For Quick Alerts
  ALLOW NOTIFICATIONS  
  For Daily Alerts

  ಯಶ್‌ಗಾಗಿ ಬರ್ತಿದ್ದಾಳೆ ಬಾಲಿವುಡ್ ಬೆಡಗಿ ನೋರಾ!

  |

  ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಹೀರೋ. ಅವರ ಸಿನಿಮಾ ಬರ್ತಿದೆ ಅಂದರೆ ಭಾರತದಾದ್ಯಂತ ಪ್ರೇಕ್ಷಕರು ಕಾದು ಸಿನಿಮಾ ನೋಡ್ತಾರೆ. ಭಾರತದಾದ್ಯಂತ ಯಶ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ನಂತರ ಯಶ್ ಅವರು ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದು ಸೌತ್ ಇಂಡಿಯಾ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ.

  ಈಗ ಎಲ್ಲರೂ ಯಶ್ ಅವರನ್ನು ಕೆಜಿಎಫ್2 ಚಿತ್ರದಲ್ಲಿ ಕಣ್ತುಂಬಿಕೊಳ್ಳು ಕಾಯುತ್ತಿದ್ದಾರೆ. ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಈಗ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನಂದ್ರೆ ಬಾಲಿವುಡ್ ಬೆಡಗಿ ನೋರಾ ಫತೇಹಿ ಯಶ್‌ಗಾಗಿ ಕನ್ನಡಕ್ಕೆ ಬರ್ತಿದ್ದಾರಂತೆ.

  ಕೆಜಿಎಫ್ 2 ಚಿತ್ರದಲ್ಲಿಯ ಒಂದು ಐಟಂ ಹಾಡಿಗೆ ಬಾಲಿವುಡ್ ಖ್ಯಾತ ನಟಿ, ಡ್ಯಾನ್ಸರ್ ನೋರಾ ಫತೇಹಿ ಹೆಜ್ಜೆ ಹಾಕುತ್ತಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಈ ಸುದ್ದಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ‌ನೋರಾ ಯಶ್ ಜೊತೆಗೆ ಡ್ಯಾನ್ಸ್ ಮಾಡುವುದು ಖಚಿತ ಎನ್ನಲಾಗುತ್ತಿದೆ. ಈ ವಿಶೇಷ ಹಾಡಿಗಾಗಿ ರೆಟ್ರೋ ಹಾಡುಗಳನ್ನು ಮತ್ತೆ ರಿಮೇಕ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

  ಈ ಹಿಂದೆ ಕೆಜಿಎಫ್ ಸಿನಿಮಾಗಾಗಿ ಹಿಂದಿಯಲ್ಲಿ 'ಗಲಿ ಗಲಿ' ಹಾಡನ್ನು ಐಟಂ ಹಾಡಾಗಿ ಮಾಡಲಾಗಿತ್ತು. ಅಂತೆಯೇ ಕನ್ನಡದ ಜೋಕೆ ನಾನು ಬಳ್ಳಿಯ ಮಿಂಚಿ ಹಾಡನ್ನು ಕೂಡ ರಿಮೇಕ್ ಮಾಡಲಾಗಿತ್ತು. ಈ ಹಾಡುಗಳಿಗೆ ತಮನ್ನಾ ಮತ್ತು ಮೌನಿ ರಾಯ್ ಹೆಜ್ಜೆ ಹಾಕಿದ್ದರು. ಎರಡೂ ಹಾಡುಗಳು ಕೂಡ ಸೂಪರ್ ಹಿಟ್ ಲಿಸ್ಟ್ ಸೇರಿದ್ದವು. ಈಗ ಕೆಜಿಎಫ್2 ಚಿತ್ರದ ಐಟಂ ಹಾಡಿನಲ್ಲಿ ನೋರಾ ಫತೇಹಿ ಯಶ್ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಇದು ಬಹುತೇಕ ಖಚಿತ ಆಗಿದೆ. ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕು ಅಷ್ಟೇ.

  ನಟ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಬಂದ ಬಳಿಕ ಅವರ ವರ್ಚಸ್ಸೇ ಬದಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಹೊರ ಹೊಮ್ಮಿದರು. ಕೆಜಿಎಫ್ ಚಿತ್ರ ಬಳಿಕ ಎಲ್ಲಿ ನೋಡಿದರೂ ಕೆಜಿಎಫ್ ಭಾಗ-2ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಯಾವಾಗ ಬರುತ್ತದೆ ಎಂದು ಇಡೀ ದೇಶಾದ್ಯಂತ ಸಿನಿಮಾ ಪ್ರಿಯರು ಎದುರು ನೋಡುತ್ತಿದ್ದಾರೆ.

  ಈಗಾಗಲೇ ಟೀಸರ್ ಮೂಲಕ ಸಕ್ಕತ್ ಸದ್ದು ಮಾಡಿರುವ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ದಿನಾಂಕ ಫಿಕ್ಸ್ ಮಾಡಿಕೊಂಡಿದೆ. ಕೊರೋನಾ ಹಂತಹಂತವಾಗಿ ಕಡಿಮೆಯಾದರೆ ನಿಗದಿಪಡಿಸಿರುವ ದಿನಾಂಕಕ್ಕೆ ಕೆಜಿಎಫ್ 2 ಸಿನಿಮಾ ಥಿಯೇಟರಿಗೆ ದಾಪುಗಾಲಿಡಲಿದೆ.

  English summary
  Nora Fatehi To Dance With Rocking Star Yash KGF 2

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion