ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!

Recommended Video

KGF Movie : ಕರ್ನಾಟಕದಲ್ಲಿ ಬಾಹುಬಲಿ 2 ದಾಖಲೆಯನ್ನ ಅಳಿಸಿ ಹಾಕಿದ ಯಶ್ ಕೆಜಿಎಫ್ | FILMIBEAT KANNADA

ಭಾರತೀಯ ಚಿತ್ರರಂಗದಲ್ಲಿ 'ಬಾಹುಬಲಿ-2' ವಿಶೇಷ ದಾಖಲೆ. ಸಿನಿಮಾ ಜಗತ್ತಿನ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಎರಡನೇ ಸಿನಿಮಾ. ಮೊದಲ ಸಿನಿಮಾ ಅಮೀರ್ ಖಾನ್ ಅಭಿನಯದ 'ದಂಗಲ್'.

'ದಂಗಲ್' ಸಿನಿಮಾ 2100 ಕೋಟಿ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈ ದಾಖಲೆಯ ಸನಿಹದಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ದಿ ಕನ್ ಕ್ಲೂಷನ್ ಸಿನಿಮಾ ಇದೆ. ಅಂದ್ರೆ, 'ಬಾಹುಬಲಿ-2' ಚಿತ್ರದ ಒಟ್ಟಾರೆ ಕಲೆಕ್ಷನ್ 1810 ಕೋಟಿ.

ಇದರಲ್ಲಿ ಕರ್ನಾಟಕದಿಂದ ಬಾಹುಬಲಿ ಸಿನಿಮಾ ಗಳಿಸಿದ್ದ ಹಣವೆಷ್ಟು ಎಂಬುದು ಸದ್ಯದ ಕುತೂಹಲ. ಈ ಕುತೂಹಲಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್. ಹೌದು, ಬಾಹುಬಲಿ ಚಿತ್ರದ ಕರ್ನಾಟಕ ಕಲೆಕ್ಷನ್ ಬ್ರೇಕ್ ಮಾಡಿ ಮೊದಲ ಸ್ಥಾನಕ್ಕೇರಿದೆಯಂತೆ ಕೆಜಿಎಫ್. ಮುಂದೆ ಓದಿ......

ಬಾಹುಬಲಿ ಕರ್ನಾಟಕ ಕಲೆಕ್ಷನ್

ಬಾಹುಬಲಿ ಕರ್ನಾಟಕ ಕಲೆಕ್ಷನ್

2017 ಏಪ್ರಿಲ್ 17 ರಂದು ತೆರೆಕಂಡಿದ್ದ 'ಬಾಹುಬಲಿ ದಿ ಕನ್ ಕ್ಲೂಷನ್' ಸಿನಿಮಾ ಕರ್ನಾಟಕ ಬಾಕ್ಸ್ ಅಫೀಸ್ ನಲ್ಲಿ 129 ಕೋಟಿ ಬಾಚಿಕೊಂಡಿದೆಯಂತೆ. ಸದ್ಯ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಇದಾಗಿದೆ. ಈ ಚಿತ್ರದ ದಾಖಲೆ ಈಗ ಉಡೀಸ್ ಆಗುತ್ತಿದೆಯಂತೆ.

ನೂರು ಕೋಟಿ ಗಳಿಸಿದ ಕೆಜಿಎಫ್

ನೂರು ಕೋಟಿ ಗಳಿಸಿದ ಕೆಜಿಎಫ್

ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ 129 ಕೋಟಿ ದಾಖಲೆ ಹೊಂದಿರುವ ಬಾಹುಬಲಿ ಚಿತ್ರವನ್ನ ಕೆಜಿಎಫ್ ಹಿಂದಿಕ್ಕಲಿದೆಯಂತೆ. ಹೌದು, ಸದ್ಯದ ವರದಿ ಪ್ರಕಾರ ಕೆಜಿಎಫ್ ಸಿನಿಮಾ ಕರ್ನಾಟಕದಲ್ಲಿ 121 ಕೋಟಿ ಗಳಿಕೆ ಕಂಡಿದೆಯಂತೆ. ಅಲ್ಲಿಗೆ ಬಾಹುಬಲಿ ಚಿತ್ರಕ್ಕೂ ಕೆಜಿಎಫ್ ಚಿತ್ರಕ್ಕೂ ಇರುವ ವ್ಯತ್ಯಾಸ ಕೇವಲ 8 ಕೋಟಿ.

ಕೆಜಿಎಫ್ ನಾನ್ ಸ್ಟಾಪ್ ಕಲೆಕ್ಷನ್

ಕೆಜಿಎಫ್ ನಾನ್ ಸ್ಟಾಪ್ ಕಲೆಕ್ಷನ್

ಅಂದ್ಹಾಗೆ, ಐದು ಭಾಷೆಯಲ್ಲಿ ತೆರೆಕಂಡಿರುವ ಕೆಜಿಎಫ್ ಸಿನಿಮಾ ಒಟ್ಟಾರೆ 200 ಕೋಟಿ ಗಳಿಸಿದೆ ಎಂಬ ಮಾತಿದೆ. ಹಿಂದಿ ವರ್ಷನ್ ನಲ್ಲಿ 42 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಕೆಜಿಎಫ್ ಅಬ್ಬರ ನೋಡ್ತಿದ್ರೆ 250 ಕೋಟಿ ಕ್ಲಬ್ ಗೆ ಸಲೀಸಾಗಿ ಸೇರುವ ಸಾಧ್ಯತೆ ಇದೆ.

ವಿದೇಶಗಳಲ್ಲೂ ಮಿಂಚಿದ ಕೆಜಿಎಫ್

ವಿದೇಶಗಳಲ್ಲೂ ಮಿಂಚಿದ ಕೆಜಿಎಫ್

200 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಸಿನಿಮಾ ಒಟ್ಟಾರೆ 219 ಕೋಟಿ ಗಳಿಸಿದೆ ಎನ್ನಲಾಗಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಿಂದಲೂ ಒಳ್ಳೆ ಬಿಸಿನೆಸ್ ಮಾಡಿದೆಯಂತೆ. ಅದರಲ್ಲೂ ಪಾಕಿಸ್ತಾನದಲ್ಲಿ ಕೆಜಿಎಫ್ ಸಿನಿಮಾ ಸುಮಾರು 3 ಕೋಟಿ ಬಾಚಿದೆಯಂತೆ.

ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡುತ್ತೆ ಚಾಪ್ಟರ್ 2

ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡುತ್ತೆ ಚಾಪ್ಟರ್ 2

ಹಾಗ್ನೋಡಿದ್ರೆ, ಬಾಹುಬಲಿ ದಿ ಬಿಗಿನಿಂಗ್ ಸಿನಿಮಾದ ಯಶಸ್ಸು ಪಾರ್ಟ್ 2 ಮೇಲೆ ಭಾರಿ ನಿರಿಕ್ಷೆ ಹುಟ್ಟಿಸಿತ್ತು. ಅದರಂತೆ ಸಿನಿಮಾ ಕೂಡ ಮೂಡಿ ಬಂದಿತ್ತು. ಅದರ ಪರಿಣಾಮ ಮೊದಲ ಭಾಗಕ್ಕಿಂತ ಎರಡನೇ ಭಾಗ ಹೆಚ್ಚು ಗಳಿಕೆ ಕಂಡಿತ್ತು. ಈಗ ಕೆಜಿಎಫ್ ವಿಚಾರದಲ್ಲೂ ಅದೇ ಆಗಬಹುದು. ಮೊದಲ ಭಾಗದ ಯಶಸ್ಸು ಎರಡನೇ ಭಾಗಕ್ಕೆ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ. ಆ ಸಿನಿಮಾನೂ ಹಿಟ್ ಆದ್ರೆ ಈಗ ಕೆಜಿಎಫ್ ಗಳಿಸಿರುವ ಕಲೆಕ್ಷನ್ ಕೂಡ ಧೂಳಿಪಟ ಆಗಬಹುದು.

More from Filmibeat

English summary
With earning of over Rs 120 crore gross at the Karnataka box office, Yash starrer KGF: Chapter 1 is all set to beat the mighty Baahubali 2: The Conclusion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X