For Quick Alerts
  ALLOW NOTIFICATIONS  
  For Daily Alerts

  ಶ್ರೀರಾಮನಾಗಿ ಪ್ರಭಾಸ್, ಸೀತೆ ಪಾತ್ರಕ್ಕೆ ಕೀರ್ತಿ ಸುರೇಶ್ ಬದಲು ಇನ್ನೊಬ್ಬ ನಟಿಗೆ ಆಫರ್!

  |

  ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ನಟಿಸಲಿರುವ 'ಆದಿಪುರುಷ' ಚಿತ್ರ ಸೆಟ್ಟೇರುವುದಕ್ಕೆ ಮುಂಚೆಯೇ ಭಾರಿ ಸದ್ದು ಮಾಡ್ತಿದೆ. ರಾಮಾಯಣ ಆಧಾರಿತ ಕಥೆ ಎನ್ನುವ ವಿಶೇಷಕ್ಕೋ ಅಥವಾ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಕಾರಣಕ್ಕೆ ಆದಿಪುರುಷ ಭಾರಿ ನಿರೀಕ್ಷೆ ಮೂಡಿಸಿದೆ.

  ಪ್ರಭಾಸ್ ರಾಮನಾದರೆ ಸೀತೆ ಪಾತ್ರಕ್ಕೆ ದೊಡ್ಡ ನಟಿಯ ಅವಶ್ಯಕತೆ ಇದೆ ಎನ್ನುವುದು ನಿರ್ಮಾಪಕರಿಗೂ ಗೊತ್ತು. ಅಭಿಮಾನಿಗಳು ಸಹ ಸ್ಟಾರ್ ನಟಿಯನ್ನೇ ನಿರೀಕ್ಷೆ ಮಾಡುತ್ತಾರೆ ಎನ್ನುವುದು ತಿಳಿದಿದೆ. ಈ ಕಾರಣದಿಂದಲೇ ಕೀರ್ತಿ ಸುರೇಶ್ ಅವರನ್ನು ನಾಯಕಿಯನ್ನಾಗಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಸೀತೆ ಪಾತ್ರದಲ್ಲಿ ಕೀರ್ತಿ ಸುರೇಶ್ ಇರಲ್ಲ ಎಂದು ಹೇಳಲಾಗುತ್ತಿದ್ದು, ಸೀತೆ ಪಾತ್ರಕ್ಕೆ ಮತ್ತೊಬ್ಬ ನಟಿಗೆ ಆಫರ್ ನೀಡಲಾಗಿದೆಯಂತೆ. ಮುಂದೆ ಓದಿ.....

  'ಆದಿಪುರುಷ' ಹೆಸರಿಗೂ ಮುಂಚೆ ಪ್ರಭಾಸ್ ಚಿತ್ರಕ್ಕೆ ಇನ್ನೊಂದು ಟೈಟಲ್ ಇಡಲಾಗಿತ್ತು!

  ಸೀತೆ ಆಗ್ತಾರಾ ಕಿಯಾರಾ ಅಡ್ವಾಣಿ?

  ಸೀತೆ ಆಗ್ತಾರಾ ಕಿಯಾರಾ ಅಡ್ವಾಣಿ?

  ಆದಿಪುರುಷ ಚಿತ್ರದಲ್ಲಿ ಸೀತೆ ಪಾತ್ರಕ್ಕಾಗಿ ನಟಿ ಕಿಯಾರಾ ಅಡ್ವಾಣಿಗೆ ಆಫರ್ ಮಾಡಲಾಗಿದೆ ಎಂಬ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡ್ತಿದೆ. ಚಿತ್ರದ ಕಾಸ್ಟಿಂಗ್ ತಂಡ ಈ ಸಂಬಂಧ 'ಭರತ್ ಅನೇ ನೇನು' ನಟಿಯ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

  ಅಧಿಕೃತ ಮಾಹಿತಿ ಇಲ್ಲ

  ಅಧಿಕೃತ ಮಾಹಿತಿ ಇಲ್ಲ

  ಸದ್ಯಕ್ಕೆ ಪ್ರಭಾಸ್ ಮಾತ್ರ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಯಾರು ಯಾವ ಪಾತ್ರಗಳನ್ನು ಮಾಡಲಿದ್ದಾರೆ ಎನ್ನುವುದರ ಬಗ್ಗೆ ಅಧಿಕೃತ ಪ್ರಕಟಣೆ ಮಾಡಿಲ್ಲ. ಈ ನಡುವೆ ಕೀರ್ತಿ ಸುರೇಶ್ ನಾಯಕಿ ಎಂಬ ಸುದ್ದಿ ವೈರಲ್ ಆಗಿತ್ತು. ಈಗ, ಕಿಯಾರಾ ಅಡ್ವಾಣಿ ಸೀತೆ ಎಂಬ ಸುದ್ದಿಯೂ ಚರ್ಚೆಯಾಗ್ತಿದೆ. ಆದರೆ, ಈ ಕುರಿತು ಚಿತ್ರತಮಡ ಅಧಿಕೃತ ಮಾಡಿಲ್ಲ.

  'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ

  ಸೈಫ್ ಅಲಿ ಖಾನ್ ರಾವಣ!

  ಸೈಫ್ ಅಲಿ ಖಾನ್ ರಾವಣ!

  ಇನ್ನು ರಾಮಾಯಣ ಅಂದ್ಮೇಲೆ ಅಲ್ಲಿ ರಾವಣನ ಪಾತ್ರ ಇರುತ್ತೆ ಅಲ್ವಾ. ಈ ಪಾತ್ರಕ್ಕಾಗಿ ಸೈಫ್ ಅಲಿ ಖಾನ್ ಗೆ ಅವಕಾಶ ನೀಡಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಇಲ್ಲ.

  500 ಕೋಟಿ ಬಜೆಟ್!

  500 ಕೋಟಿ ಬಜೆಟ್!

  ಈ ಚಿತ್ರಕ್ಕೆ ತಾನಾಜಿ ನಿರ್ದೇಶನ ಮಾಡಿದ್ದ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟಿಸಿರುವ ಸಾಹೋ ಚಿತ್ರದಲ್ಲಿ ಸಹ ನಿರ್ಮಾಪಕ ಹಾಗೂ ರಾಧೇ ಶ್ಯಾಮ್ ಚಿತ್ರಕ್ಕೆ ನಿರ್ಮಾಪಕರಾಗಿರುವ ಭೂಷಣ್ ಕುಮಾರ್ ಈಗ ಆದಿ ಪುರುಷ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಆದಿಪುರುಷ ಚಿತ್ರಕ್ಕಾಗಿ ಸುಮಾರು 500 ಕೋಟಿಗೂ ಹೆಚ್ಚು ಬಂಡವಾಳವನ್ನು ನಿರ್ಮಾಪಕರು ಹಾಕಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸುಮಾರು 250 ಕೋಟಿವರೆಗೂ ವಿಎಫ್‌ಎಕ್ಸ್ ಕೆಲಸಕ್ಕೆ ಬಳಸಲಾಗುತ್ತದೆಯಂತೆ.

  Read more about: prabhas ಪ್ರಭಾಸ್
  English summary
  Bollywood actress Kiara Advani might be play sita role in In Prabhas Adi Purush Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X