ಇನ್ಮುಂದೆ ಶಾರುಖ್‌ 'ಡಾನ್' ಅಲ್ಲ.. ಬಾಲಿವುಡ್‌ಗೆ ರಾಕಿನೇ 'ಭಾಯ್'?

ಬಾಲಿವುಡ್‌ನಲ್ಲಿ ಡಾನ್ ಸರಣಿಯ ಸಿನಿಮಾಗಳು ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. 70ರ ದಶಕದಲ್ಲಿ ಅಮಿತಾಬ್ ಬಚ್ಚನ್ ಡಾನ್ ಆಗಿ ಅಬ್ಬರಿಸಿದ್ದು ಅದೇ ಕಥೆಯಲ್ಲಿ 17 ವರ್ಷಗಳ ಹಿಂದೆ ಶಾರುಕ್ ಖಾನ್ ದರ್ಬಾರ್ ನಡೆಸಿದ್ದರು. 5 ವರ್ಷಗಳ ನಂತರ ಸೀಕ್ವೆಲ್‌ನಲ್ಲಿ ಮತ್ತೆ ಕಿಂಗ್ ಖಾನ್ ಸದ್ದು ಮಾಡಿದರು. ಇದೀಗ ಸರಣಿಯ 3ನೇ ಚಿತ್ರಕ್ಕೆ ತಯಾರಿ ನಡೀತಿದೆ.

ಸದ್ಯ ಬಿಟೌನ್‌ನಲ್ಲಿ ಡಾನ್ ಸರಣಿಯ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಫರ್ಹಾನ್ ಅಖ್ತರ್ ಈಗಾಗಲೇ ಕತೆ ಸಿದ್ಧಪಡಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಶಾರುಕ್ ಚಿತ್ರದಲ್ಲಿ ನಟಿಸಲ್ಲ ಎಂದು ಹೇಳಿದ್ದಾರಂತೆ. ಇದೇ ವಿಚಾರ ಈಗ ಬಾಲಿವುಡ್‌ನಲ್ಲಿ ಜೋರಾಗಿ ಸದ್ದು ಮಾಡ್ತಿದೆ. ಈ ಸೂಪರ್ ಹಿಟ್ ಸರಣಿ ಚಿತ್ರಕ್ಕೆ ಕಿಂಗ್ ಖಾನ್ ನೋ ಹೇಳ್ತಿದ್ದಾರೆ ಅನ್ನೋದು ಈಗ ಅಚ್ಚರಿ ಮೂಡಿಸಿದೆ. ಇದೆಲ್ಲದರ ನಡುವೆ ಮುಂದೆ ಯಾರು ಡಾನ್ ಆಗಿ ನಟಿಸ್ತಾರೆ ಎನ್ನುವ ಬಗ್ಗೆ ಊಹಾಪೋಹ ಶುರುವಾಗ್ತಿದೆ.

KGF Actor Yash to replace Shahrukh Khan in Farhan Akhtar directional Don- 3

ಸದ್ಯ ಡಾನ್- 3 ಸಿನಿಮಾ ಪ್ರೀಪ್ರೊಡಕ್ಷನ್ ಕೆಲಸಗಳು ನಡೀತಿದೆ. ಇಂತಹ ಹೊತ್ತಲ್ಲಿ ಶಾರುಕ್ ನಟಿಸುವುದಿಲ್ಲ ಎಂದ ಮೇಲೆ ಮುಂದೆ ಡಾನ್ ಆಗಿ ನಟಿಸೋದು ಯಾರು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅಸಲಿಗೆ 17 ವರ್ಷಗಳ ಹಿಂದೆ ಫರ್ಹಾನ್ ಅಖ್ತರ್ 'ಡಾನ್' ಮಾಡ್ಬೇಕು ಎಂದುಕೊಂಡಾಗ ಹೃತಿಕ್‌ ರೋಷನ್‌ ಹೀರೋ ಆಗಬೇಕಿತ್ತು. ಆದರೆ ಆ ಪಾತ್ರಕ್ಕೆ ಕೊಂಚ ಮೆಚೂರ್ಡ್, ರಗಡ್ ಲುಕ್ ಇರುವ ನಟ ಬೇಕಿತ್ತು ಎನ್ನುವ ಕಾರಣಕ್ಕೆ ಕಿಂಗ್‌ ಖಾನ್‌ನ ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾ ಸಕ್ಸಸ್ ಆಗಿತ್ತು.\

ಇದೀಗ ಅಮಿತಾಬ್, ಶಾರುಕ್ ಮಾಡಿರುವ ಐಕಾನಿಕ್ 'ಡಾನ್' ರೋಲ್‌ನಲ್ಲಿ ಯಶ್ ನಟಿಸ್ತಾರಾ ಅನ್ನೋ ಚರ್ಚೆ ಬಾಲಿವುಡ್‌ನಲ್ಲಿ ಶುರುವಾಗಿದೆ. ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ತಮ್ಮದೇ ಎಕ್ಸಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಡಾನ್ ಸರಣಿ ಸಿನಿಮಾಗಳನ್ನು ನಿರ್ಮಿಸಿದ್ದರು. ಸರಣಿಯ ಮುಂದಿನ ಸಿನಿಮಾ ಕೂಡ ಇದೇ ಬ್ಯಾನರ್‌ನಲ್ಲಿ ನಿರ್ಮಾಣ ಆಗಲಿದೆ. ಇನ್ನು ಯಶ್ ನಟನೆಯ 'KGF' ಸರಣಿ ಸಿನಿಮಾಗಳನ್ನು ಇದೇ ಸಂಸ್ಥೆ ಬಾಲಿವುಡ್‌ನಲ್ಲಿ ಡಿಸ್ಟ್ರಿಬ್ಯೂಷನ್ ಮಾಡಿತ್ತು.

'KGF- 2' ಸಿನಿಮಾ ರಿಲೀಸ್ ಆಗಿ ವರ್ಷ ಕಳೆದರೂ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮೌನವಾಗಿ ಇದ್ದಾರೆ. ಇಂತಹ ಹೊತ್ತಲ್ಲೇ 'ಡಾನ್' ಸರಣಿಯಿಂದ ಶಾರುಕ್ ಹೊರ ಬಂದಿರುವ ಸುದ್ದಿ ಹರಿದಾಡ್ತಿದೆ. ಎಕ್ಸಲ್ ಎಂಟರ್‌ಟೈನ್‌ಮೆಂಟ್ ಜೊತೆ ಯಶ್‌ಗೆ ಒಡನಾಟ ಇರುವುದರಿಂದ 'ಡಾನ್'- 3 ಚಿತ್ರಕ್ಕೆ ಆಯ್ಕೆ ಆದರೂ ಅಚ್ಚರಿಪಡಬೇಕಿಲ್ಲ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಶುರುವಾಗಿದೆ. ರಾಕಿಂಗ್ ಸ್ಟಾರ್ ಕೂಡ ತಮ್ಮ ಮುಂದಿನ ಚಿತ್ರಕ್ಕೆ ರಾಕಿ ಭಾಯ್ ಪಾತ್ರವನ್ನು ಮೀರಿಸುವಂತಹ ಪಾತ್ರದ ಹುಡುಕಾಟದಲ್ಲಿದ್ದಾರೆ.

KGF Actor Yash to replace Shahrukh Khan in Farhan Akhtar directional Don- 3

ಯಶ್ ಮುಂದಿನ ಚಿತ್ರಕ್ಕೆ 'ಡಾನ್'ಗಿಂತ ಒಳ್ಳೆ ಆಯ್ಕೆ ಮತ್ತೊಂದಿಲ್ಲ ಎನ್ನುವ ಚರ್ಚೆ ಈಗ ಮುನ್ನಲೆಗೆ ಬಂದಿದೆ. 'ಡಾನ್' ಪಾತ್ರಕ್ಕಿರುವ ಕ್ರೇಜ್‌ ಎಂಥದ್ದು ಅಂತ ಗೊತ್ತೇಯಿದೆ. ಯಶ್ ಈಗಾಗಲೇ ಉತ್ತರ ಭಾರತದಲ್ಲೂ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಯಶ್19 ಚಿತ್ರಕ್ಕಾಗಿ ಬಾಲಿವುಡ್ ಮಂದಿ ಕೂಡ ಕಾಯ್ತಿದ್ದಾರೆ. ಬಿಟೌನ್ ನಟರೇ ರಾಕಿಭಾಯ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. 'KGF' ಸರಣಿಯಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದ ಯಶ್ ಅಂತದ್ದೇ ಮತ್ತೊಂದು ಪಾತ್ರ ಮಾಡಬಹುದು ಎನ್ನುವ ಗುಸುಗುಸು ಶುರುವಾಗಿದೆ.

ಯಶ್ ಬಿಟ್ಟರೆ ಹೃತಿಕ್ ರೋಷನ್ ಹೆಸರು 'ಡಾನ್'- 3 ಚಿತ್ರಕ್ಕೆ ಬಲವಾಗಿ ಕೇಳಿಬರ್ತಿದೆ. ಇನ್ನು ರಣ್‌ವೀರ್ ಸಿಂಗ್, ಮಹೇಶ್ ಬಾಬು, ಶಾಹಿದ್ ಕಪೂರ್ ಹೆಸರುಗಳು ಕೂಡ ಚರ್ಚೆಯಲ್ಲಿದೆ. ಯಶ್ ಆದರೆ ತಮ್ಮ ರಗಡ್ ಲುಕ್, ಸ್ಟೈಲ್ ಹಾಗೂ ಇನ್‌ಟೆನ್ಸ್ ಆಕ್ಟಿಂಗ್‌ನಿಂದ 'ಡಾನ್' ಆಗಿ ಮೆರೆಯೋದು ಕಷ್ಟವಾಗಲ್ಲ ಎನ್ನುವ ಚರ್ಚೆ ದಟ್ಟವಾಗಿದೆ.

More from Filmibeat

English summary
KGF Actor Yash to replace Shahrukh Khan in Farhan Akhtar directional Don- 3. Sharukh khan Has been Rejected Don 3. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X