For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್‌ಗೆ ಚಾಲೆಂಜ್ ಆಗಲಿದ್ಯಾ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ?

  |

  ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ದೇಶಾದ್ಯಂತ ಚಿತ್ರಪ್ರೇಮಿಗಳು ಕಾದು ಕುಂತಿದ್ದಾರೆ. ಕೆಜಿಎಫ್ ಚಾಪ್ಟರ್ 1 ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಚಾಪ್ಟರ್ 2 ಯಾವಾಗ ನೋಡ್ತೀರಿ ಎಂದು ನಿರೀಕ್ಷೆ ಮಾಡ್ತಿದ್ದಾರೆ. ಟೀಸರ್, ಪೋಸ್ಟರ್ ಹಾಗೂ ಮೇಕಿಂಗ್ ಝಲಕ್ ನೋಡಿರುವ ಪ್ರೇಕ್ಷಕ ಪ್ರಭುಗಳು ಇದು ಚಾಪ್ಟರ್ 1 ಮೀರಿಸಲಿದೆ ಎಂದು ಲೆಕ್ಕಾಚಾರ ಹಾಕ್ತಿದ್ದಾರೆ.

  ಸಂಪೂರ್ಣ ಶೂಟಿಂಗ್ ಮುಗಿಸಿರುವ ಕೆಜಿಎಫ್ ಸಿನಿಮಾ ಬಿಡುಗಡೆಗೆ ಬಗ್ಗೆ ಸದ್ಯಕ್ಕೆ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಈ ವರ್ಷದ ಅಂತ್ಯಕ್ಕೆ ಪ್ರೇಕ್ಷಕರೆದುರು ಬರುವ ಸಾಧ್ಯತೆ ಇದೆ ಎಂಬ ಸುದ್ದಿಗಳು ವರದಿಯಾಗಿದೆ. ಇತ್ತೀಚಿಗಷ್ಟೆ ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಕುರಿತು ಥ್ರಿಲ್ ಹೆಚ್ಚಿಸಿದೆ.

  ಕೆಜಿಎಫ್ 2 ಅಪ್‌ಡೇಟ್: ರಿಲೀಸ್ ಬಗೆಗಿನ ಈ ಸುದ್ದಿ ನಿಜ ಆಗುತ್ತಾ?ಕೆಜಿಎಫ್ 2 ಅಪ್‌ಡೇಟ್: ರಿಲೀಸ್ ಬಗೆಗಿನ ಈ ಸುದ್ದಿ ನಿಜ ಆಗುತ್ತಾ?

  ಕೆಜಿಎಫ್ ಚಿತ್ರಕ್ಕೆ ಮೊದಲಿನಿಂದಲೂ ಪ್ಯಾನ್ ಇಂಡಿಯಾ ಚಿತ್ರವೊಂದು ಸವಾಲಾಗಿ ಬಿಂಬಿತವಾಗುತ್ತಿದೆ. ಈಗ ಬಿಡುಗಡೆ ವಿಚಾರದಲ್ಲೂ ರಾಕಿ ಭಾಯ್‌ಗೆ ಈ ಸಿನಿಮಾ ಚಾಲೆಂಜ್ ಆಗಿ ಕಾಣ್ತಿದೆ. ಅಷ್ಟಕ್ಕೂ, ಯಾವುದು ಆ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ ಚಿತ್ರಕ್ಕೆ ಯಾವ ರೀತಿ ಚಾಲೆಂಜ್ ಆಗಲಿದೆ? ಮುಂದೆ ಓದಿ...

  ಕ್ರಿಸ್‌ಮಸ್‌ಗೆ ಕೆಜಿಎಫ್ ಎಂಟ್ರಿ

  ಕ್ರಿಸ್‌ಮಸ್‌ಗೆ ಕೆಜಿಎಫ್ ಎಂಟ್ರಿ

  ಸದ್ಯದ ವರದಿಗಳ ಪ್ರಕಾರ, ಕೆಜಿಎಫ್ ಸಿನಿಮಾ ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ತೆರೆಗೆ ಬರುವ ತಯಾರಿ ನಡೆಸಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ಯಶ್ ಸಿನಿಮಾ ವರ್ಲ್ಡ್‌ವೈಡ್ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. 'ಲೆಟ್ಸ್ ಒಟಿಟಿ ಗ್ಲೋಬಲ್' ಟ್ವಿಟ್ಟರ್ ಖಾತೆ, ತಮಿಳಿನ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಹಾಗೂ ನಾಗನಾಥನ್ ಕೆಜಿಎಫ್ ಎಂಟ್ರಿ ಡಿಸೆಂಬರ್‌ನಲ್ಲಿ ಎಂದು ಮಾಹಿತಿ ನೀಡಿದ್ದರು.

  ಕೆಜಿಎಫ್‌ಗೆ ಪುಷ್ಪ ಚಾಲೆಂಜ್

  ಕೆಜಿಎಫ್‌ಗೆ ಪುಷ್ಪ ಚಾಲೆಂಜ್

  ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್ ಎಂಟ್ರಿಗೆ ತಯಾರಿ ನಡೆಯುತ್ತಿದೆ. ಈ ನಡುವೆ ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾನೂ ಬಿಡುಗಡೆಯಾಗಬಹುದು ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್ ಮತ್ತು ಪುಷ್ಪ ಮುಖಾಮುಖಿಯಿಂದ ಆಗುವ ಪರಿಣಾಮಗಳ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.

  'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ

  ಪ್ಯಾನ್ ಇಂಡಿಯಾ ಪುಷ್ಪ

  ಪ್ಯಾನ್ ಇಂಡಿಯಾ ಪುಷ್ಪ

  ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ಬರ್ತಿದೆ. ಈ ಕಡೆ ಪುಷ್ಪ ಚಿತ್ರವೂ ಐದು ಭಾಷೆಯಲ್ಲಿ ತೆರೆಗೆ ಬರ್ತಿದೆ. ತಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲಿ ಪುಷ್ಪ ರಿಲೀಸ್ ಆಗುತ್ತಿದೆ ಎಂದು ಈಗಾಗಲೇ ಪ್ರಕಟಿಸಿದೆ. ಹಾಗಾಗಿ, ಭಾರತೀಯ ಚಿತ್ರರಂಗದ ಎರಡು ನಿರೀಕ್ಷೆಯ ಸಿನಿಮಾ ಒಂದೇ ಸಮಯದಲ್ಲಿ ಬಂದ್ರೆ ಬಾಕ್ಸ್ ಆಫೀಸ್‌ನಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲಾಗಿದೆ.

  'ಪುಷ್ಪ' ಹತ್ತು 'ಕೆಜಿಎಫ್'‌ಗೆ ಸಮ

  'ಪುಷ್ಪ' ಹತ್ತು 'ಕೆಜಿಎಫ್'‌ಗೆ ಸಮ

  ಪುಷ್ಪ ಸಿನಿಮಾಗೆ ಹೋಲಿಸಿಕೊಂಡರೆ ಕೆಜಿಎಫ್ ಅಷ್ಟು ದೊಡ್ಡ ಪ್ರಾಜೆಕ್ಟ್ ಅಲ್ಲ ಎಂದು ತೆಲುಗು ನಿರ್ದೇಶಕ ಬುಚ್ಚಿಬಾಬು (ಉಪ್ಪೇನಾ) ಹೇಳಿ ಟೀಕೆಗೆ ಗುರಿಯಾಗಿದ್ದರು. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಬಹಳ ಅದ್ಭುತವಾಗಿ ಮೂಡಿಬಂದಿದೆ. ಪುಷ್ಪ ಸಿನಿಮಾ ಹತ್ತು ಕೆಜಿಎಫ್‌ಗಳಿಗೆ ಸಮ ಎಂದಿದ್ದರು. ಇದು ಸಹಜವಾಗಿ ಯಶ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

  ಜುಲೈ & ಆಗಸ್ಟ್ ಬರಬೇಕಿತ್ತು

  ಜುಲೈ & ಆಗಸ್ಟ್ ಬರಬೇಕಿತ್ತು

  ಈ ಹಿಂದೆ ಪ್ರಕಟಿಸಿದಂತೆ ಜುಲೈ 16 ರಂದು 'ಕೆಜಿಎಫ್ ಚಾಪ್ಟರ್ 2' ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಚಿತ್ರದ ಬಳಿಕ ಆಗಸ್ಟ್ 13 ರಂದು 'ಪುಷ್ಪ' ಬರುವುದಾಗಿ ದಿನಾಂಕ ಘೋಷಣೆ ಮಾಡಿತ್ತು. ಆದರೆ, ಕೊರೊನಾ ವೈರಸ್ ಎರಡನೇ ಲಾಕ್‌ಡೌನ್ ಕಾರಣದಿಂದ ರಿಲೀಸ್ ದಿನಾಂಕಗಳು ಮುಂದೂಡಿಕೆಯಾಗಿದ್ದವು. ಈಗ ಹೊಸ ದಿನಾಂಕ ಘೋಷಣೆ ಮಾಡುವುದರಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರುವ ಚಿತ್ರತಂಡಗಳು ಅಧಿಕೃತವಾಗಿ ಏನು ಹೇಳಿಲ್ಲ.

  ಸಂಕ್ರಾಂತಿಗೆ ಸ್ಟಾರ್ ನಟರ ಚಿತ್ರಗಳು ಫಿಕ್ಸ್

  ಸಂಕ್ರಾಂತಿಗೆ ಸ್ಟಾರ್ ನಟರ ಚಿತ್ರಗಳು ಫಿಕ್ಸ್

  ಹಾಗ್ನೋಡಿದ್ರೆ, ಕೆಜಿಎಫ್ ಚಿತ್ರ ಪುಷ್ಪ ಸಿನಿಮಾಗಳಿಗೆ ರಿಲೀಸ್ ದಿನಾಂಕ ಸದ್ಯಕ್ಕೆ ತಲೆನೋವು ಆಗಿದೆ. ನವೆಂಬರ್ ತಿಂಗಳು ಸೂಪರ್ ಸ್ಟಾರ್ ರಜನಿಯ 'ಅಣ್ಣಾತ್ತೆ' ಸಿನಿಮಾ ಬರಲಿದೆ. ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ', ಪ್ರಭಾಸ್ 'ರಾಧೆಶ್ಯಾಮ್' ಬರಲಿದೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ಹಾಗೂ ವಿಕ್ಟರಿ ವೆಂಕಟೇಶ್-ವರುಣ್ ತೇಜ ನಟನೆಯ 'ಎಫ್‌3' ಬರುವ ಸಾಧ್ಯತೆ ಇದೆ.

  English summary
  Rocking star Yash starrer KGF chapter 2 and Allu Arjun starrer Pushpa film set to Release on Christmas 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X