ಪ್ರಭಾಸ್ ಹುಟ್ಟುಹಬ್ಬಕ್ಕೆ ಭರ್ಜರಿ ಸುದ್ದಿ: ಕನ್ನಡಿಗರಿಗೂ ಸರ್ಪ್ರೈಸ್!
'ಬಾಹುಬಲಿ' ನಂತರ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ಪ್ರಭಾಸ್ ಕುರಿತು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಹೆಚ್ಚಿದೆ. ಪ್ರಭಾಸ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿದ್ದಾರೆ ಅಂದ್ರೆ ಆ ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಾ ಇರುತ್ತಾರೆ.
ಪ್ರಭಾಸ್ ಈಗಾಗಲೇ 'ರಾಧೇ ಶ್ಯಾಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ತೆರೆಕಾಣುವ ಮೊದಲೇ ಆದಿಪುರುಷ್ ಎಂಬ ಪೌರಾಣಿಕ ಚಿತ್ರ ಘೋಷಣೆಯಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 500 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರ ಬಾಹುಬಲಿಗಿಂತ ದೊಡ್ಡ ಪ್ರಾಜೆಕ್ಟ್ ಆಗಲಿದೆ ಎಂಬ ಚರ್ಚೆ ಇಂಡಸ್ಟ್ರಿಯಲ್ಲಿ ಶುರುವಾಗಿದೆ.
ಈ ನಡುವೆ ದೀಪಿಕಾ ಪಡುಕೋಣೆ ಜೊತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೀಗೆ, ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಭಾಸ್ ಕುರಿತು ಈಗ ಮತ್ತೊಂದು ಭರ್ಜರಿ ಸುದ್ದಿ ಕೇಳಿ ಬರುತ್ತಿದೆ. ಮುಂದೆ ಓದಿ....

ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಿನಿಮಾ
'ಕೆಜಿಎಫ್ ಚಾಪ್ಟರ್ 1' ಚಿತ್ರದ ಮೂಲಕ ಇಡೀ ಭಾರತ ಚಿತ್ರರಂಗದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ಜೊತೆ ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದೆ. ಈ ಕುರಿತು ಪ್ರಭಾಸ್ ಹುಟ್ಟುಹಬ್ಬದಂದು ಅಧಿಕೃತ ಘೋಷಣೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಚಾಪ್ಟರ್ 2 ನಂತರ ಯಾವುದು?
ಚಾಪ್ಟರ್ 1 ಹಿಟ್ ಆದ್ಮೇಲೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾಡುತ್ತಿರುವ ಪ್ರಶಾಂತ್ ನೀಲ್, ಇದುವರೆಗೂ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಯ್ತು. ಆದ್ರೆ ಆ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಈಗ ಪ್ರಭಾಸ್ ಜೊತೆ ಸಿನಿಮಾ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಪ್ರಭಾಸ್ ಬರ್ತಡೇ ದಿನ ನೋಡಬೇಕಿದೆ.

ನಾಗ್ ಅಶ್ವಿನ್ ಚಿತ್ರದಲ್ಲಿ ಪ್ರಭಾಸ್!
ಆದಿ ಪುರುಷ್ ಚಿತ್ರದ ಘೋಷಣೆಯಾದ ಬಳಿಕ ಪ್ರಭಾಸ್ ಇನ್ನೊಂದು ಚಿತ್ರ ಘೋಷಣೆಯಾಗಿತ್ತು. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಸಹ ಸಾಥ್ ನೀಡಲಿದ್ದಾರೆ.
Recommended Video

ಪ್ರಭಾಸ್ ಬರ್ತಡೇಯಂದು ಏನೆಲ್ಲಾ ಸ್ಪೆಷಲ್?
ಅಕ್ಟೋಬರ್ 23 ರಂದು ನಟ ಪ್ರಭಾಸ್ ಅವರ ಹುಟ್ಟುಹಬ್ಬವಿದೆ. ಈ ದಿನದಂದು ಪ್ರಭಾಸ್ ಚಿತ್ರಗಳ ಬಗ್ಗೆ ಒಂದು ಸ್ಪಷ್ಟನೆ ಸಿಗಲಿದೆ. ಅದೇ ರೀತಿ ಪ್ರಭಾಸ್ ಮದುವೆ ಕುರಿತು ಸಹ ಹೆಚ್ಚಿನ ಚರ್ಚೆ ಆಗ್ತಿದೆ. ಆ ಬಗ್ಗೆಯೂ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಡಾರ್ಲಿಂಗ್ ಅಭಿಮಾನಿಗಳು.


Click it and Unblock the Notifications











