಂಡಿಯಾ' ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಎರಡು ಚಿತ್ರಕ್ಕೂ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ, ಗುಡ್ ಲಕ್ ಸಖಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ಕಾಯುತ್ತಿದೆ. ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.

More from Filmibeat

English summary
South Actress Keerthy suresh demand huge remuneration for chiranjeevi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X