13 ವರ್ಷಗಳಿಂದ ಲವ್ವಿ ಡವ್ವಿ? ಕೊನೆಗೂ ಕೀರ್ತಿ ಸುರೇಶ್ ಲವ್ ಸ್ಟೋರಿ ಲೀಕ್ ಆಯ್ತಾ?

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಲವ್, ಮ್ಯಾರೇಜ್ ಸ್ಟೋರಿ ಬಗ್ಗೆ ಕಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ. ಒಬ್ಬ ಉದ್ಯಮಿಯನ್ನು ಕೀರ್ತಿ 13 ವರ್ಷಗಳಿಂದ ಲವ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ತಮಿಳು ಚಿತ್ರರಂಗದಲ್ಲಿ ಚರ್ಚೆ ಹುಟ್ಟಾಕಿದೆ. ತಮಿಳು ನಟ ದಳಪತಿ ವಿಜಯ್ ಹಾಗೂ ಕೀರ್ತಿ ಪ್ರೀತಿಸುತ್ತಿದ್ದಾರೆ, ವಿಜಯ್ ಶೀಘ್ರದಲ್ಲೇ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಡ್ತಾರೆ ಎನ್ನುವ ವದಂತಿ ನಡುವೆ ಹೊಸ ಕಥೆ ಶುರುವಾಗಿದೆ.

ಕೀರ್ತಿ ಸುರೇಶ್ ಮದುವೆ ಬಗ್ಗೆ ಪದೇ ಪದೇ ಚರ್ಚೆ ನಡೀತಾನೆ ಇರುತ್ತದೆ. ಮಲಯಾಳಿ ಚೆಲುವೆ ತನ್ನ ಬಾಲ್ಯದ ಸ್ನೇಹಿತನ ಜೊತೆ ಸೀಕ್ರೆಟ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗ್ತಿದೆ. ಆತ ಒಬ್ಬ ಉದ್ಯಮಿ. ಕೇರಳದಲ್ಲಿ ರೆಸಾರ್ಟ್‌ಗಳ ಮಾಲೀಕ ಎಂದು ಹೇಳಲಾಗುತ್ತಿದೆ. ಹಾಗಂತ ಶೀಘ್ರದಲ್ಲೇ ಇಬ್ಬರು ಮದುವೆ ಕೂಡ ಆಗುವುದಿಲ್ಲವಂತೆ. ಸದ್ಯ ಚಿತ್ರರಂಗದಲ್ಲಿ ಬ್ಯುಸಿ ಇರುವ ಕೀರ್ತಿ ನಾಲ್ಕೈದು ವರ್ಷಗಳ ನಂತರ ಮದುವೆ ಆಗುವ ಬಗ್ಗೆ ಯೋಚಿಸುತ್ತಾರಂತೆ. ಇನ್ನು ಇಬ್ಬರ ಮದುವೆಗೆ ಪೋಷಕರಿಂದಲೂ ಒಪ್ಪಿಗೆ ಇದೆ ಎಂದು ಹೇಳಲಾಗುತ್ತಿದೆ.

ಹೌದು, ಕಾಲಿವುಡ್ ಅಂಗಳದಲ್ಲಿ ಇಂತಾದೊಂದು ಸುದ್ದಿ ಭಾರೀ ಸದ್ದು ಮಾಡ್ತಿದೆ. ಈ ಬಗ್ಗೆ ಕೀರ್ತಿ ಸುರೇಶ್ ಆಗಲಿ, ಆಕೆಯ ಕಡೆಯವರಾಗಲಿ ಪ್ರತಿಕ್ರಿಯಿಸುತ್ತಿಲ್ಲ. ಹಾಗಾಗಿ ಇದೇ ಸದ್ಯ ಎಂದು ಕೆಲವರು ನಂಬಿಕೊಂಡಿದ್ದಾರೆ. ಆದಷ್ಟು ಬೇಗ ಮದುವೆ ಆಗಿ ಎಂದು ಕೀರ್ತಿ ಸುರೇಶ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಅನಿರುದ್ದ್ ಜೊತೆ ಕೀರ್ತಿ ಹೆಸರು ತಳುಕು

ಅನಿರುದ್ದ್ ಜೊತೆ ಕೀರ್ತಿ ಹೆಸರು ತಳುಕು

ಕೆಲ ವರ್ಷಗಳಿಂದ ಕಾಲಿವುಡ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಆತ್ಮೀಯವಾಗಿ ಇರುವ ಫೋಟೊಗಳನ್ನು ಶೇರ್ ಮಾಡಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಹೇಳಲಾಗಿತ್ತು. ಪಾರ್ಟಿಯೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಕೀರ್ತಿ- ಅನಿರುದ್ಧ್ ಲವ್, ಮ್ಯಾರೇಜ್ ಎಲ್ಲಾ ಸುಳ್ಳು ಎಂದು ಕೀರ್ತಿ ಪೋಷಕರು ಸ್ಪಷ್ಟನೆ ನೀಡಿದ್ದರು.

ಪದೇ ಪದೇ ಕೀರ್ತಿ ಮದುವೆ ಸುದ್ದಿ

ಪದೇ ಪದೇ ಕೀರ್ತಿ ಮದುವೆ ಸುದ್ದಿ

ಉದ್ಯಮಿ ಒಬ್ಬರ ಜೊತೆ ಕೀರ್ತಿ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಕೂಡ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ನಂತರ ತಣ್ಣಗಾಗಿತ್ತು. ಸದ್ಯ ಈಗ ಬಾಲ್ಯದ ಸ್ನೇಹಿತನ ಜೊತೆ ಕೀರ್ತಿ ಲವ್ವಿ ಡವ್ವಿ ನಡೀತಿದೆ ಎಂದು ಹೇಳಲಾಗುತ್ತಿದೆ. ಸೆಲೆಬ್ರೆಟಿಗಳು ಅಂದಮೇಲೆ ಇಂತಹ ಗಾಸಿಪ್‌ಗಳು ಸರ್ವೇ ಸಾಮಾನ್ಯ. ನಟಿ ಕೀರ್ತಿ ಕೂಡ ಇಂತಹ ಗಾಸಿಪ್‌ಗಳ ಬಗ್ಗೆ ಕೀರ್ತಿ ಎಂದೂ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ದಿನಕ್ಕೊಂದು ಗಾಸಿಪ್ ಹುಟ್ಟಿಕೊಳ್ಳುತ್ತದೆ ಎಲ್ಲದಕ್ಕೂ ಉತ್ತರಿಸುತ್ತಾ ಕೂರುವುದಕ್ಕೂ ಆಗುವುದಿಲ್ಲ.

ಗ್ಲಾಮರ್ ಡೋಸ್ ಹೆಚ್ಚಿಸಿದ ನಟಿ

ಗ್ಲಾಮರ್ ಡೋಸ್ ಹೆಚ್ಚಿಸಿದ ನಟಿ

ಮೊದಲು ಗುಂಡುಗೆ ಇದ್ದ ಕೀರ್ತಿ ಸುರೇಶ್ ಇತ್ತೀಚೆಗೆ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಮೊದಲು ಗ್ಲಾಮರ್ ಅಂದರೆ ಮಾರು ದೂರ ಓಡುತ್ತಿದ್ದ ಚೆಲುವೆ ಈಗ ಬಿಂದಾಸ್ ಆಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಕಲರ್‌ಫುಲ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. ಕೀರ್ತಿ ಇತ್ತೀಚೆಗೆ ಮಾಲ್ಡೀವ್ಸ್‌ಗೆ ರಜೆ ಮಜೆ ಕಳೆಯಲು ಹೋಗಿದ್ದರು. ಸ್ವಿಮ್ಮಿಂಗ್ ಸೂಟ್‌ನಲ್ಲಿ ಬಿಂದಾಸ್ ಪೋಸ್ ಕೊಟ್ಟಿದ್ದರು.

ಕಾಲಿವುಡ್‌ನಲ್ಲಿ ಕೀರ್ತಿ ಫುಲ್ ಬ್ಯುಸಿ

ಕಾಲಿವುಡ್‌ನಲ್ಲಿ ಕೀರ್ತಿ ಫುಲ್ ಬ್ಯುಸಿ

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ತೆಲುಗಿನಲ್ಲಿ ನಾನಿ ಜೊತೆ 'ದಸರಾ', ಚಿರಂಜೀವಿ ಸಹೋದರಿಯಾಗಿ 'ಭೋಳಾ ಶಂಕರ್', ತಮಿಳಿನ 'ಮಾಮನನ್', ಸಿರೆನ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ದೇಶನದ 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' 2 ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. 'ರಘು ತಾತ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿದೆ.

More from Filmibeat

English summary
Keerthy Suresh is in love with her schoolmate for past 13 Years? Currently Keerthy Suresh Woring in Mamannan, Siren, Revolter Rita, and Raghudatha. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X