ವಿಜಯ್ ಮತ್ತು ಯಶ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸುವ ಸುದ್ದಿ!

ಜನವರಿ ತಿಂಗಳಲ್ಲಿ ಸಿನಿಮಾ ಜಗತ್ತಿಗೆ ಹಾಗೂ ಚಿತ್ರಪ್ರೇಮಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ದೊರೆಯಲಿದೆ. ಸ್ಟಾರ್ ನಟರ ಚಿತ್ರಗಳು ಒಂದೊಂದು ಬಿಡುಗಡೆಗೆ ಸಜ್ಜಾಗಿದ್ದು ತೆರೆಗೆ ಬರಲಿದೆ. ಬಹಳ ತಿಂಗಳುಗಳಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡದೇ ನಿರಾಸೆಯಾಗಿದ್ದ ಪ್ರೇಕ್ಷಕರಿಗೆ ಈ ತಿಂಗಳು ಹಬ್ಬವನ್ನುಂಟು ಮಾಡಲಿದೆ.

Recommended Video

ಯಶ್ ಹಾಗೂ ವಿಜಯ್ ಅಭಿಮಾನಿಗಳಿಗೆ ಸಂತಸದ ಸುದ್ದಿ | Filmibeat Kannada

ತಮಿಳು ನಟ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿರುವ ಮಾಸ್ಟರ್ ಸಿನಿಮಾ ಜನವರಿ 13 ರಂದು ರಿಲೀಸ್ ಆಗುತ್ತಿದೆ. ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಲಾಕ್‌ಡೌನ್ ಬಳಿಕ ಥಿಯೇಟರ್ ರಿಲೀಸ್ ಕಾಣುತ್ತಿರುವ ಮೊದಲ ದೊಡ್ಡ ಸಿನಿಮಾ ಎನ್ನಬಹುದು. ಮತ್ತೊಂದೆಡೆ ಕೆಜಿಎಫ್ ಚಾಪ್ಟರ್ 2 ಟೀಸರ್ ಬರ್ತಿದೆ. ಇದೀಗ, ವಿಜಯ್ ಮತ್ತು ಯಶ್ ಅಭಿಮಾನಿಗಳು ಸಂಭ್ರಮಿಸುವ ಸುದ್ದಿಯೊಂದು ಚರ್ಚೆಯಾಗುತ್ತಿದೆ. ಮುಂದೆ ಓದಿ....

ಮಾಸ್ಟರ್ ಜೊತೆ ಕೆಜಿಎಫ್!

ಮಾಸ್ಟರ್ ಜೊತೆ ಕೆಜಿಎಫ್!

ಸದ್ಯ ಸೌತ್ ಇಂಡಿಯಾದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಪ್ರದರ್ಶನದ ವೇಳೆ ಕೆಜಿಎಫ್ ಚಾಪ್ಟರ್ 2 ಟೀಸರ್ ಟೆಲಿಕಾಸ್ಟ್ ಆಗಲಿದೆಯಂತೆ. ದಕ್ಷಿಣ ಭಾರತದ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಈ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪ. ಇದು ನಿಜವೇ ಆದರೆ ಈ ಇಬ್ಬರು ಫ್ಯಾನ್ಸ್‌ಗೂ ಇದು ಖುಷಿ ಕೊಡಲಿದೆ.

ಜನವರಿ 8ಕ್ಕೆ ಕೆಜಿಎಫ್ ಟೀಸರ್

ಜನವರಿ 8ಕ್ಕೆ ಕೆಜಿಎಫ್ ಟೀಸರ್

ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಬರ್ತಡೇ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಒಂದು ವಾರಕ್ಕೂ ಮುಂಚಯೇ ಟೀಸರ್ ಬಿಡುಗಡೆಯಾದರೂ, ಮಾಸ್ಟರ್ ಪ್ರದರ್ಶನ ಬ್ರೇಕ್ ವೇಳೆ ಕೆಜಿಎಫ್ ಟೀಸರ್ ಪ್ರದರ್ಶನ ಕಾಣಲಿದೆ ಎನ್ನುವುದು ಸಂಭ್ರಮಿಸುವ ವಿಚಾರವೇ.

ಎರಡು ಚಿತ್ರಗಳಿಗೂ ಇದು ಅನುಕೂಲ

ಎರಡು ಚಿತ್ರಗಳಿಗೂ ಇದು ಅನುಕೂಲ

ಮಾಸ್ಟರ್ ಮತ್ತು ಕೆಜಿಎಫ್ ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಎರಡು ಚಿತ್ರಗಳಿಗೂ ಇದು ಅನುಕೂಲವಾಗಲಿದೆ. ಪ್ರಚಾರದಲ್ಲಿ ಎರಡು ಚಿತ್ರಗಳು ಒಳ್ಳೆಯ ಮಾಸ್ಟರ್ ಪ್ಲಾನ್ ಮಾಡಿದೆ ಎಂಬ ಅಭಿಪ್ರಾಯವೂ ಕೇಳಿ ಬರ್ತಿದೆ.

ವಿಜಯ್-ವಿಜಯ್ ಸೇತುಪತಿ

ವಿಜಯ್-ವಿಜಯ್ ಸೇತುಪತಿ

ಮಾಸ್ಟರ್ ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ. ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ದಾಖಲೆ ನಿರ್ಮಿಸಲಿದೆ ಎಂಬ ನಿರೀಕ್ಷೆ ಇದೆ.

More from Filmibeat

English summary
Kannada Actor Yash starrer KGF Chapter 2 movie teaser will be played in theaters screening Master, all over the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X