For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಬಿಗ್ ಅಪ್ ಡೇಟ್: ದಸರಾ ಹಬ್ಬಕ್ಕೆ ಸಿನಿಮಾ ತೆರೆಗೆ?

  |

  'ಕೆಜಿಎಫ್-2' ಪ್ರತಿಯೊಬ್ಬ ಚಿತ್ರಾಭಿಮಾನಿಯು ಕಾತರದಿಂದ ಕಾಯುತ್ತಿರುವ ಸಿನಿಮಾ. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಕೆಜಿಎಫ್-2 ಯಾವಾಗ ತೆರೆಗೆ ಬರುತ್ತೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಚಿತ್ರದ ಪುಟ್ಟ ಪುಟ್ಟ ಅಪ್ ಡೇಟ್ ಗೆ ಕುತೂಹಲದಿಂದ ಕಾಯುತ್ತಿರುವ ಚಿತ್ರಾಭಿಮಾನಿಗಳಿಗೆ ಸದ್ಯ ಚಿತ್ರದಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ.

  ಈ ದಿನ ರಿಲೀಸ್ ಆಗುತ್ತೆKGF 2..? | kgf2 | Yash | kgf2 release date | Prashanth neel

  ಹೌದು, ಕೆಜಿಎಫ್-2 ಸಿನಿಮಾ ರಿಲೀಸ್ ಯಾವಾಗ ಅಂತ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹರಿದಾಡುತ್ತಿದೆ. ಮೂಲಗಳ ಪ್ರಕಾರ ಕೆಜಿಎಫ್-2 ಸಿನಿಮಾ ವಿಶೇಷ ದಿನದಂದು ತೆರೆಗೆ ಬರಲು ಸಜ್ಜಾಗುತ್ತಿದೆಯಂತೆ. ಅಂದರೆ ಕೆಜಿಎಫ್-2 ದಸರ ಹಬ್ಬಕ್ಕೆ ಅದ್ದೂರಿಯಾಗಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

  'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ

  ದಸರ ಹಬ್ಬಕ್ಕೆ ಕೆಜಿಎಫ್ ರಿಲೀಸ್?

  ದಸರ ಹಬ್ಬಕ್ಕೆ ಕೆಜಿಎಫ್ ರಿಲೀಸ್?

  ಇಡೀ ಭಾರತೀಯ ಚಿತ್ರರಂಗವೆ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆಯಂತೆ. ಅಂದರೆ ದಸರ ಹಬ್ಬಕ್ಕೆ ಚಿತ್ರಪ್ರಿಯರಿಗೆ ರಾಕಿ ಭಾಯ್ ಕಡೆಯಿಂದ ಬಿಗ್ ಗಿಫ್ಟ್ ಸಿಗಲಿದೆ. ದಸರ ಹಬ್ಬದ ಸಮಯಕ್ಕೆ ಅಂದರೆ ಅಕ್ಟೋಬರ್ 23ಕ್ಕೆ ಕೆಜಿಎಫ್-2 ಸಿನಿಮಾ ದೇಶ-ವಿದೇಶದಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

  'ಇನ್ಮುಂದೆ 'KGF-2' ಬಗ್ಗೆ ಕೇಳುವುದನ್ನು ನೀವು ಮಿಸ್ ಮಾಡಿಕೊಳ್ಳುತ್ತೀರಿ': ಪ್ರಶಾಂತ್ ನೀಲ್'ಇನ್ಮುಂದೆ 'KGF-2' ಬಗ್ಗೆ ಕೇಳುವುದನ್ನು ನೀವು ಮಿಸ್ ಮಾಡಿಕೊಳ್ಳುತ್ತೀರಿ': ಪ್ರಶಾಂತ್ ನೀಲ್

  ಅಧಿಕೃತವಾಗಿ ರಿಲೀಸ್ ಡೇಟ್ ಬಹಿರಂಗವಾಗಿಲ್ಲ

  ಅಧಿಕೃತವಾಗಿ ರಿಲೀಸ್ ಡೇಟ್ ಬಹಿರಂಗವಾಗಿಲ್ಲ

  ಮೂಲಗಳ ಪ್ರಕಾರ ಸಿನಿಮಾ ಅಕ್ಟೋಬರ್ 23ಕ್ಕೆ ದಸರ ಹಬ್ಬಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಇತ್ತೀಚಿಗೆ ಮಾತನಾಡಿದ್ದ ಯಶ್ ಸಧ್ಯದಲ್ಲೇ ರಿಲೀಸ್ ಡೇಟ್ ಬಗ್ಗೆ ಅಪ್ ಡೇಟ್ ನೀಡುವುದಾಗಿ ಹೇಳಿದ್ದರು.

  ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್

  ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್

  ಚಿತ್ರದ ಬಗ್ಗೆ ಅಪ್ ಡೇಟ್ ನೀಡುವುದಾಗಿ ಇತ್ತೀಚಿಗಷ್ಟೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದರು. "ಈ ತಿಂಗಳಲ್ಲಿ ಕೆಜಿಎಫ್-2 ಚಿತ್ರದ ಬಗ್ಗೆ ಅಪ್ ಡೇಟ್ ನೀಡುತ್ತೇನೆ. ಆದರೆ ಟೀಸರ್ ಬಗ್ಗೆ ಅಪ್ ಡೇಟ್ ಅಲ್ಲ". ಎಂದು ಹೇಳಿದ್ದರು. ಹಾಗಾಗಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ.

  'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ

  ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯ

  ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯ

  ಈಗಾಗಲೆ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಲಿದೆ. ಕೆಜಿಎಫ್ ಪಾರ್ಟ್-2 ಮತ್ತಷ್ಟು ರೋಚಕವಾಗಿರಲಿದೆಯಂತೆ. ಚಿತ್ರದಲ್ಲಿ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕುತೂಹಲ, ನಿರೀಕ್ಷೆಯೊಂದಿಗೆ ಕೆಜಿಎಫ್-2 ದಸರ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada Actor Yash starrer KGF-2 movie is likely to be released during the Dasara festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X