KGF 2 Satellite Rights Price: ಟ್ರೈಲರ್ ರಿಲೀಸ್ ಆಗ್ತಿದ್ದಂತೆ 'ಕೆಜಿಎಫ್ 2' ಟಿವಿ ರೈಟ್ಸ್ ಕೋಟಿ ಮೊತ್ತಕ್ಕೆ ಸೇಲ್!
'ಕೆಜಿಎಫ್ 2' ಸಿನಿಮಾದ ಮೋಸ್ಟ್ ಎಕ್ಸಪೆಕ್ಟೆಡ್ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾದ ಮೇಲಿನ ನಿರೀಕ್ಷೆಯನ್ನು ಬಿಡುಗಡೆಯಾಗಿರುವ ಟ್ರೈಲರ್ ಮತ್ತಷ್ಟು ಹೆಚ್ಚಿಸಿದೆ. ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.
ಇನ್ನು ಟ್ರೈಲರ್ ರಿಲೀಸ್ ಆಗಿ ಕೆಲವೇ ಕೆಲವು ಗಂಟೆಯಲ್ಲಿ ಯೂಟ್ಯೂಬ್‌ನಲ್ಲಿ ನಂ.1 ಟ್ರೆಂಡಿಂಗ್‌ನಲ್ಲಿದೆ. ಕನ್ನಡ ಹಿಂದಿ ತಮಿಳು ಮಲಯಾಳಂ ತೆಲುಗು ಹೀಗೆ ಪಂಚ ಭಾಷೆಗಳಲ್ಲೂ ಟ್ರೈಲರ್ ರಿಲೀಸ್ ಆಗಿದೆ.
'ಕೆಜಿಎಫ್ 2' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ 'ಕೆಜಿಎಫ್ 2' ಚಿತ್ರಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗುತ್ತಿದ್ದು, ಟಿವಿ ರೈಟ್ಸ್ ಪಡೆಯಲು ಹಲವು ಚಾನೆಲ್ ಗಳು ಮುಂದೆ ಬಂದಿವೆ. ತೆಲುಗಿನಿಂದ 'ಕೆಜಿಎಫ್ 2' ಗೆ ಬೇಡಿಕೆ ಹೆಚ್ಚಾಗಿದ್ದು ಊಹೆಗೂ ಮೀರಿ ಆಫರ್‌ಗಳು ಬರುತ್ತಿದೆ.

'ಕೆಜಿಎಫ್ 2' ನ ಟ್ರೈಲರ್ ಮೋಡಿ ಎಂಥಾದ್ದು ?
ಒಂದು ಸಿನಿಮಾ ತಯಾರಾಗ್ತಿದೆ ಅಂದ್ರೆ ಅದರ ಡಿಮ್ಯಾಂಡ್ ನೋಡಿ ರೇಟ್ ಫಿಕ್ಸ್ ಆಗುತ್ತೆ. ಟಿವಿ ರೈಟ್ಸ್, ಒಟಿಟಿ ರೈಟ್ಸ್, ಹೀಗೆ ರಿಲೀಸ್‌ಗೂ ಮುನ್ನವೇ ಚಿತ್ರಗಳಿಗೆ ವರಮಾನ ಬರಲು ಆರಂಭವಾಗುತ್ತೆ. ಇನ್ನು ಬಹುನಿರೀಕ್ಷಿತ ಚಿತ್ರ ಅಂದ್ರೆ ಅದರ ಬಗ್ಗೆ ಹೇಳಲೇ ಬೇಕಾಗಿಲ್ಲ. ದೊಡ್ಡ ಮೊತ್ತಕ್ಕೆ ಅದಾಗಲೇ ಕೋಟಿ ಕೋಟಿ ಲೆಕ್ಕದಲ್ಲಿ ಮಾತುಕತೆ ನಡೆದು ಬಿಡುತ್ತೆ. ಇದೀಗ 'ಕೆಜಿಎಫ್ 2' ಗೂ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತಿದ್ದು, 'ಕೆಜಿಎಫ್ 2' ನ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೆ ವ್ಯವಹಾರಗಳು ಆರಂಭವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ದೇಶದಾದ್ಯಂತ ಅಭಿಮಾನಿಗಳು ಕಾದು ಕೂತಿದ್ದಾರೆ
'ಕೆಜಿಎಫ್ 2' ಹೇಳಿ ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಈ ಒಂದು ಚಿತ್ರಕ್ಕಾಗಿ ದೇಶದಾದ್ಯಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಸಿನಿಮಾವನ್ನು ನೋಡಬೇಕು ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಇದೆ. ಚಿತ್ರ ರಿಲೀಸ್‌ಗು ಮುನ್ನವೇ ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ, ಜನರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನು ಟ್ರೈಲರ್‌ಗೆ ಬರುತ್ತಿರುವ ರೆಸ್ಪಾನ್ಸ್ ನೋಡಿ 'ಕೆಜಿಎಫ್ 2' ಹಕ್ಕುಗಳ ಮೊತ್ತ ಕೂಡ ಏರಿಕೆ ಆಗುತ್ತಿದೆ. ಈಗಾಗಲೇ ತೆಲುಗು ಟಿವಿ ರೈಟ್ಸ್ ಸೇಲ್ 70 ಕೋಟಿಗೆ ಸೇಲ್ ಆಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
Recommended Video


66 ಕೋಟಿಗೆ ಹಕ್ಕನ್ನು ಪಡೆದ ದಿಲ್ ರಾಜು
ಇದು ಸಾಮಾನ್ಯ ಮೊತ್ತವಲ್ಲ. ಯಾಕಂದ್ರೆ ತೆಲುಗಿನ ಸೂಪರ್ ಸ್ಟಾರ್‌ಗಳ ಸಿನಿಮಾದ ಟಿವಿ ರೈಟ್ಸ್ ಕೂಡ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗೊದು ಅಪರೂಪ. ಅದರಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ತೆಲುಗು ಟಿವಿ ರೈಟ್ಸ್ ಇಷ್ಟರ ಮಟ್ಟಿಗೆ ಸೇಲ್ ಆಗಿರೋದು ಅಚ್ಚರಿಯ ವಿಚಾರವೇ ಸರಿ. ಇನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು 'ಕೆಜಿಎಫ್ 2' ನ ತೆಲುಗು ಚಿತ್ರದ ಹಕ್ಕನ್ನು 66 ಕೋಟಿಗೆ ಪಡೆದುಕೊಂಡಿದ್ದಾರಂತೆ.

ಎಲ್ಲಾ ಭಾಷೆಗಳಲ್ಲೂ ಸೇರಿ ಸುಮಾರು 250 ಕೋಟಿ ಬ್ಯುಸಿನೆಸ್
ಇನ್ನುಳಿದಂತೆ ತಮಿಳಿನಲ್ಲಿ 'ಕೆಜಿಎಫ್ 2' ಟಿವಿ ರೈಟ್ಸ್ 40 ಕೋಟಿಗೆ ಸೇಲ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಜೊತೆಗೆ ಕನ್ನಡದಲ್ಲಿ 100 ಕೋಟಿ ಬ್ಯಸಿನೆಸ್ ಈಗಾಗಲೇ ಆಗಿದೆಯಂತೆ. ಹೀಗೆ 'ಕೆಜಿಎಫ್ 2' ರಿಲೀಸ್‌ಗೂ ಮುನ್ನವೇ ಎಲ್ಲಾ ಭಾಷೆಗಳಲ್ಲೂ ಸೇರಿ ಸುಮಾರು 250 ಕೋಟಿ ಬ್ಯುಸಿನೆಸ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೆಲ್ಲಾ ಕೇಳುತ್ತಿದ್ದರೇ 'ಕೆಜಿಎಫ್ 2' ಯಾವ ಮಟ್ಟಕ್ಕೆ ತನ್ನ ಛಾಪನ್ನು ಎಲ್ಲಾ ಕಡೆ ಪಸರಿಸಿದೆ ಅನ್ನೋದು ತಿಳಿದು ಬರುತ್ತಿದೆ. ಎನೀ ವೇ ಕನ್ನಡದ ಸಿನಿಮಾ 'ಕೆಜಿಎಫ್ 2' ಗೆ ವರ್ಲ್ಡ್ ವೈಡ್ ಇಷ್ಟೊಂದು ಬೇಡಿಕೆ ಬಂದಿರೋದು ಕನ್ನಡಿಗರ ಹೆಮ್ಮೆಯೇ ಸರಿ.


Click it and Unblock the Notifications











