ದೂರಾಯ್ತು ಮತ್ತೊಂದು ಜೋಡಿ, ಬಾಲಿವುಡ್‌ನಲ್ಲಿ ಈಗ ಬ್ರೇಕಪ್ ಕಾಲ
ಬಾಲಿವುಡ್ ನಲ್ಲಿ ಡೇಟಿಂಗ್ ಸುದ್ದಿಗಳು ತೀರಾ ಸಾಮಾನ್ಯ. ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ನಟ-ನಟಿಯರ ನಡುವೆ ಲವ್ವಿ-ಡವ್ವಿಗಳು ಬಾಲಿವುಡ್‌ನಲ್ಲಿ ತುಸು ಹೆಚ್ಚು.
ಆದರೆ ಇತ್ತೀಚೆಗೇಕೋ ಬಾಲಿವುಡ್‌ನಲ್ಲಿ ಬ್ರೇಕ್ ಅಪ್ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅದರಲ್ಲಿಯೂ ಸ್ಟಾರ್ ನಟ-ನಟಿಯರ ಜೋಡಿಯೇ ಬ್ರೇಕ್ ಅಪ್ ಮಾಡಿಕೊಂಡ ಸುದ್ದಿಗಳು ಕೇಳಿ ಬರುತ್ತಿವೆ.
ಬಹುಕಾಲದಿಂದ ಗೆಳೆಯ-ಗೆಳತಿಯರಾಗಿದ್ದ ಇಶಾನ್ ಕಟ್ಟರ್ ಹಾಗೂ ಅನನ್ಯಾ ಪಾಂಡೆ ತಮ್ಮ ಸಂಬಂಧ ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕೇಳಿ ಬಂದಿತ್ತು. ಈಗ ಮತ್ತೊಂದು ತಾರಾ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿರುವ ಸುದ್ದಿ ಕೇಳಿ ಬರುತ್ತಿದೆ.

ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಬಹುಸಮಯದಿಂದ ಡೇಟಿಂಗ್‌ನಲ್ಲಿದ್ದರು. ಇಬ್ಬರೂ ಪರಸ್ಪರ ಪ್ರೀತಿಯಲ್ಲಿರುವ ವಿಷಯ ಖಾತ್ರಿಯಾಗಿತ್ತು. ಕೆಲವು ಕಾರ್ಯಕ್ರಮಗಳಲ್ಲಿ ನೇರವಾಗಿಯೇ ಈ ಬಗ್ಗೆ ಮಾತನಾಡಿದ್ದರು ಸಹ. ಟಾಕ್ ಶೋಗಳಲ್ಲಿ ಸಿದ್ಧಾರ್ಥ್ ಹೆಸರು ಹೇಳಿ ಕಿಯಾರಾ ಅಡ್ವಾಣಿಯ ಕಾಲೆಳೆಯಲಾಗಿತ್ತು. ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದ್ದ ಈ ಜೋಡಿ ಇದೀಗ ಬೇರಾಗಿದೆ.
ಈ ಜೋಡಿ ಬೇರಾಗಿರುವದು ಬಹುತೇಕ ಖಾತ್ರಿಯಾಗಿದ್ದು, ಆದರೆ ಯಾವ ಕಾರಣಕ್ಕೆ ಈ ಜೋಡಿ ಬೇರಾಗಿದೆ ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಈಗ ಹರಿದಾಡುತ್ತಿರುವ ಗಾಳಿ ಸುದ್ದಿ ಪ್ರಕಾರ ಕಿಯಾರಾ ಅವರೇ ಬ್ರೇಕ್ ಅಪ್‌ಗೆ ಕಾರಣ ಎನ್ನಲಾಗುತ್ತಿದೆ.
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಒಟ್ಟಿಗೆ 'ಷಮ್ಶೇರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಲಿದ್ದರು ಆದರೆ ಈ ನಡುವೆ ಇಬ್ಬರೂ ಬೇರಾಗಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ಹಲವು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಟ್ಟಾರೆ ಬಾಲಿವುಡ್‌ನ ಕ್ಯೂಟ್ ಜೋಡಿಯೊಂದು ಬೇರಾಗಿದ್ದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications










