ಪಾಕಿಸ್ತಾನದಲ್ಲಿ ಕೆಜಿಎಫ್ ಅಬ್ಬರ: ಮೊದಲ ಮೂರು ದಿನದಲ್ಲಿ ಕೆಜಿಎಫ್ ಗಳಿಸಿದ್ದೆಷ್ಟು?

Recommended Video

KGF Movie : ಪಾಕಿಸ್ತಾನದಲ್ಲಿ ಕೆಜಿಎಫ್ ಅಬ್ಬರ..! | Oneindia Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದ್ದ ಕೆಜಿಎಫ್ ಚಿತ್ರಕ್ಕೆ ಭಾರಿ ಯಶಸ್ಸು ಸಿಕ್ಕಿತ್ತು.

25ನೇ ದಿನ ಸಂಭ್ರಮದಲ್ಲಿರುವ ಕೆಜಿಎಫ್ ಒಟ್ಟಾರೆ ಬಾಕ್ಸ್ ಅಫೀಸ್ ಕಲೆಕ್ಷನ್ ನಲ್ಲಿ 200 ಕೋಟಿ ಕ್ಲಬ್ ಸೇರಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ನಡುವೆ ಜಗತ್ತಿನಾದ್ಯಂತ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲೂ ಪ್ರದರ್ಶನ ಕಂಡಿದೆ. ಫೆಬ್ರವರಿ 11 ರಂದು ಪಾಕ್ ದೇಶದಲ್ಲಿ ಸ್ಕ್ರೀನಿಂಗ್ ಆದ ಕೆಜಿಎಫ್ ಗೆ ಅಲ್ಲಿಯ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಗಿದ್ರೆ, ಕೆಜಿಎಫ್ ಚಿತ್ರ ಪಾಕ್ ದೇಶದಲ್ಲಿ ಎಷ್ಟು ಗಳಿಸಿದೆ? ಮುಂದೆ ಓದಿ.....

ಮೊದಲ ದಿನ ಕೆಜಿಎಫ್ ಗಳಿಸಿದ್ದೆಷ್ಟು?

ಮೊದಲ ದಿನ ಕೆಜಿಎಫ್ ಗಳಿಸಿದ್ದೆಷ್ಟು?

ಹಿಂದಿ ಭಾಷೆಯಲ್ಲಿ ಡಬ್ ಆಗಿದ್ದ ಕೆಜಿಎಫ್ ಸಿನಿಮಾ ಕಳೆದ ವಾರ ಪಾಕಿಸ್ತಾನದ ಲಾಹೋರ್, ಇಸ್ಲಮಾಬಾದ್ ನ ಹಲವು ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಸದ್ಯದ ಮಾಹಿತಿ ಪ್ರಕಾರ, ಕೆಜಿಎಫ್ ಸಿನಿಮಾ ಮೊದಲ ದಿನ ಪಾಕಿಸ್ತಾನದಲ್ಲಿ 81 ಲಕ್ಷ ಗಳಿಸಿದೆ ಎನ್ನಲಾಗಿದೆ.

ಮೊದಲ ಮೂರು ದಿನಕ್ಕೆ ದಾಖಲೆ.!

ಮೊದಲ ಮೂರು ದಿನಕ್ಕೆ ದಾಖಲೆ.!

ಮೊದಲ ದಿನ 81 ಲಕ್ಷ ಗಳಿಸಿದ್ದ ಕೆಜಿಎಫ್ ಸಿನಿಮಾ ಎರಡನೇ ದಿನ 1.06 ಕೋಟಿ ಹಾಗೂ ಮೂರನೇ ದಿನ 1.45 ಕೋಟಿ ಗಳಿಕೆ ಕಂಡಿದೆ. ಒಟ್ಟಾರೆ ಮೊದಲ ಮೂರು ದಿನಕ್ಕೆ 2.75 ರಿಂದ 3 ಕೋಟಿ ಬಾಚಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕ್ ದೇಶದಲ್ಲಿ ಮೊದಲ ಕನ್ನಡ ಸಿನಿಮಾ

ಪಾಕ್ ದೇಶದಲ್ಲಿ ಮೊದಲ ಕನ್ನಡ ಸಿನಿಮಾ

ಇಲ್ಲಿಯವರೆಗೂ ಪಾಕಿಸ್ತಾನದಲ್ಲಿ ಯಾವುದೇ ಕನ್ನಡ ಸಿನಿಮಾ ತೆರೆಕಂಡಿಲ್ಲ. ಇದೇ ಮೊದಲ ಸಲ ಕನ್ನಡ ಚಿತ್ರವೊಂದು ಪಾಕ್ ನಾಡಿನಲ್ಲಿ ಪ್ರದರ್ಶನವಾಗುವ ಮೂಲಕ ಹೊಸ ಬದಲಾವಣೆ ತಂದಿದೆ. ಕನ್ನಡ ಸಿನಿಮಾವೊಂದು ಪರರಾಜ್ಯಗಳಲ್ಲಿ ಮಾತ್ರವಲ್ಲ ಈಗ ಪಾಕಿಸ್ತಾನದಲ್ಲೂ ಅಬ್ಬರಿಸುತ್ತಿರುವುದು ವಿಶೇಷ.

ಹಿಂದಿ ಗಳಿಕೆ ಎಷ್ಟು?

ಹಿಂದಿ ಗಳಿಕೆ ಎಷ್ಟು?

ಒಟ್ಟಾರೆ ಕಲೆಕ್ಷನ್ ನಲ್ಲಿ 200 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಸಿನಿಮಾ, ಹಿಂದಿ ವರ್ಷನ್ ನಲ್ಲಿ 42 ಕೋಟಿ ಗಳಿಸಿದೆ. ಮೊದಲ ವಾರ 21.45 ಕೋಟಿ, ಎರಡನೇ ವಾರ 11.25 ಕೋಟಿ, ಮೂರನೇ ವಾರ 7.44 ಕೋಟಿ ಹಾಗೂ ನಾಲ್ಕನೇ ವಾರ 1.61 ಕೋಟಿ ಗಳಿಕೆ ಕಂಡಿದೆ.

More from Filmibeat

English summary
Kannada actor Yash starrer KGF movie got a commercial release in Pakistan, which comes as a boost along with its commercial success at the Indian box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X