For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಿರ್ದೇಶಕ-ಸ್ಟಾರ್ ನಟನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ?

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ, ಮೋಹನ್ ಲಾಲ್ ನಟಿಸಿರುವ 'ಮರಕ್ಕರ್' ಸಿನಿಮಾ ಹಾಗೂ ಮಹೇಶ್ ಬಾಬು ಜೊತೆ 'ಸರ್ಕಾರು ವಾರಿ ಪಾಟ' ಅಂತಹ ಚಿತ್ರಗಳಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಚಿತ್ರಗಳ ಕೀರ್ತಿಯ ಬಹುನಿರೀಕ್ಷೆಯ ಪ್ರಾಜೆಕ್ಟ್‌ಗಳು. ಇದೀಗ, ಮತ್ತೊಂದು ಮೆಗಾ ಸಿನಿಮಾದ ಅವಕಾಶ ಬಂದಿದೆ ಎಂಬ ವಿಚಾರ ಚರ್ಚೆಯಲ್ಲಿದೆ.

  ತಮಿಳು ನಟ ವಿಜಯ್ ನಟಿಸಲಿರುವ ಮುಂಬರುವ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ ನಟಿಸುವ ಅವಕಾಶ ಸಿಕ್ಕಿದೆ. ಇದು ಅಧಿಕೃತವಾಗಿ ಪ್ರಕಟವಾಗಬೇಕಷ್ಟೇ ಎಂದು ಹೇಳಲಾಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಲಿದೆ. ಈ ಚಿತ್ರಕ್ಕೆ ಟಾಲಿವುಡ್‌ನ ಯಶಸ್ವಿ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದೆ ಓದಿ....

  ವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತುವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತು

  'ಮಹರ್ಷಿ' ನಿರ್ದೇಶಕನ ಜೊತೆ ವಿಜಯ್?

  'ಮಹರ್ಷಿ' ನಿರ್ದೇಶಕನ ಜೊತೆ ವಿಜಯ್?

  ಮಹೇಶ್ ಬಾಬು ಜೊತೆ 'ಮಹರ್ಷಿ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿದ ನಿರ್ದೇಶಕ ವಂಶಿ ಪೈಡಿಪಲ್ಲಿ ಈಗ ತಮಿಳು ನಟ ವಿಜಯ್ ಜೊತೆ ಮುಂದಿನ ಪ್ರಾಜೆಕ್ಟ್ ಮಾಡಲು ಯೋಜಿಸಿದ್ದಾರೆ. ಅದಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದು, ನಾಯಕಿಯನ್ನಾಗಿ ಕೀರ್ತಿ ಸುರೇಶ್‌ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ.

  ವಿಜಯ್ ಜೊತೆ ಕೀರ್ತಿ ಮೂರನೇ ಚಿತ್ರ

  ವಿಜಯ್ ಜೊತೆ ಕೀರ್ತಿ ಮೂರನೇ ಚಿತ್ರ

  ಒಂದು ವೇಳೆ ವಂಶಿ ಪೈಡಿಪಲ್ಲಿ ಸಿನಿಮಾವನ್ನು ಕೀರ್ತಿ ಸುರೇಶ್ ಓಕೆ ಮಾಡಿದ್ರೆ, ವಿಜಯ್ ಜೊತೆ ಮೂರನೇ ಸಿನಿಮಾ ಆಗಲಿದೆ. ಇದಕ್ಕೂ ಮುಂಚೆ 2017ರಲ್ಲಿ 'ಭೈರವ' ಹಾಗೂ 2018ರಲ್ಲಿ 'ಸರ್ಕಾರ್' ಚಿತ್ರಗಳಲ್ಲಿ ಕೀರ್ತಿ ಸುರೇಶ್ ಮತ್ತು ವಿಜಯ್ ಒಟ್ಟಿಗೆ ನಟಿಸಿದ್ದರು.

  ಅಣ್ಣಾವ್ರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಸ್ಟಾರ್ ನಟಿಅಣ್ಣಾವ್ರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಸ್ಟಾರ್ ನಟಿ

  ದಿಲ್ ರಾಜು ನಿರ್ಮಾಣ

  ದಿಲ್ ರಾಜು ನಿರ್ಮಾಣ

  ಅಂದ್ಹಾಗೆ, ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸಲಿದ್ದಾರೆ ಎಂಬ ಸುದ್ದಿ ಇದೆ. ಇಷ್ಟು ದಿನ ಡಬ್ ಚಿತ್ರಗಳ ಮೂಲಕ ವಿಜಯ್ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಆದ್ರೀಗ, ಮೊಟ್ಟ ಮೊದಲ ಬಾರಿಗೆ ನೇರವಾಗಿ ತೆಲುಗು ಆಡಿಯೆನ್ಸ್‌ ತಲುಪಲು ವಿಜಯ್ ಸಜ್ಜಾಗಿದ್ದಾರೆ. ಏಕಂದ್ರೆ, ಇದು ದ್ವಿಭಾಷೆ ಸಿನಿಮಾ ಆಗಿದ್ದು, ಏಕಕಾಲದಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  ದಳಪತಿ 65 ಶೂಟಿಂಗ್

  ದಳಪತಿ 65 ಶೂಟಿಂಗ್

  ಅಂದ್ಹಾಗೆ, ವಿಜಯ್ ನಟಿಸುತ್ತಿರುವ 65ನೇ ಚಿತ್ರ ಈಗಾಗಲೇ ಜಾರ್ಜಿಯಾದಲ್ಲಿ ಚಿತ್ರೀಕರಣ ಆರಂಭಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಸನ್ ಪಿಕ್ಚರ್ಸ್ ಬಂಡವಾಳ ಹಾಕಿದೆ. ಕೊರೊನಾ ಭೀತಿಯಿಂದ ಸದ್ಯಕ್ಕೆ ಶೂಟಿಂಗ್ ಸ್ಥಗಿತಗೊಳಿಸಲಾಗಿದ್ದು, ಚೆನ್ನೈನಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಯೋಜನೆ ರೂಪುಗೊಂಡಿದೆ.

  English summary
  South actress Keerthy Suresh will romance with Vijay in Vamshi paidipally project said said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X