For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

  |

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೇಲೆ ಇಡೀ ಭಾರತೀಯ ಸಿನಿಮಾರಂಗದ ಕಣ್ಣಿದೆ. ಟೀಸರ್ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಕೆಜಿಎಫ್ ಸೀಕ್ವೆಲ್ ಯಾವಾಗ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಪ್ರಸ್ತುತ, ಕನ್ನಡದಲ್ಲಿ ಸಾಲುಗಟ್ಟಿ ನಿಂತಿದ್ದ ಸ್ಟಾರ್ ನಟರ ಚಿತ್ರಗಳೆಲ್ಲವೂ ಬಿಡುಗಡೆ ದಿನಾಂಕ ಘೋಷಿಸಿದೆ.

  ರಾಬರ್ಟ್, ಯುವರತ್ನ, ಪೊಗರು, ಕೋಟಿಗೊಬ್ಬ 3, ಸಲಗ, ಭಜರಂಗಿ 2 ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳವರೆಗೂ ಈ ಸ್ಟಾರ್ ನಟರ ಸಿನಿಮಾಗಳೇ ಚಿತ್ರಮಂದಿರ ಆವರಿಸಿಕೊಳ್ಳಲಿದೆ. ಹಾಗಾದ್ರೆ, ಕೆಜಿಎಫ್ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಟಾಲಿವುಡ್‌ನಲ್ಲಿ ಕೆಜಿಎಫ್ ರಿಲೀಸ್ ದಿನಾಂಕ ವೈರಲ್ ಆಗಿದೆ. ಮುಂದೆ ಓದಿ...

  ಮೇ ಕೊನೆಯಲ್ಲಿ ಕೆಜಿಎಫ್ ರಿಲೀಸ್?

  ಮೇ ಕೊನೆಯಲ್ಲಿ ಕೆಜಿಎಫ್ ರಿಲೀಸ್?

  'ತೆಲುಗು 360.ಕಾಮ್' ಎಂಬ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೇ ಕೊನೆಯ ವಾರದಲ್ಲಿ ತೆರೆಗೆ ಬರಲಿದೆಯಂತೆ. ಮೇ 30ಕ್ಕೆ ವರ್ಲ್ಡ್ ವೈಡ್ ಚಾಪ್ಟರ್ 2 ಬಿಡುಗಡೆಯಾಗಲಿದೆ ಎಂದು ಸುದ್ದಿ ವರದಿ ಮಾಡಿದೆ.

  ಭಾರಿ ಬೇಡಿಕೆ: ಗಗನ ಮುಟ್ಟಿದ ಕೆಜಿಎಫ್ 2 ತೆಲುಗು ರೈಟ್ಸ್ ಬೆಲೆ!

  ವಿತರಕರ ಜೊತೆ ಚರ್ಚೆ ಆಗಿದೆ!

  ವಿತರಕರ ಜೊತೆ ಚರ್ಚೆ ಆಗಿದೆ!

  ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಬಗ್ಗೆ ಆಂಧ್ರ ಮತ್ತು ತೆಲಂಗಾಣ ವಿತರಕರಿಗೆ ಮಾಹಿತಿ ರವಾನೆಯಾಗಿದೆ ಎನ್ನಲಾಗಿದೆ. ತೆಲುಗಿನಲ್ಲಿ ಕೆಜಿಎಫ್ ಚಿತ್ರವನ್ನು ಸಾಯಿ ಕೋರ್ರಪತಿ ರಿಲೀಸ್ ಮಾಡಲಿದ್ದು, ಈ ಸಂಬಂಧ ಎಲ್ಲ ಸೆಂಟರ್‌ನ ವಿತರಕರ ಜೊತೆ ಚರ್ಚೆ ನಡೆಸಿದ್ದಾರಂತೆ.

  ಭಾರಿ ಬೆಲೆಗೆ ತೆಲುಗು ರೈಟ್ಸ್ ಮಾರಾಟ!

  ಭಾರಿ ಬೆಲೆಗೆ ತೆಲುಗು ರೈಟ್ಸ್ ಮಾರಾಟ!

  ತೆಲುಗಿನ ಮಾಧ್ಯಮಗಳು ವರದಿ ಮಾಡಿರುವಂತೆ ಕೆಜಿಎಫ್ ಸಿನಿಮಾದ ತೆಲುಗು ವರ್ಷನ್ ವಿತರಣೆ ಹಕ್ಕು ಸುಮಾರು 60 ಕೋಟಿ ಬೆಲೆಗೆ ಮಾರಾಟವಾಗಿದೆಯಂತೆ. ಮೊದಲ ಚಾಪ್ಟರ್ ಗೆ ಹೋಲಿಸಿಕೊಂಡರೆ ಎರಡನೇ ಚಾಪ್ಟರ್ ಮೇಲೆ ತೆಲುಗು ರಾಜ್ಯಗಳಲ್ಲಿ ಹೆಚ್ಚು ಇರೀಕ್ಷೆ ಇದೆ.

  ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!

  ಚಾಪ್ಟರ್ 1ಕ್ಕೆ 5 ಕೋಟಿ ನೀಡಲಾಗಿತ್ತು

  ಚಾಪ್ಟರ್ 1ಕ್ಕೆ 5 ಕೋಟಿ ನೀಡಲಾಗಿತ್ತು

  ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದಾಗ ತೆಲುಗಿನಲ್ಲಿ ಕೇವಲ 5 ಕೋಟಿ ಖರೀದಿ ಮಾಡಿದ್ದರು. ಮೊದಲ ಭಾಗದ ಸಕ್ಸಸ್ ಹಾಗೂ ಎರಡನೇ ಭಾಗದ ನಿರೀಕ್ಷೆ ನೋಡಿದ್ಮೇಲೆ 60 ಕೋಟಿಯಷ್ಟು ಬೇಡಿಕೆ ಹೆಚ್ಚಿರುವುದು ನಿಜಕ್ಕೂ ಅಚ್ಚರಿ ಬೆಳವಣಿಗೆ.

  ಶೂಟಿಂಗ್ ಕಂಪ್ಲೀಟ್

  ಶೂಟಿಂಗ್ ಕಂಪ್ಲೀಟ್

  ಕೆಜಿಎಫ್ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಯಶ್, ಸಂಜಯ್ ದತ್ ಅವರ ಭಾಗ ಚಿತ್ರೀಕರಣ ಬಹಳ ರೋಚಕವಾಗಿ ಮೂಡಿ ಬಂದಿದೆ ಎನ್ನಲಾಗಿದೆ. ಕ್ಲೈಮ್ಯಾಕ್ಸ್ ದೃಶ್ಯವೊಂದಕ್ಕೆ ಸುಮಾರು 12 ಕೋಟಿ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  English summary
  Rocking Star Yash starrer KGF Chapter 2 will hit the screens on May 30th in all the Indian languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X