For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಚಿತ್ರದಲ್ಲಿ ಆ ನಟಿ ಸೀತೆ ಪಾತ್ರ ಮಾಡೋದು ಬಹುತೇಕ ಖಚಿತ!

  |

  ಪ್ರಭಾಸ್ ನಟನೆಯಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಆದಿ ಪುರುಷ್ ಚಿತ್ರೀಕರಣ ಆರಂಭಿಸಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದರೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಸೀತೆ ಪಾತ್ರ ಯಾರು ಎಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

  ಸೀತೆ ಪಾತ್ರಕ್ಕಾಗಿ ಬಾಲಿವುಡ್‌ನ ಹಲವು ನಟಿಯರು ಹೆಸರು ಚರ್ಚೆಯಾಗ್ತಿದೆ. ಸೌತ್ ಇಂಡಸ್ಟ್ರಿಯ ಕೆಲವು ನಟಿಯರು ಕೂಡ ಈ ರೇಸ್‌ನಲ್ಲಿದ್ದಾರೆ. ಇದೀಗ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಆದಿ ಪುರುಷ್ ಚಿತ್ರದಲ್ಲಿ ಸೀತೆಯಾಗುವುದು ಬಹುತೇಕ ಖಚಿತ ಎಂಬ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡ್ತಿದೆ. ಮುಂದೆ ಓದಿ...

   ಕೀರ್ತಿ ಸುರೇಶ್-ಅನಿರುದ್ಧ ಮದುವೆ: ನಟಿಯ ತಂದೆ ಕೊಟ್ಟರು ಸ್ಪಷ್ಟನೆ ಕೀರ್ತಿ ಸುರೇಶ್-ಅನಿರುದ್ಧ ಮದುವೆ: ನಟಿಯ ತಂದೆ ಕೊಟ್ಟರು ಸ್ಪಷ್ಟನೆ

  ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟ ಮಹಾನಟಿ?

  ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟ ಮಹಾನಟಿ?

  'ತಾನ್ಹಾಜಿ' ಚಿತ್ರ ನಿರ್ದೇಶಿಸಿದ್ದ ಓಂ ರಾವತ್ ಈಗ ಆದಿ ಪುರುಷ್ ಸಿನಿಮಾಗೆ ಆಕ್ಷನ್ ಹೇಳುತ್ತಿದ್ದಾರೆ. ಕೀರ್ತಿ ಸುರೇಶ್ ಬಳಿಕ ಆದಿ ಪುರುಷ್ ಚಿತ್ರ ಕುರಿತು ಮಾತುಕತೆ ಮಾಡಿದ್ದು, ಸ್ಕ್ರಿಪ್ಟ್ ಸಹ ವಿವರಿಸಿದ್ದಾರೆ. ಕಥೆ ಕೇಳಿ ಇಷ್ಟಪಟ್ಟಿರುವ ಮಹಾನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗ, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

  ಮುಂಬೈನಲ್ಲಿ ಶೂಟಿಂಗ್

  ಮುಂಬೈನಲ್ಲಿ ಶೂಟಿಂಗ್

  ಆದಿ ಪುರುಷ್ ಸಿನಿಮಾ 400 ಕೋಟಿಗೂ ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿದೆ. ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. 3ಡಿ ಯಲ್ಲಿ ಆದಿ ಪುರುಷ್ ತೆರೆಗೆ ಬರಲಿದೆ. ಪ್ರಸ್ತುತ, ಮುಂಬೈನಲ್ಲಿ ಆದಿ ಪುರುಷ್ ಚಿತ್ರೀಕರಣ ನಡೆದಿದ್ದು, ನಟ ಪ್ರಭಾಸ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

  ಚಿತ್ರರಂಗದಲ್ಲಿ 11 ವರ್ಷ ಪೂರೈಸಿದ ಸಮಂತಾ: ಕಾಮನ್ ಡಿಪಿ ರಿಲೀಸ್ ಮಾಡಿದ 'ಮಹಾನಟಿ' ಕೀರ್ತಿಚಿತ್ರರಂಗದಲ್ಲಿ 11 ವರ್ಷ ಪೂರೈಸಿದ ಸಮಂತಾ: ಕಾಮನ್ ಡಿಪಿ ರಿಲೀಸ್ ಮಾಡಿದ 'ಮಹಾನಟಿ' ಕೀರ್ತಿ

  ಪ್ರಭಾಸ್ ಚಿತ್ರದಲ್ಲಿ ಹೇಮಾ ಮಾಲಿನಿ, ವಿಕ್ಕಿ ಕೌಶಲ್

  ಪ್ರಭಾಸ್ ಚಿತ್ರದಲ್ಲಿ ಹೇಮಾ ಮಾಲಿನಿ, ವಿಕ್ಕಿ ಕೌಶಲ್

  ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದರೆ, ರಾಮನ ತಾಯಿ ಕೌಸಲ್ಯ ಪಾತ್ರದಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿ ಅಭಿನಯಿಸಲಿದ್ದಾರೆ. ವಿಕ್ಕಿ ಕೌಶಲ್ ಲಕ್ಷ್ಮಣನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯೂ ಇದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಬ್ಬರಿಸಲಿದ್ದಾರೆ.

  ಆದಿ ಪುರುಷ್ ರಿಲೀಸ್ ಯಾವಾಗ?

  ಆದಿ ಪುರುಷ್ ರಿಲೀಸ್ ಯಾವಾಗ?

  ಸೀತೆ ಪಾತ್ರಕ್ಕಾಗಿ ಕೀರ್ತಿ ಸುರೇಶ್, ಕೃತಿ ಸನೂನ್, ಕತ್ರಿನಾ ಕೈಫ್ ಸೇರಿದಂತೆ ಹಲವರ ನಟಿಯರು ಹೆಸರು ಚರ್ಚೆಯಾಗಿತ್ತು. ಆದ್ರೀಗ, ಅಂತಿಮವಾಗಿ ಕೀರ್ತಿ ಸುರೇಶ್ ಪಾಲಿಗೆ ಈ ಅವಕಾಶ ಬಂದಿದೆಯಂತೆ. ಸದ್ಯದಲ್ಲೇ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಇನ್ನುಳಿದಂತೆ 2022ರ ಆಗಸ್ಟ್ 11 ರಂದು ಆದಿ ಪುರುಷ್ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ.

  English summary
  Kannada actress Keerthy Suresh is rumoured to Play Sita role In Prabhas and Saif Ali Khan starrer Adi Purush.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X