ಹೈದ್ರಾಬಾದ್‌ನಲ್ಲಿ ವಾಸಿಸಲಿದ್ದಾರೆ ಪ್ರಶಾಂತ್ ನೀಲ್: ಹೊಸ ಮನೆಗೆ ಹುಡುಕಾಟ!

'ಕೆಜಿಎಫ್ ಚಾಪ್ಟರ್ 2' ನಂತರ ನಿರ್ದೇಶಕ ಪ್ರಶಾಂತ್ ನೀಲ್ ಇಂಡಿಯಾದ ಟಾಪ್ ಡೈರೆಕ್ಟರ್‌ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ರಾಜಮೌಳಿ ನಂತರ ಈ ಮಟ್ಟದಲ್ಲಿ ಕ್ರೇಜ್ ಗಳಿಸಿದ ನಿರ್ದೇಶಕ ಅಂದರೆ ಅದು ರಾಜಮೌಳಿ. ಪ್ರಶಾಂತ್ ನೀಲ್ ಸದ್ಯ ತಮಿಳಿನ ಸ್ಟಾರ್ ಡೈರೆಕ್ಟರ್ ಶಂಕರ್‌ರನ್ನೂ ಮೀರಿಸಿದ್ದಾಗಿದೆ. ರಾಜಮೌಳಿ ನಂತರ ಪ್ರಶಾಂತ್ ನೀಲ್ ಕಡಿಮೆ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ 1000 ಕೋಟಿ ಗಳಿಕೆಗೆ ಸಾಕ್ಷಿ ಆಗಿದ್ದಾರೆ.

ಕೆಜಿಎಫ್ 2 ಚಿತ್ರದ ಬಳಿ ಪ್ರಶಾಂತ್ ನೀಲ್ ಮೇಲಿನ ನಿರೀಕ್ಷೆ ಮತ್ತು ಬೇಡಿಕೆ ಹೆಚ್ಚಾಗಿದೆ. ಭಾರತದಾದ್ಯಂತ ಪ್ರಶಾಂತ್ ನೀಲ್‌ಗೆ ಬೇಡಿಕೆ ಹೆಚ್ಚುತ್ತಿದೆ. ಕೆಜಿಎಫ್ ಬಳಿಕ ನೀಲ್ ಲೆಕ್ಕಾಚಾರ ಕೂಡ ಬದಲಾಗಿದೆ. ಇನ್ನು ಮುಂದೆ ಇವರ ಮೇಲೆ, ಮುಂಬರುವ ಇವರ ಚಿತ್ರಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಪ್ರಶಾಂತ್ ನೀಲ್ ಮುಂದಿನ ಹೆಜ್ಜೆಯನ್ನು ಎಚ್ಚೆರಿಕೆಯಿಂದ ಇಡುವುದು ಅನಿವಾರ್ಯ.

ಪ್ರಶಾಂತ್ ನೀಲ್ ಮುಂದಿನ ಸವಾಲಿಗೆ ಸಜ್ಜಾಗಿದ್ದಾರೆ. ಟಾಲಿವುಡ್‌ನಲ್ಲಿ ಧೂಳೆಬ್ಬಿಸಲು ಮುಂದಾಗಿದ್ದಾರೆ. ಈಗ ಹೈದ್ರಾಬಾದ್‌ನಲ್ಲೆ ಬೀಡು ಬಿಡಲು ಪ್ರಶಾಂತ್ ನೀಲ್ ಸಜ್ಜಾಗಿದ್ದಾರಂತೆ. ಹಾಗಾಗಿ ಹೈದ್ರಾಬಾದ್‌ನಲ್ಲಿ ಮನೆಯನ್ನೂ ಹುಡುಕುತ್ತಿದ್ದಾರಂತೆ.

ಹೈದ್ರಾಬಾದ್ ಭಾಗ್ಯನಗರದಲ್ಲಿ ಪ್ರಶಾಂತ್ ನೀಲ್ ಮನೆ!

ಹೈದ್ರಾಬಾದ್ ಭಾಗ್ಯನಗರದಲ್ಲಿ ಪ್ರಶಾಂತ್ ನೀಲ್ ಮನೆ!

ಪ್ರಶಾಂತ್ ನೀಲ್ ಮುಂದಿನ 3 ವರ್ಷ ಹೈದರಾಬಾದ್‌ನಲ್ಲಿ ಇರಬೇಕಾಗುತ್ತದೆಯಂತೆ. ಹಾಗಾಗಿಯೇ ಪ್ರಶಾಂತ್ ಭಾಗ್ಯನಗರಕ್ಕೆ ತೆರಳುವ ಯೋಜನೆ ಮಾಡಿದ್ದಾರೆ. ಹೈದ್ರಾಬಾದ್‌ನಲ್ಲಿ ಸ್ವಂತ ಮನೆಯನ್ನು ಖರೀದಿಸಲು ಓಡಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಹಲವು ಟಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡಿರುವ ಕಾರಣ ಹೈದ್ರಾಬಾದ್‌ನಲ್ಲಿ ವಾಸ ಮಾಡಲು ಪ್ರಶಾಂತ್ ನೀಲ್ ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲಿಯೇ ಪ್ರಶಾಂತ್ ನೀಲ್ ಹೈದರಾಬಾದ್‌ಗೆ ಹಾರುವ ಸಾಧ್ಯತೆ ಇದೆ.

'ಸಲಾರ್' ಚಿತ್ರದಲ್ಲಿ ಬ್ಯೂಸಿ ಇರುವ ಪ್ರಶಾಂತ್ ನೀಲ್!

'ಸಲಾರ್' ಚಿತ್ರದಲ್ಲಿ ಬ್ಯೂಸಿ ಇರುವ ಪ್ರಶಾಂತ್ ನೀಲ್!

ಕೆಜಿಎಫ್ 2 ಮುಗೀತು. ಇನ್ನೇನಿದ್ದರೂ ಪ್ರಶಾಂತ್ ನೀಲ್ ಮುಂದಿನ ಹೆಜ್ಜೆ ಸಲಾರ್ ಕಡೆಗೆ ಇರಲಿದೆ. ಪ್ರಭಾಸ್ ಜೊತೆಗೆ ಪ್ರಶಾಂತ್ ನೀಲ್ ಮಾಡುತ್ತಿರುವ 'ಸಲಾರ್' ಸಿನಿಮಾ ಈಗಾಗಲೇ ಸೆಟ್ಟೇರಿದೆ. ಚಿತ್ರದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದು ಬಿಟ್ಟಿದೆ. ಆದರೆ ಸಿನಿಮಾ ಪೂರ್ಣಗೊಳ್ಳಲು ಇನ್ನು ಸಾಕಷ್ಟು ಚಿತ್ರೀಕರಣ ಮಾಡಬೇಕಿದೆ. ಈ ಚಿತ್ರದ ಜೊತೆಗೆ ಪ್ರಶಾಂತ್ ನೀಲ್ ಇನ್ನು 3 ತೆಲುಗು ಚಿತ್ರಗಳನ್ನು ಮಾಡಲಿದ್ದಾರೆ.

ಜೂನಿಯರ್ ಎನ್‌ಟಿಆರ್‌ಗೆ ನೀಲ್ ನಿರ್ದೇಶನ!

ಜೂನಿಯರ್ ಎನ್‌ಟಿಆರ್‌ಗೆ ನೀಲ್ ನಿರ್ದೇಶನ!

ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಬಳಿಕ ಮತ್ತೊಬ್ಬ ತೆಲುಗಿನ ಸ್ಟಾರ್ ನಟನಿಗೆ ಡೈರೆಕ್ಷನ್ ಮಾಡಲಿದ್ದಾರೆ. ನಟ ಜೂನಿಯರ್ ಎನ್‌ಟಿಆರ್‌ಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಜೂ.ಎನ್‌ಟಿಆರ್ ಕಥೆಯನ್ನು ಒಪ್ಪಿದ್ದು, ಸಿನಿಮಾದ ಮಾತು ಕಥೆ ಕೂಡ ಮುಗಿದೆ. ಜೂ.ಎನ್‌ಟಿಆರ್ ಕೊರಟಾಲ ಶಿವ ಚಿತ್ರವನ್ನು ಮುಗಿಸಿ ಪ್ರಶಾಂತ್ ನೀಲ್ ಚಿತ್ರವನ್ನು ಶುರು ಮಾಡಲಿದ್ದಾರೆ.

ರಾಮ್ ಚರಣ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ!

ರಾಮ್ ಚರಣ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ!

ಜೂ.ಎನ್‌ಟಿಆರ್ ಬಳಿಕ ಪ್ರಶಾಂತ್ ನೀಲ್ ಲಿಸ್ಟ್‌ನಲ್ಲಿ ಇರುವುದು ನಟ ರಾಮ್‌ ಚರಣ್ ತೇಜ. ರಾಮ್ ಚರಣ್ ತೇಜಗೂ ಪ್ರಶಾಂತ್ ನೀಲ್ ಕಥೆಯನ್ನು ರೆಡಿ ಮಾಡಿದ್ದಾರೆ. ಈ ಹಿಂದೆ ಪ್ರಶಾಂತ್ ನೀಲ್, ರಾಮ್ ಚರಣ್ ಮತ್ತು ಚಿರಂಜೀವಿ ಫೋಟೋ ಒಂದು ವೈರಲ್ ಆಗಿತ್ತು. ಆಗಲೇ ಪ್ರಶಾಂತ್ ನೀಲ್ ರಾಮ್ ಚರಣ್‌ಗೆ ಸಿನಿಮಾ ಮಾಡುತ್ತರೆ ಎನ್ನುವ ಸುದ್ದಿ ಹೊರ ಬಂದಿದ್ದು.

ರಾಜಮೌಳಿ ನಂತರ ಮಹೇಶ್ ಬಾಬುಗೆ ಚಿತ್ರ!

ರಾಜಮೌಳಿ ನಂತರ ಮಹೇಶ್ ಬಾಬುಗೆ ಚಿತ್ರ!

ತೆಲುಗಿನ ಟಾಪ್ ಸ್ಟಾರ್ ಮಹೇಶ್ ಬಾಬುಗೂ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ. ಈ ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡಿದೆ. ಸದ್ಯ ಮಹೇಶ್ ಬಾಬು ಕೈಯಲ್ಲಿ ಸಾಲು, ಸಾಲು ಸಿನಿಮಾಗಳು ಇವೆ. 'ಸರ್ಕಾರು ವಾರಿ ಪಾಠ' ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಚಿತ್ರದಲ್ಲಿ ನಟಿಸಲಿದ್ದಾರೆ. ನಂತರ ರಾಜಮೌಳಿ ಮಹೇಶ್ ಬಾಬುಗೆ ನಿರ್ದೇಶನ ಮಾಡಲಿದ್ದಾರೆ. ರಾಜಮೌಳಿ ಚಿತ್ರ ಮುಗಿಸಿದ ನಂತರವೇ ಮಹೇಶ್ ಬಾಬುಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
KGF Director Prashanth Neel Shifting To Hyderabad For 3 Years, Finding New House
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X