For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್‌ನಲ್ಲಿ ಮಾಸ್ಟರ್ ಪ್ಲ್ಯಾನ್: ಯಂಗ್‌ ರೆಬೆಲ್ ಸ್ಟಾರ್ ಪ್ರಭಾಸ್ ಎದುರು ಅಧೀರ ಸಂಜಯ್ ದತ್?

  |

  ಪ್ಯಾನ್ ಇಂಡಿಯಾ ಜಮಾನದಲ್ಲಿ ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸೋದು, ಸೌತ್ ಸೂಪರ್ ಸ್ಟಾರ್ ಹಿಂದಿ ಸಿನಿಮಾಗಳಲ್ಲಿ ನಟಿಸೋದು ಕಾಮನ್ ಆಗ್ಬಿಟ್ಟಿದೆ. ಸಂಜತ್ ದತ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ಸಲ್ಮಾನ್ ಖಾನ್‌ರಂತಹ ಸೂಪರ್ ಸ್ಟಾರ್‌ಗಳೇ ದಕ್ಷಿಣದ ಸಿನಿಮಾಗಳಲ್ಲಿ ನಟಿಸೋಕೆ ಸೈ ಎನ್ನುತ್ತಿದ್ದಾರೆ. KGF- 2 ಚಿತ್ರದಲ್ಲಿ ಅಧೀರನಾಗಿ ಅಬ್ಬರಿಸಿದ ಸಂಜಯ್ ದತ್ ಇದೀಗ ಪ್ರಭಾಸ್ ಎದುರು ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ.

  'ಆದಿಪುರುಷ್', 'ಸಲಾರ್', 'ಪ್ರಾಜೆಕ್ಟ್‌ K' ಹೀಗೆ ಬ್ಯಾಕ್‌ ಟು ಬ್ಯಾಕ್ ಬಿಗ್‌ ಬಜೆಟ್ ಸಿನಿಮಾಗಳಲ್ಲಿ ಪ್ರಭಾಸ್ ನಟಿಸ್ತಿದ್ದಾರೆ. ಇತ್ತೀಚೆಗೆ ದೊಡ್ಡಪ್ಪ ಅಗಲಿಕೆಯ ನೋವಿನಲ್ಲೂ 'ಸಲಾರ್' ಸಿನಿಮಾ ಚಿತ್ರೀಕರಣದಲ್ಲಿ ಯಂಗ್ ರೆಬಲ್ ಸ್ಟಾರ್ ಬಣ್ಣ ಹಚ್ಚಿದ್ದರು. ಮತ್ತೊಂದ್ಕಡೆ ಪ್ರಭಾಸ್ ನಟನೆಯ 'ಪ್ರಾಜೆಕ್ಟ್‌ K' ಸಿನಿಮಾ ಹೊಸ ಶೆಡ್ಯೂಲ್ ಪ್ಲ್ಯಾನ್ ನಡೀತಿದೆ. 'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರಕ್ಕೂ ಡಾರ್ಲಿಂಗ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಸಲಾರ್ ಕಾರ್ನೇಜ್‌ಗೆ ಇನ್ನೊಂದು ವರ್ಷ ಎಂದ ಚಿತ್ರತಂಡ; ಈ ಕಾರ್ನೇಜ್ ಎಂದರೇನು?ಸಲಾರ್ ಕಾರ್ನೇಜ್‌ಗೆ ಇನ್ನೊಂದು ವರ್ಷ ಎಂದ ಚಿತ್ರತಂಡ; ಈ ಕಾರ್ನೇಜ್ ಎಂದರೇನು?

  ಪ್ರಭಾಸ್ 'ರಾಜಾ ಡೀಲಕ್ಸ್' ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಮಾರುತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಸಂಜಯ್ ದತ್‌ಗಾಗಿ ಒಂದು ವಿಶೇಷವಾದ ರೋಲ್ ಡಿಸೈನ್ ಮಾಡ್ತಿದ್ದಾರಂತೆ ನಿರ್ದೇಶಕರು. ಆ ಪಾತ್ರದಲ್ಲಿ ಸಂಜುಬಾಬಾ ನಟಿಸಿದರೆ ಚೆನ್ನಾಗರುತ್ತೆ ಎನ್ನುವುದು ಚಿತ್ರತಂಡ ಆಸೆ. ಈಗಾಗಲೇ ಚಿತ್ರತಂಡ ಅಪ್ರೋಚ್ ಕೂಡ ಮಾಡಿದೆಯಂತೆ. ಆದರೆ ಸಂಜು ಬಾಬಾ ಒಪ್ಪಿಕೊಂಡಿದ್ದಾರಾ? ಇಲ್ವಾ ? ಅನ್ನೋದು ಗೊತ್ತಾಗಿಲ್ಲ.

  ಪೀಪುಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 'ರಾಜಾ ಡೀಲಕ್ಸ್' ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಇನ್ನು ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಒಂದು ಪಾತ್ರಕ್ಕೆ ಮಾಳವಿಕಾ ಮೋಹನನ್ ಆಯ್ಕೆ ಆಗಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ನಡೀತಿದೆ. ಈಗಾಗಲೇ ಸದ್ದಿಲ್ಲದೇ ಸಿನಿಮಾ ಮುಹೂರ್ತ ಕೂಡ ನಡೆದಿದೆ ಎನ್ನಲಾಗುತ್ತಿದೆ. ಹಾರರ್ ಕಾಮಿಡಿ ಚಿತ್ರದಲ್ಲಿ ಪ್ರಭಾಸ್ ಈವರೆಗೆ ನಟಿಸಿಲ್ಲ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಒಂದು ಥಿಯೇಟರ್‌ನಲ್ಲೇ ಇಡೀ ಸಿನಿಮಾ ಕಥೆ ಸಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕಡಿಮೆ ಅವಧಿಯಲ್ಲಿ ಶೂಟಿಂಗ್ ಮಾಡಿ ಮುಗಿಸಲು ತಂಡ ತೀರ್ಮಾನಿಸಿದೆ.

  KGF 2 Adheera Sanjay Dutt to make Telugu debut with Raja deluxe alongside Prabhas

  ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ನಟಿಸುವುದು ಬೇಡ ಎಂದು ಕೆಲ ಅಭಿಮಾನಿಗಳು ಹಠ ಹಿಡಿದಿದ್ದರು. ಮಾರುತಿ ನಿರ್ದೇಶನದ ಚಿತ್ರಗಳು ಇತ್ತೀಚೆಗೆ ಸದ್ದು ಮಾಡ್ತಿಲ್ಲ. 200, 300 ಕೋಟಿ ರೂ. ಬಜೆಟ್‌ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಆದರೆ ಇಂತಹ ಚಿತ್ರದಲ್ಲಿ ನಟಿಸಿದರೆ ಫ್ಲಾಪ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರವನ್ನು ಬಾಯ್‌ಕಾಟ್ ಮಾಡ್ತೀವಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದರು. ಸಂಜಯ್ ದತ್ ಒಂದು ವೇಳೆ ನಟಿಸಲು ಒಪ್ಪಿದರೆ KGF- 2 ನಂತರ ನಟಿಸುವ 2ನೇ ಸೌತ್ ಸಿನಿಮಾ 'ರಾಜಾ ಡೀಲಕ್ಸ್' ಆಗಲಿದೆ.

  English summary
  KGF 2 Adheera Sanjay Dutt to make Telugu debut with Raja deluxe alongside Prabhas. Know More.
  Wednesday, September 28, 2022, 19:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X